ಬಸವಣ್ಣನವರ ಪರಿಕಲ್ಪನೆಯ ಸೇವಾ ಸಂಸ್ಥೆ “ಅನುರಾಗ್ ಮಕ್ಕಳ ಮನೆ” ಸೇವಾ ಪರಿ
ಮೈಸೂರು

ಬಸವಣ್ಣನವರ ಪರಿಕಲ್ಪನೆಯ ಸೇವಾ ಸಂಸ್ಥೆ “ಅನುರಾಗ್ ಮಕ್ಕಳ ಮನೆ” ಸೇವಾ ಪರಿ

September 26, 2018

ನಂಜನಗೂಡು: ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಅನುರಾಗ್ ಸೇವಾ ಟ್ರಸ್ಟ್ ಸ್ಥಾಪಿಸಿ, ಇದರ ಮುಖಾಂತರ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯದ ವ್ಯವಸ್ಥೆ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಇದು ಬಸವಣ್ಣನವರ ಪರಿಕಲ್ಪನೆ ಬಿಂಬಿಸುವಂತಹ ಸಂಸ್ಥೆಯಾಗಿದೆ ಎಂದು ರಾಜ್ಯ ಪ್ರತಿಧ್ವನಿ ವೇದಿಕೆಯ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ನಂಜನಗೂಡು ಸಮೀಪದಲ್ಲಿರುವ ಅನುರಾಗ್ ಮಕ್ಕಳ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂತಹ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಪ್ರತಿಯೊಬ್ಬರಿಗೂ ನಮ್ಮ ಧರ್ಮ, ಸಂಸ್ಕøತಿ, ಸಾಹಿತ್ಯದ ಬಗ್ಗೆ ಹೆಚ್ಚು ಗಮನಹರಿಸಲು ಮತ್ತು ಉತ್ತಮ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬೆಳೆಯಲು ಅನುಕೂಲವಾಗಲಿದೆ ಎಂದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಇಂತಹ ಸಂಸ್ಥೆಗೆ ಸಾರ್ವಜನಿಕರು ಮತ್ತು ದಾನಿಗಳು ಸಹಾಯ ನೀಡಬೇಕೆಂದರು.

ತಾಲೂಕು ಅಧ್ಯಕ್ಷ ಪ್ರತಿಧ್ವನಿ ತ್ರಿನೇಶ್ ಮಾತನಾಡಿ ನಂಜನಗೂಡಿನ ಅನುರಾಗ್ ಮಕ್ಕಳ ಮನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ 500 ಲೀಟರ್ ಸಾಮಥ್ರ್ಯದ ಸೋಲಾರ್ ವಾಟರ್ ಹಿಟರ್ ಅನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದ್ದೆವು. ಕೊಟ್ಟ ಮಾತಿನಂತೆ ಇಂದು ಕರ್ನಾಟಕ ಪ್ರತಿದ್ವನಿ ವೇದಿಕೆ ನಂಜನಗೂಡು ತಾಲೂಕು ಘಟಕದ ಸಹಯೋಗದೊಂದಿಗೆ ನೀಡಿದ್ದು, ಇದಕ್ಕೆ ಸಹಕರಿಸಿದ ನನ್ನ ಎಲ್ಲಾ ಸ್ನೇಹಿತರು ಹಿತೈಸಿಗಳಿಗೆ ಧನ್ಯವಾದಗಳು ಎಂದರು.

ಸಮಾರಂಭದಲ್ಲಿ ಹಿರಿಯ ಬಿಜೆಪಿ ಮುಖಂಡ ಕುರಿಹುಂಡಿ ಮಹೇಶ್ ಮಾತನಾಡಿ ಸಮಾಜಕ್ಕಾಗಿ ಸೇವಾ ಮನೋಭಾವನೆಯಿಂದ ದುಡಿಯುತ್ತಿರುವ ಇಂತಹ ಸಂಸ್ಥೆ ಅತ್ಯುತಮವಾಗಿ ಬೆಳೆಯಲಿ ಎಂದು ಹಾರೈಸಿದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೋ. ಗೌರಿಶಂಕರ್ ಮಾತನಾಡಿ ಆಶ್ರಮದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಸ್ವಾಮಿವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಸಮಾರಂಭದಲ್ಲಿ ಉದ್ಯಮಿ ಬಾಬು ಮುದ್ದಳ್ಳಿ ಪ್ರಕಾಶ್, ಸಯ್ಯದ್ ಅಮೀದ್, ಹಳೆಪುರ ಗಿರೀಶ್, ಹನುಮಯ್ಯ, ಬಿಜೆಪಿ ಅಧ್ಯಕ್ಷೆ ಭಾಗ್ಯ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು ಸಮಾರಂಭದಲ್ಲಿ ಅನುರಾಗ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಸೋಮಶೇಖರ್ ಸ್ವಾಗತಿಸಿದರು.

Translate »