ಬಂಡೀಪುರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತ ಜಾಗೃತಿ ಕಾರ್ಯಕ್ರಮ
ಮೈಸೂರು

ಬಂಡೀಪುರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತ ಜಾಗೃತಿ ಕಾರ್ಯಕ್ರಮ

June 10, 2018

ಬಂಡೀಪುರ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿವಿಧ ವನ ಮಹೋತ್ಸಹ ಹಾಗೂ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಗುಂಡ್ಲುಪೇಟೆಯ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯ ಕ್ರಮದಲ್ಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಅಂಬಾಡಿ ಮಾಧವ್, ತಾ.ಪಂ ಅಧ್ಯಕ್ಷ ಕೆ.ಎ.ಜಗದೀಶ್ ಮೂರ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಗಳು, ಸಂಘ ಸಂಸ್ಥೆಗಳ ಮುಖಂಡರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಕ್ರೀಡಾಂ ಗಣದ ಬಳಿ ಗಿಡ ನೆಟ್ಟು ನೀರೆರೆದರು.ಜಾಗೃತಿ ಜಾಥ: ಕಾರ್ಯಕ್ರಮಕ್ಕೂ ಮುನ್ನ ದೇವರಾಜ ಅರಸ್ ಕ್ರೀಡಾಂಗಣ ದಿಂದ ವಿದ್ಯಾರ್ಥಿಗಳ ಪರಿಸರ ಜಾಗೃತಿ ಜಾಥ ನಡೆಸಿದರು. ಗುಂಡ್ಲುಪೇಟೆಯ ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಪರಿಸರ ಸಂರಕ್ಷಣೆಯ ಮಹತ್ವ ವನ್ನು ವಿದ್ಯಾರ್ಥಿಗಳು ಸಾರಿದರು.

ಮೇಲುಕಾಮನಹಳ್ಳಿಯಲ್ಲಿ: ಬಂಡೀ ಪುರ ಅರಣ್ಯ ಪ್ರದೇಶ ಅಂಚಿನಲ್ಲಿರುವ ಮೇಲುಕಾಮನಹಳ್ಳಿಯಲ್ಲಿ ವನ ಮಹೋ ತ್ಸವ ಹಾಗೂ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ನಡೆಯಿತು. ಮೇಲು ಕಾಮನ ಹಳ್ಳಿ, ಸೋಮನಾಥಪುರ ಗಂಧದ ಮೀಸಲು ಪ್ರದೇಶ, ಆಂಜನೇಯಸ್ವಾಮಿ ಗುಡ್ಡದಲ್ಲಿ ಶಾಲಾ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಿಡ ನೆಟ್ಟರ ಲ್ಲದೆ, ಸೀಡ್ ಬಾಲ್ ಹಾಕುವ ಮೂಲಕ ವಿಶ್ವಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಿದರು. ಅಲ್ಲದೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿ ಸುವಂತೆ ಸಂದೇಶ ರವಾನಿಸಿದರು.

ಈ ಸಂದರ್ಭದಲ್ಲಿ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಿಎಫ್ ಅಂಬಾಡಿ ಮಾಧವ್, ಆರ್‍ಎಫ್‍ಒ ಪುಟ್ಟಸ್ವಾಮಿ, ಡಿಆರ್‍ಎಫ್‍ಒಗಳಾದ ಸಿ. ಅನಿಲ್‍ಕುಮಾರ್, ಕೆ.ಮಂಜುನಾಥ್, ಗಾರ್ಡ್‍ಗಳಾದ ನವೀನ್ ಹಾಗೂ ಓಬಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಯಾಂಪಸ್‍ನಲ್ಲಿ : ಬೆಳಗಿನಿಂದ ಬಂಡೀ ಪುರ ಕ್ಯಾಂಪಸ್‍ನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಪ್ರವಾಸಿಗರಲ್ಲಿ ಅರಿವು ಮೂಡಿಸಿದರು. ಸಫಾರಿಗೆಂದು ವಿವಿಧೆಡೆ ಗಳಿಂದ ಬರುವ ಪ್ರವಾಸಿಗರು ಹಾಗೂ ತಮಿಳುನಾಡು, ಕೇರಳಕ್ಕೆ ಹೋಗುವ ಪ್ರವಾಸಿಗರು ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಬಾಟಲ್, ಮದ್ಯದ ಬಾಟಲ್ ಎಸೆದು ಹೋಗುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿಗಳ ಮೇಲೆ ದುಷ್ಪರಿ ಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ದಿನವಿಡೀ ಪ್ರವಾಸಿಗರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಪ್ರವಾಸಿಗರ ವಾಹನಗಳಲ್ಲಿ ಪ್ರಯಾಣ ಸು ವವರಿಗೆ ಜಾಗೃತಿ ಮೂಡಿಸಿದರು.

‘ಸ್ಟಾಪ್ ಪ್ಲಾಸ್ಟಿಕ್’ ಘೋಷಣೆಯನ್ನು ಮುದ್ರಿಸಿರುವ ಪ್ಲಾಸ್ಟಿಕ್ ಕವರ್ ಅನ್ನು ತಲೆಗೆ ಹಾಕಿಕೊಂಡು ಗಮನ ಸೆಳೆದ ಸಿಬ್ಬಂದಿ, ಪ್ಲಾಸ್ಟಿಕ್ ಮನುಷ್ಯ ರೊಂದಿಗೆ ಪರಿಸರ, ಪ್ರಾಣ -ಪಕ್ಷಿಗಳಿಗೂ ಮಾರಕವಾಗಿದೆ. ಇದನ್ನು ಮನಗಂಡು ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಅನ್ನು ಎಸೆಯದಂತೆ ಮನದಟ್ಟು ಮಾಡಿದರು.

ಈ ಸಂದರ್ಭದಲ್ಲಿ ಆರ್‍ಎಫ್‍ಓ ಶ್ರೀನಿ ವಾಸ್, ಡಿಆರ್‍ಎಫ್ ಕೆ.ಎನ್.ಮೋಹನ ಕುಮಾರ್ ಕಾಡಗೆರೆ, ಎಸ್.ಶ್ರೀನಾಥ್ ರೆಡ್ಡಿ, ಗಾರ್ಡ್‍ಗಳಾದ ನೇತ್ರಾವತಿ, ಸುರೇಶ್, ಅಪ್ಪಣ್ಣ, ಸಂಜಯ್ ಸೇರಿದಂತೆ ಸಫಾರಿ ವಾಹನಗಳ ಚಾಲಕರು, ವಾಚರ್‍ಗಳು ಪಾಲ್ಗೊಂಡು ಅರಿವು ಮೂಡಿಸಿದರು.

Translate »