ಮೈಸೂರು,ಸೆ.9-ಸರ್ಕಾರಿ ಪ್ರೌಢ ಶಾಲೆಯ 2018-19ನÉ ಸಾಲಿನ ಸಹ ಶಿಕ್ಷಕರ ತತ್ಸಮಾನ ವೃಂದದ ಶಿಕ್ಷಕರ ವರ್ಗಾವಣೆ ಸಂಬಂಧ ಮೈಸೂರು ವಿಭಾ ಗದ ಘಟಕದೊಳಗಿನ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹಾಗೂ ವಿಶೇಷ ಶಿಕ್ಷಕರ ಕಡ್ಡಾಯ ವರ್ಗಾ ವಣೆಗಳ ಅಂತಿಮ ಆದ್ಯತಾ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ (www. schooleducation. kar.nic.in) ಪ್ರಕಟಿಸಲಾಗಿದೆ. ಸದರಿ ಪಟ್ಟಿಯಲ್ಲಿನ ಶಿಕ್ಷಕರಿಗೆ ಸ್ಥಳ ಆಯ್ಕೆಗಾಗಿ, ವಿಭಾ ಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿನಿರ್ದೇಶಕರ ಕಚೇರಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ, ಡಿ.ಸುಬ್ಬಯ್ಯ ರಸ್ತೆ, ಮೈಸೂರು ಇಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು.
ಸಹ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ 01ರಿಂದ 132, ಸೆ.11ರ ಬೆಳಿಗ್ಗೆ 10ರಿಂದ ಕೌನ್ಸಿಲಿಂಗ್ ನಡೆಯಲಿದೆ. ಸಹ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ 133ರಿಂದ 252 ರವರೆಗೆ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಆದ್ಯತಾ ಕ್ರಮ ಸಂಖ್ಯೆ01ರಿಂದ 35 ರವರೆಗೆ, ವಿಶೇಷ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ 01ರಿಂದ 5ರವರೆಗೆ ಸೆ.12ರಂದು ಬೆಳಿಗ್ಗೆ 10 ಗಂಟೆಯಿಂದ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗದ ವಿಭಾಗೀಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.