ವಿವಾಹ ನಿರಾಕರಣೆ ಮಾಡಿದವರಲ್ಲ
ಮೈಸೂರು

ವಿವಾಹ ನಿರಾಕರಣೆ ಮಾಡಿದವರಲ್ಲ

September 10, 2019

ಮೈಸೂರು,ಸೆ.9(ಆರ್‍ಕೆಬಿ)-ಅಕ್ಕಮಹಾದೇವಿ ದಾಂಪತ್ಯ ದೊಳಗಿರುವ ಅಧಿಕಾರ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದರೆ ಹೊರತು ವಿವಾಹ ನಿರಾಕರಣೆ ಮಾಡಿದವರಲ್ಲ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ ತಿಳಿಸಿದರು.

ಮೈಸೂರು ಕರಾಮುವಿ ಅಧ್ಯಯನ ಮತ್ತು ಸಂಶೋ ಧನಾ ಪೀಠದ ವತಿಯಿಂದ ಕರಾಮುವಿ ಕಾವೇರಿ ಸಭಾಂ ಗಣದಲ್ಲಿ ಏರ್ಪಡಿಸಿದ್ದ `ವರ್ತಮಾನಕ್ಕೂ ಸಲ್ಲುವ ಅಕ್ಕನ ವಚನಗಳು’ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಕ್ತಿ ಪಂಥದ ಮಾರ್ಗದಲ್ಲಿ ಸಾಗಿದ ಅಕ್ಕಮಹಾದೇವಿ ವಿವಾಹದ ನಿರಾಕರಣೆ ಮಾಡಿರ ಲಿಲ್ಲ. ದಾಂಪತ್ಯದ ಒಳಗಡೆ ಇರುವ ಅಧಿಕಾರ ಸಂಬಂಧ ಬಗ್ಗೆ ವಿರೋಧ ಎತ್ತಿದ್ದರು. ಆರೋಗ್ಯಕಾರಿ ಸಂಬಂಧ ಕುರಿತು ಮಾತನಾಡಿದ್ದರು. ಆದರೆ ಅದನ್ನು ಸಮಾಜದಲ್ಲಿ ಅನೇಕ ಜನರು ಮರೆಮಾಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯಕ ವಿಮರ್ಶೆಗೆ ಒಡ್ಡಿದಾಗ ನೋಡುವ ಕ್ರಮ ಬೇರೆ ಇದೆ ಅನ್ನಿಸಿದೆ. ಪ್ರಾಥಮಿಕ ಹಂತದಿಂದ ಸ್ನಾತಕದವರೆಗೆ ಶೈಕ್ಷಣಿಕ ಶಿಸ್ತಿನ ಒತ್ತು ಪ್ರಧಾನವಾಗಿರುತ್ತದೆ. ವಚನ ಎಂದ ರೇನು? ಅದರ ಹಿನ್ನೆಲೆ ಏನು? ಅದರ ಕಠಿಣ ಪದಗಳೇನು? ಎಂದು ಸಂಕ್ಷಿಪ್ತವಾಗಿ ವಿವÀರಿಸಿ, ನಮ್ಮ ಕೆಲಸ ಮುಗಿಯಿತು ಅಂತ ಸುಮ್ಮನಿದ್ದು, ಅವರ ಲೋಕದೃಷ್ಟಿಯನ್ನು ಭೂತಕಾಲ ದಲ್ಲಿಟ್ಟು ನೋಡುತ್ತೇವೆಯೇ ಹೊರತು ವರ್ತಮಾನಕ್ಕೆ ಅನ್ವಯಿಸಿ ನೋಡುವ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿ ದರು. ಕರಾಮುವಿ ಕುಲಪತಿ ಪ್ರೊ.ವಿದ್ಯಾ ಶಂಕರ್, ಪರೀ ಕ್ಷಾಂಗ ಕುಲಸಚಿವ ಪ್ರೊ.ಎ.ರಂಗಸ್ವಾಮಿ, ಎಸ್.ತಿಪ್ಪೇಸ್ವಾಮಿ, ಪ್ರೊ.ಡಿ.ಟಿ.ಬಸವರಾಜು, ಡಾ.ಖಾದರ್ ಪಾಷಾ ಇದ್ದರು.

Translate »