ಬಿಇಎಂಎಲ್ ರಂಗ ಸಂಭ್ರಮದಲ್ಲಿ ‘ಸುಂಟರಗಾಳಿ’
ಮೈಸೂರು

ಬಿಇಎಂಎಲ್ ರಂಗ ಸಂಭ್ರಮದಲ್ಲಿ ‘ಸುಂಟರಗಾಳಿ’

January 7, 2019

ಮೈಸೂರು: ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಸಾಂಸ್ಕøತಿಕ ಚಟುವಟಿಕೆ ಗಳಲ್ಲಿ ಭಾಗವಹಿಸಬೇಕು ಎಂದು ಬಿಇಎಂಎಲ್ ಮೈಸೂರು ಘಟಕದ ಪ್ರಧಾನ ವ್ಯವಸ್ಥಾಪಕ ಹೆಚ್.ಎಸ್.ರಂಗನಾಥ್ ಕಿವಿಮಾತು ಹೇಳಿದರು.

ಮೈಸೂರಿನ ಕಲಾಮಂದಿರದಲ್ಲಿ ದಕ್ಷಿಣ ಕನ್ನಡಿಗರ ಒಕ್ಕೂಟ ಬಿಇಎಂಎಲ್ ಮೈಸೂರು ಘಟಕ ಭಾನುವಾರ ಆಯೋಜಿಸಿದ್ದ ‘ರಂಗಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಹುಮುಖ ಪ್ರತಿಭಾವಂತರಾಗಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಅಭಿರುಚಿಯನ್ನು ಬೆಳೆಸಿಕೊಂಡಿರಬೇಕು ಎಂದರು. ಇದೇ ವೇಳೆ ‘ರಂಗ ಸವ್ಯ ಸಾಚಿ’ ಪ್ರಶಸ್ತಿ ಪಡೆದ ಸುಳ್ಯದ ವಿದ್ಯಾರ್ಥಿ ಮನುಜ ನೇಹಿಗ, ‘ದಶ ಕಲಾ ಕೌಶಲ್ಯ’ ಪ್ರದರ್ಶಿಸಿ ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದ. ನಂತರ ವೇದಿಕೆಗೆ ಆಗಮಿಸಿದ ಆಳ್ಳಾಸ್ ರಂಗ ಅಧ್ಯಯನ ತಂಡದ ಕಲಾವಿದರು ‘ಧಾಂ ಧೂಂ ಸುಂಟರಗಾಳಿ’ ನಾಟಕ ಪ್ರದರ್ಶನ ನೀಡಿ ಕಲಾಪ್ರಿಯರ ಮನಗೆದ್ದರು.ದಕ್ಷಿಣ ಕನ್ನಡಿಗರ ಒಕ್ಕೂಟ ಅಧ್ಯಕ್ಷ ಮೋಹನದಾಸ್ ಫ್ರಭು, ಕಾರ್ಯದರ್ಶಿ ಪಿ.ಹರಿಶ್ಚಂದ್ರ, ಜಯಚಂದ್ರ, ಅಲ್ಬರ್ಟ್ ಸಲ್ಮಾನ್, ಆನಂದ್, ಉದಯ, ಜನಾರ್ದನ್, ಕೆ.ಜಿ.ವಿಠಲ ರಾವ್ ಉಪಸ್ಥಿತರಿದ್ದರು.

Translate »