ಇಂದು ಹಿಮವನ ಪ್ರತಿಭಾ ಸಂಗಮ
ಕೊಡಗು

ಇಂದು ಹಿಮವನ ಪ್ರತಿಭಾ ಸಂಗಮ

August 5, 2018

ಮಡಿಕೇರಿ:  ಸಮರ್ಥ ಕನ್ನಡಿಗರ ಸಂಸ್ಥೆಯ ವತಿಯಿಂದ ಆಗಸ್ಟ್ 5 ರಂದು ಹಿಮವನ ಪ್ರತಿಭಾ ಸಂಗಮ ಎಂಬ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಓಂಕಾರ ಸದನದಲ್ಲಿ ಬೆಳಗ್ಗೆ 10 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ. “ಕೈ ದೀವಿಗೆ” ಕವನ ಸಂಕಲನವನ್ನು ಗಮಕ ವ್ಯಾಖ್ಯಾನಕಾರ ಕೃ.ಪಾ.ಮಂಜುನಾಥ ಲೋಕಾರ್ಪಣೆಗೊಳಿ ಸಲಿದ್ದಾರೆ. “ವಿವೇಕ ಪಥ” ಮಾಸಿಕ ಪತ್ರಿಕೆಯನ್ನು ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಕವಿ ಸಂಗೀತ ರವಿರಾಜ್ ಲೋಕಾರ್ಪಣೆ ಮಾಡಲಿದ್ದಾರೆ.

Translate »