ಭರತನಾಟ್ಯ, ಕಥಕ್ ನೃತ್ಯಕ್ಕೆ ಮನಸೋತ ಕಲಾಸಕ್ತರು
ಮೈಸೂರು

ಭರತನಾಟ್ಯ, ಕಥಕ್ ನೃತ್ಯಕ್ಕೆ ಮನಸೋತ ಕಲಾಸಕ್ತರು

November 11, 2019

ಮೈಸೂರು, ನ.10- ಆರ್ಟಿಕ್ಯುಲೇಟ್ ನೃತ್ಯೋತ್ಸವದ 43ನೇ ಸರಣಿ ಇತ್ತೀಚೆಗೆ ವಿಜಯನಗರದ ಭಾರತೀಯ ವಿದ್ಯಾಭವನದ ಪ್ರೊ.ವೈ.ಟಿ.ತಾತಾಚಾರಿ ಸಭಾಂಗಣದಲ್ಲಿ ನಡೆಯಿತು. ಇದರ ನೇತೃತ್ವವನ್ನು ಆರ್ಟಿಕ್ಯುಲೇಟ್ ಟ್ರಸ್ಟ್‍ನ ಸಂಯೋಜಕ ಮೈಸೂರು ಬಿ.ನಾಗರಾಜ್ ವಹಿಸಿದ್ದರು. ಓರ್ವ ಕಥಕ್ ಹಾಗೂ ಮೂವರು ಭರತನಾಟ್ಯ ಕಲಾ ವಿದರು ತಮ್ಮ ಅಮೋಘ ನೃತ್ಯ ಪ್ರದರ್ಶನದ ಮೂಲಕ ಕಲಾರಸಿಕರನ್ನು ಮೋಡಿ ಮಾಡಿದರು.

ಮೊದಲಿಗೆ ಗುರು ಮೈಸೂರು ಬಿ.ನಾಗರಾಜ್ ಶಿಷ್ಯ ರಾದ ಕಾರ್ತಿಕ್ ಬಿ.ಶೆಟ್ಟಿ ಕಥಕ್ ನೃತ್ಯ ಪ್ರಕಾರದ 3 ಕೃತಿ ಗಳಿಗೆ ತಮ್ಮ ಭಾವಾಭಿನಯ ನೀಡಿ ಕಣ್ಮನ ಸೆಳೆದರು. ಶಿವಸ್ತುತಿಯೊಂದಿಗೆ ತಮ್ಮ ನೃತ್ಯವನ್ನು ಪ್ರಾರಂಭಿಸಿದ ಇವರು, ವೇಗ ರೀತಿಯ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು. ಗುರು ವಾರಿಜಾ ನಲಿಗೆಯವರ ಶಿಷ್ಯೆ ಎಸ್.ಡಿ. ಸ್ನೇಹ, ಏಕವ್ಯಕ್ತಿ ಮಾದರಿಯಲ್ಲಿ ಭರತನಾಟ್ಯ ಪ್ರದರ್ಶಿಸಿ ದರು. ಇವುಗಳ ಪೈಕಿ ಮಧುರೈ ಆರ್.ಮುರುಳೀಧರನ್, ಪುಷ್ಪಾಂಜಲಿ ಹಾಗೂ ಮಧುರೈ ಟಿ.ಎಸ್.ಮಣಿರವರ ಕೃತಿ ‘ಗಂಭೀರ ಗಾನ ನಾಯಕಮ್’ ಕೃತಿಗಳಿಗೆ ಅಭಿನಯಿಸಿ ದರು. ನಂತರ ಮೈಸೂರಿನ ಅಪರ್ಣ ಆರ್.ಕೋದಾಂಕಿರಿ, 3 ಕೃತಿಗಳಿಗೆ ಭರತ ನಾಟ್ಯ ಪ್ರದರ್ಶಿಸಿದರು. ಇವುಗಳ ಪೈಕಿ ಪುಷ್ಪಾಂಜಲಿ (ರಾಗ ತಿಲ್ಲಾನ, ಆದಿತಾಳ) ‘ಜಯ ಜಯ ಜಯದೇವ ಶಂಕರ’ ಹಾಗೂ ಹರಿದಾಸ ಶ್ರೀ ಪುರಂದರ ದಾಸರ ‘ಯಮನೆಲ್ಲೂ ಕಾಣನೆಂದು ಹೇಳಬೇಡ’ ಎಂಬ ಕೃತಿಗೆ ಅಭಿನಯಿಸಿದರು. ಕಡೆಯ ಪ್ರಸ್ತುತಿ ಕೃಪಾ ಫಡ್ಕೆ ಅವರ ಶಿಷ್ಯೆ ಸುರಕ್ಷಾ ದೀಕ್ಷಿತ್ ತಮ್ಮ ಅತ್ಯಾಕರ್ಷಕ ಭರತನಾಟ್ಯ ನೃತ್ಯಾಭಿನಯ ನೀಡಿದರು. ವಿದ್ವಾನ್ ವೆಂಕಟಸುಬ್ಬಯ್ಯ ನವರ ಸಂಸ್ಕøತ ಕೃತಿ (ಗಣೇಶ ಸ್ತುತಿ), ‘ಆನಂದ ನರ್ತನ ಗಾನ ಪಾಟಿಮ್ ಭಾವಯೇ’, ಒಂದು ಸಂಸ್ಕøತ ಶ್ಲೋಕ, ಭಾಗ ವತರ ಶ್ಲೋಕ, ಜಯದೇವ ಕವಿಯ ಅಷ್ಠಪದಿ ‘ರಾಧಿಕಾ ಕೃಷ್ಣ ತವ ವಿರಹೇ’ ಕೃತಿಗಳಿಗೆ ಅಭಿನಯಿಸಿದರು. ಡಿ.ವಿ.ಗುಂಡಪ್ಪನವರ ‘ಅಂತಃ ಪುರದ ಗೀತೆ’ ಸಂಕಲನ ದಿಂದಾಯ್ದ ‘ನಟನವಾಡಿದಳ್ ತರುಣಿ ನಟನವಾಡಿ ದಳ್’ ಎಂಬ ಗೀತೆಗೆ ನರ್ತಿಸಿದರು. ಇದರೊಂದಿಗೆ 43ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ಸಂಪನ್ನಗೊಂಡಿತು.

Translate »