ಮೈಸೂರು, ಫೆ.6-ನ್ಯಾಯಾಲಯದ ಆವರಣ ದಲ್ಲೇ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಪ್ರಕರಣ ಮೈಸೂರಿನಲ್ಲಿ ಬುಧವಾರ ನಡೆದಿದೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರುವ ಪ್ರಕರಣವೊಂದರ ಆರೋಪಿ ಹಾಸೈನ್‍ಬಾಗ್ ಎಂಬಾತನ ಮೇಲೆ ಅದೇ ಠಾಣೆಯ ಮತ್ತೊಂದು ಪ್ರಕರಣದ ಆರೋಪಿ ಶಹಬಾಜ್ ಅಲಿಯಾಸ್ ಟೈಗರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ಹಾಸೈನ್‍ಬಾಗ್ ವಿಚಾರಣೆಗೆ ಹಾಜ ರಾಗಲು ಚಾಮರಾಜಪುರಂನಲ್ಲಿರುವ ನ್ಯಾಯಾ ಲಯಕ್ಕೆ ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದ. ಈ ವೇಳೆ ಶೂರಿಟಿ ಪಡೆಯುವಂತೆ ನ್ಯಾಯಾಧೀಶರು ಸೂಚಿಸಿದ ನಂತರ ಆತ ನ್ಯಾಯಾಲಯದ ಆವರಣ ದಲ್ಲಿರುವ ಟೀ ಅಂಗಡಿ ಮುಂದೆ ನಿಂತು ಟೀ ಕುಡಿಯು ತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಶಹಬಾಜ್ ಅಲಿಯಾಸ್ ಟೈಗರ್ ಇತರ ನಾಲ್ವರೊಂದಿಗೆ ಅಲ್ಲಿಗೆ ಬಂದಿದ್ದು, ಏಕಾಏಕಿ ಮಾರಕಾಸ್ತ್ರದಿಂದ ಹಾಸೈನ್ ಬಾಗ್‍ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸ ಲಾಗಿದೆ. ಹಲ್ಲೆ ನಡೆಸಿದ ಶಹಬಾಜ್ ಹಲವಾರು ಪ್ರಕ ರಣಗಳಲ್ಲಿ ಆರೋಪಿಯಾಗಿದ್ದು, ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ 4 ತಿಂಗಳು ಜೈಲಿನಲ್ಲಿದ್ದು, ಕಳೆದ 1 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಧೀಶರು, ನೂರಾರು ವಕೀಲರು, ಪೊಲೀ ಸರು ಹಾಗೂ ಕಕ್ಷಿದಾರರಿಂದ ಸದಾ ತುಂಬಿ ತುಳು ಕುವ ನ್ಯಾಯಾಲಯದ ಆವರಣದಲ್ಲಿ ಹಾಡಹಗಲೇ ರಾಜಾರೋಷವಾಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ರುವ ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿ ದ್ದಾರೆ. ನ್ಯಾಯಾಲಯದ ಆವರಣದಲ್ಲೇ ರಕ್ಷಣೆ ಇಲ್ಲದ ಪರಿಸ್ಥಿತಿ ಮೈಸೂರು ನಗರದಲ್ಲಿ ನಿರ್ಮಾಣವಾಗಿದೆ ಎಂದರೆ ಇನ್ನು ನಿರ್ಜನ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಯ ಗತಿ ಏನು ಎಂದು ಸಾರ್ವಜನಿಕರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.