ಬಿಗ್ ಬಜಾರ್ ನಲ್ಲಿ ಇಫ್ತಿಯಾರ್ ಕೂಟ
ಮೈಸೂರು

ಬಿಗ್ ಬಜಾರ್ ನಲ್ಲಿ ಇಫ್ತಿಯಾರ್ ಕೂಟ

June 10, 2018

ಮೈಸೂರು: ಸಹೋದರತ್ವ ಮತ್ತು ಭ್ರಾತೃತ್ವ ಸಾರುವ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಿಗ್‍ಬಜಾರ್‍ನಲ್ಲಿ ಇಫ್ತಿಯಾರ್ ಕೂಟವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟವನ್ನು ಈ ಬಾರಿಯೂ ಆಯೋಜಿಸಲಾಗಿದೆ.ಈ ಬಾರಿಯ ಇಫ್ತಿಯಾರ್ ಕೂಟದಲ್ಲಿ ಸುಮಾರು 400ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.
ಈ ಬಗ್ಗೆ ಬಿಗ್‍ಬಜಾರ್‍ನ ಸಿಬ್ಬಂದಿ ಸಿ.ಆರ್.ಪುನೀತ್‍ಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಬಿಗ್ ಬಜಾರ್ ಫ್ಯೂಚರ್ ಗ್ರೂಪ್ ಪ್ರಮುಖ ವಾಣ ಜ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ದೇಶಾ ದ್ಯಂತ 124 ನಗರಗಳಲ್ಲಿ ಬಿಗ್ ಬಜಾರ್ ಮಳಿಗೆಗಳನ್ನು ಹೊಂದಿದೆ. ಸುಮಾರು 1.6 ಲಕ್ಷ ಬೃಹತ್ ಮಾರುಕಟ್ಟೆ ಉತ್ಪನ್ನ ಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದರು.

ಮೈಸೂರು ಬಿಗ್ ಬಜಾರ್‍ನಲ್ಲಿ ವ್ಯವಹಾರದ ಜೊತೆಗೆ ವರ್ಷ ಪೂರ್ತಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ಎಲ್ಲಾ ಧರ್ಮಿಯರ ಹಬ್ಬಗಳನ್ನು ಆಚರಿಸ ಲಾಗುತ್ತಿದೆ. ಈ ಮೂಲಕ ನಮ್ಮ ಸಂಸ್ಥೆ ವತಿಯಿಂದ ಗ್ರಾಹಕ ಸ್ನೇಹಿ ವಾತಾವರಣ ನಿರ್ಮಿಸಲು ಸದಾ ಶ್ರಮಿಸುತ್ತಿದೆ ಎಂದರು.

ಇಂದು ನಡೆದ ಇಫ್ತಿಯಾರ್ ಕೂಟ ದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿಗೆ ಬಗೆಬಗೆಯ ಹಣ್ಣು ಹಾಗೂ ಇತರೆ ತಿಂಡಿ- ತಿನಿಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಾರ್ಥನೆಗೂ ಸಹ ವ್ಯವಸ್ಥೆ ಮಾಡ ಲಾಗಿದೆ ಎಂದರು.

Translate »