ನಾಲ್ವರು ಸಾಧಕ ಶಿಕ್ಷಕರಿಗೆ `ಶಿಕ್ಷಕ ಸೇವಾರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ನಾಲ್ವರು ಸಾಧಕ ಶಿಕ್ಷಕರಿಗೆ `ಶಿಕ್ಷಕ ಸೇವಾರತ್ನ’ ಪ್ರಶಸ್ತಿ ಪ್ರದಾನ

September 10, 2019

ಮೈಸೂರು, ಸೆ.9(ಎಸ್‍ಪಿಎನ್)- ಸ್ನೇಹ ಸಿಂಚನಾ ಟ್ರಸ್ಟ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಶಿಕ್ಷಕರಿಗೆ `ಶಿಕ್ಷಕ ಸೇವಾ ರತ್ನ ಪ್ರಶಸ್ತಿ’ಯನ್ನು ನೀಡಿ ಭಾನುವಾರ ಗೌರವಿಸಲಾಯಿತು. ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಾಧಕ ಶಿಕ್ಷಕರಾದ ಕೆ.ಟಿ. ಶ್ರೀಮತಿ, ಎಲ್. ನರಸಮ್ಮ, ಟಿ.ಸತೀಶ್‍ಜವರೇಗೌಡ, ಬಿ.ರಾಜೇಶ್ ಅವರಿಗೆ ಶಿಕ್ಷಕ ಸೇವಾರತ್ನ ಪ್ರಶಸ್ತಿಯನ್ನು ವಿಪ್ರಮುಖಂಡ ಜಿ.ಆರ್.ನಟರಾಜ ಜೋಯಿಸ್, ಮುಕ್ತಕ ಸಾಹಿತ್ಯ ಅಕಾಡೆಮಿಯ ಎಸ್.ರಾಮಪ್ರಸಾದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮ.ನ.ಲತಾಮೋಹನ್ ಸಮ್ಮುಖದಲ್ಲಿ ಗೌರವಿಸÀಲಾಯಿತು.

ಮುಕ್ತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್ ಮಾತನಾಡಿ, ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಕಾಣಿಕೆ ದೊಡ್ಡದು. ಅದರಲ್ಲೂ ಸರ್ಕಾರಿ ಶಾಲೆ ಶಿಕ್ಷಕರು ಅನೇಕ ಗೊಂದಲಗಳ ನಡುವೆಯೂ ಬಡ ಮಕ್ಕಳಿಗೆ ಅಕ್ಷರ ಕಲಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

Translate »