ಲೋಕಸಭಾ ಚುನಾವಣೆಯಲ್ಲಿ ರೈತರ ಹಿತಾಸಕ್ತಿ  ಕಾಯುವವರಿಗೆ ಮತ ಚಲಾವಣೆಗೆ ಜಾಗೃತಿ ಅಭಿಯಾನ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ರೈತರ ಹಿತಾಸಕ್ತಿ ಕಾಯುವವರಿಗೆ ಮತ ಚಲಾವಣೆಗೆ ಜಾಗೃತಿ ಅಭಿಯಾನ

April 9, 2019

ಮೈಸೂರು: ಲೋಕಸಭಾ ಚುನಾವಣೆ ವೇಳೆ ರೈತರ ಆತ್ಮಹತ್ಯೆ ತಡೆ, ಬರ ಪೀಡಿತರ ಬವಣೆ ಸೇರಿದಂತೆ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಇಚ್ಛಾಸಕ್ತಿ ಪ್ರದರ್ಶಿಸುವ ಪಕ್ಷಗಳ ಅಭ್ಯರ್ಥಿಗೆ ಮತ ನೀಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿರುವುದಾಗಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಚರ್ಚಿಸದೆ ವ್ಯಕ್ತಿಗತ ಆರೋಪ- ಪ್ರತ್ಯಾರೋಪ ಹಾಗೂ ಭಾವನಾತ್ಮಕ ವಿಷಯಗಳನ್ನೇ ದೊಡ್ಡ ವಿಷಯ ಮಾಡುವ ಮೂಲಕ ಮತದಾರರನ್ನು ಮೂರ್ಖರನ್ನಾಗಿಸುತ್ತಿವೆ. ನಾಡಿನ ರೈತರ ಮತ್ತು ಗ್ರಾಮೀಣ ಭಾಗದ ಸಂಕಷ್ಟದ ಪರಿಹಾರ ಕುರಿತು ಚರ್ಚಿಸದೇ ವೈಯಕ್ತಿಕ ತೇಜೋವಧೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿರುವುದು ತಲೆತಗ್ಗಿಸುವ ಸಂಗತಿ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕಿz್ದÁರೆ. 156 ತಾಲೂಕುಗಳಲ್ಲಿ ಬರ ಆವರಿಸಿದೆ. ಗ್ರಾಮಿಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದೆ. ದೇಶದಲ್ಲೂ ಶೇ.35ರಷ್ಟು ಭಾಗ ಬರ ಪರಿಸ್ಥಿತಿ ತಲೆದೋರಿದೆ. ಇದು ಶೇ. 50ಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿz್ದÁರೆ. ಇದರಿಂದಾಗಿ ಕೃಷಿ ಭೂಮಿ ಮರುಭೂಮಿಯಾಗುತ್ತಿದೆ. ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇನ್ನು ಹವಾಮಾನ ವೈಪರಿತ್ಯದಿಂದ ಇಡೀ ತೋಟಗಾರಿಕೆ ನಶಿಸುವ ಅಪಾಯವಿದೆ ಎಂದು ವಿಷಾದಿಸಿದರು.

ಬರದ ಪರಿಸ್ಥಿತಿ ಗಂಭೀರವಾಗುತ್ತಿದ್ದರೂ ರಾಜಕೀಯ ಪಕ್ಷಗಳು ಈ ಕುರಿತು ಚರ್ಚೆ ಮಾಡದೇ ಕೇವಲ ಅನಗತ್ಯ ವಿಷಯಗಳನ್ನೇ ಎತ್ತಿಕೊಳ್ಳುತ್ತಿರುವ ಕಾರಣ ಇಂತಹವರಿಗೇ ಮತ ಹಾಕಬೇಕೆಂದು ತಾವು ಹೇಳದೇ ರೈತರ ಕಾರ್ಯಸೂಚಿ ಬಗ್ಗೆ ಗಮನ ನೀಡುವವರಿಗೆ ಮಾತ್ರ ಮತ ನೀಡಿ ಎಂದು ಮನವಿ ಮಾಡುವುದಾಗಿ ತಿಳಿಸಿದರು.

ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿಯುವ ಕೆಲಸ ವಿರೋಧ ಪಕ್ಷ ಮಾಡುತ್ತಿಲ್ಲ. ಆಡಳಿತ ಪP್ಷÀವೂ ತನ್ನ ಸಾಧನೆಗಳೇನೆಂದು ವಿವರಿಸುವ ಗೋಜಿಗೆ ಹೋಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಆತ್ಮಹತ್ಯೆ, ರೈತರ ಸಾಲ ಮನ್ನಾ, ಸ್ವಾಮಿನಾಥನï ವರದಿ ಜಾರಿ ಬಗ್ಗೆ ಚಕಾರ ವೆತ್ತುತ್ತಿಲ್ಲ. ಇದರಿಂದ ನಮ್ಮ ಅಭಿಯಾನದಲ್ಲಿ `ಮೋದಿ ಆಳ್ವಿಕೆಯಲ್ಲಿ ರೈತ’ ಎಂಬ ಕಿರು ಪುಸ್ತಕ ಹೊರ ತಂದು ಎಲ್ಲರಿಗೂ ವಿತರಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ರೈತ ಸಂಘ ಬೆಂಬಲ ನೀಡಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ರೈತ ಸಂಘ ಸ್ವತಃ ಸ್ಪರ್ಧಿಸಬೇಕೆಂಬ ಚಿಂತನೆ ಇದ್ದಿತಾದರೂ ಅಲ್ಲಿನ ರಾಜಕಾರಣ ಬೇರೆ ರೀತಿಯದಾಗಿರುವ ಕಾರಣ ಸ್ಪರ್ಧಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಷರತ್ತಿನ ಆಧಾರದ ಮೇಲೆ ಬೆಂಬಲ ನೀಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪೆÇ್ರ. ಶಬ್ಬೀರï ಮುಸ್ತಫಾ, ಎಚï.ಎ.ನಂಜುಂಡಸ್ವಾಮಿ, ಉಗ್ರ ನರಸಿಂಹೇಗೌಡ ಇದ್ದರು.

Translate »