ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಂ.ವೆಂಕಟಕೃಷ್ಣಯ್ಯ
ಮೈಸೂರು

ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಂ.ವೆಂಕಟಕೃಷ್ಣಯ್ಯ

September 10, 2019

ಮೈಸೂರು, ಸೆ.9- ವೃದ್ಧಪಿತಾಮಹ, ದಯಾಸಾಗರ, ಶಿಕ್ಷಣತಜ್ಞ ಎಂ.ವೆಂಕಟಕೃಷ್ಣಯ್ಯನವರ (ತಾತಯ್ಯ) ಜನ್ಮದಿನಾಚರಣೆಯನ್ನು ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯ ವತಿಯಿಂದ ತಾತಯ್ಯನವರ ಉದ್ಯಾನವನದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಮರಿದಂಡಯ್ಯ ಬುದ್ಧ, ತಾತಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸೂಚಿಸಿ ಮಾತನಾಡಿ, ಎಂ.ವೆಂಕಟ ಕೃಷ್ಣಯ್ಯನವರು ತಮ್ಮ ಜೀವನವನ್ನು ಸಮಾಜಕ್ಕೆ ತ್ಯಾಗ ಮಾಡಿದ ಮಹಾನ್ ಚೇತನ. ಶೈಕ್ಷಣಿಕ ಹಾಗೂ ಸಾಮಾ ಜಿಕವಾಗಿ ಅವರ ಕೊಡುಗೆ ಅಪಾರ ಎಂದರು.

ಸಮಾಜದಲ್ಲಿ ತುಳಿತಕ್ಕೊಳಗಾದ ದೀನ ದುರ್ಬಲರಿಗೆ ಹಾಗೂ ಅಶಕ್ತ ಹೆಣ್ಣು ಮಕ್ಕಳಿಗಾಗಿಯೇ ಹೆಣ್ಣು ಮಕ್ಕಳು ಸಮಾಜದಲ್ಲಿ ಮುಂದೆ ಬರಲೆಂದು ಮಹಾರಾಣಿ ಶಾಲೆ ಯನ್ನು ಸ್ಥಾಪಿಸಿರುವುದು ಇತಿಹಾಸ. ಆದರೆ ಇಂದು ಅದು ಹತ್ತಾರು ಸಾವಿರ ಹೆಣ್ಣು ಮಕ್ಕಳು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿ ವೃಂದ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮುಂದೆ ಬರುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ತಾತಯ್ಯ ನವರ ಹೆಸರಿನಲ್ಲಿ ಮೈಸೂರು ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಹಾಗೂ ಸರ್ಕಾರಿ ಕಚೇರಿಗೆ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಸಮಾರಂಭದಲ್ಲಿ ಟ್ರಸ್ಟ್‍ನ ಖಜಾಂಚಿ, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲ ಗೆರೆ ಮಾತನಾಡಿ, ಮೈಸೂರಿಗೆ ಪತ್ರಿಕಾ ಭೀಷ್ಮ ಎಂದು ಕರೆಸಿಕೊಂಡ ತಾತಯ್ಯನವರು ಅಂದಿನ ಕಾಲದಲ್ಲೇ ಮೈಸೂರು ಪೇಟ್ರಿಯೇಟ್, ಸಾಧ್ವಿ, ವೃತ್ತಾಂತ ಚಿಂತಾಮಣಿ, ಸಂಪದ ಭ್ಯುಯ ಎಂಬ ಪತ್ರಿಕೆಗಳನ್ನು ಮುದ್ರಿಸಿ ಸರ್ಕಾರದ ಆಡಳಿತ ವೈಖರಿಯನ್ನು ಜನರಿಗೆ ತಿಳಿಸುವಲ್ಲಿ ಯಶಸ್ವಿಯಾದರು ಎಂದರು. ಸಮಾರಂಭದಲ್ಲಿ ಟ್ರಸ್ಟ್‍ನ ಗೌರವ ಕಾರ್ಯ ದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ, ಸಮಾಜ ಸೇವಕ ಜಿ.ಪಿ.ಹರೀಶ್, ಸಾಲಿಗ್ರಾಮ ಮಾಜಿ ಗ್ರಾ.ಪಂ. ಸದಸ್ಯರಾದ ಪುರಿ ಗೋವಿಂದರಾಜು ಉಪಸ್ಥಿತರಿದ್ದು, ತಾತಯ್ಯನವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು.

Translate »