ನಾಳೆ ಬೇಲ್‍ನಮ್ಮೆ
ಕೊಡಗು

ನಾಳೆ ಬೇಲ್‍ನಮ್ಮೆ

August 5, 2018

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಡಿಕೇರಿ, ಕೊಡವ ಸಮಾಜ ಕಾನೂರು, ಅಮ್ಮ ಕೊಡವ ಸಮಾಜ ಕೋತೂರು, ಮಹಿಳಾ ಸಮಾಜ ಕಾನೂರು- ಕೋತೂರು, ಕಾನೂರು ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಯ ಸಹಯೋಗದಲ್ಲಿ ಆಗಸ್ಟ್ 6 ರಂದು ಬೆಳಗ್ಗೆ 10 ಗಂಟೆಗೆ ಕೋತೂ ರಿನ ಮನ್ನಕ್ಕಮನೆ ವಾಸು ನಾಣಮಯ್ಯ, ಮನ್ನಕ್ಕಮನೆ ಕಿರಣ್ ಅವರ ಗದ್ದೆಯಲ್ಲಿ ಬೇಲ್‍ನಮ್ಮೆ (ಕೃಷಿ ಹಬ್ಬ) ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪೆಮ್ಮಂಡ ಕೆ.ಪೊನ್ನಪ್ಪ, ಕಾನೂರು ಕೊಡವ ಸಮಾಜದ ಅಧ್ಯಕ್ಷರಾದ ಮಚ್ಚಮಡ ಕಂದಾ ಭೀಮಯ್ಯ, ಕೋತೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಕಾನೂರು ಗ್ರಾಪಂ ಅಧ್ಯಕ್ಷ ರಾದ ಹೆಮ್ಮಚ್ಚಿಮನೆ ಲತಾ ಗಣೇಶ್, ಕಾನೂರು ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಳಮೇಂಗಡ ಎ.ವಿವೇಕ್, ಕಾನೂರು-ಕೋತೂರು ಮಹಿಳಾ ಸಮಾ ಜದ ಅಧ್ಯಕ್ಷರಾದ ಚೊಟ್ಟೆಕ್‍ಮಡ ಮಾಯಮ್ಮ ಬೋಪಯ್ಯ, ಕೋತೂರು ಕೆಂಬಟ್ಟಿ ಜನಾಂ ಗದ ಪ್ರತಿನಿಧಿಯಾದ ಜೋಕುಟ್ಟಡ ನೀಲ, ಕಾನೂರಿನ ಮಾಜಿ ಗ್ರಾ.ಪಂ.ಸದಸ್ಯರಾದ ಎಚ್.ಪಿ.ನಂಜುಂಡ, ಕೋತೂರು ಕಾವೇರಿ ಅಮ್ಮಕೊಡವ ಮಹಿಳಾ ಸಮಾಜದ ಕಾರ್ಯ ದರ್ಶಿ ಮನ್ನಕ್ಕಮನೆ ಅಶ್ವಿನಿ ನಂದಾ, ಸುಳ್ಳಿಮಾಡ ಬಿ.ತಿಮ್ಮಯ್ಯ, ಮನ್ನಕ್ಕಮನೆ ನಾಣಮಯ್ಯ, ಚೆಪ್ಪುಡಿರ ಪಾರ್ವತಿ ಪೊನ್ನಪ್ಪ, ಹೆಮ್ಮಚ್ಚಿಮನೆ ಜಿ.ವಿಠಲ ಇತರರು ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭವು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪಾಲ್ಗೊಳ್ಳಲಿದ್ದಾರೆ. ಬೇಲ್ ನಮ್ಮೆ ಕಾರ್ಯಕ್ರಮದಲ್ಲಿ ಪಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರಿಗೆ ಪೈರು ತೆಗೆಯುವ ಸ್ಪರ್ಧೆ, ಪೈರು ನೆಡುವ ಸ್ಪರ್ಧೆ, ಕೆಸರುಗದ್ದೆ ಓಟ, ಕೊಡಿನಾಡಿ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ನೇರ್‍ಪುಡಿ ಎಸೆಯುವ ಸ್ಪರ್ಧೆ, ಅಡಿಕೆ ಪಾಳೆ ಬಲಿಪೊ ಸ್ಪರ್ಧೆಗಳು ನಡೆಯಲಿದೆ.

Translate »