ನ.17, ಚಾ.ಬೆಟ್ಟದ ಶ್ರೀನಂದಿಗೆ ಮಹಾಭಿಷೇಕ
ಮೈಸೂರು

ನ.17, ಚಾ.ಬೆಟ್ಟದ ಶ್ರೀನಂದಿಗೆ ಮಹಾಭಿಷೇಕ

November 11, 2019

ಮೈಸೂರು,ನ.10-ಕಾರ್ತಿಕ ಮಾಸದ ಪ್ರಯುಕ್ತ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ನ.17ರಂದು ಬೆಳಿಗ್ಗೆ 9.30 ಗಂಟೆಗೆ ಚಾಮುಂಡಿಬೆಟ್ಟದ ಶ್ರೀನಂದಿಗೆ ಮಹಾಭಿಷೇಕ, ಪೂಜಾ ಮಹೋತ್ಸವ ಹಾಗೂ ಪ್ರಸಾದ ವಿನಿಯೋಗ ಏರ್ಪ ಡಿಸಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಜಮನಗಿರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಜೆಎಸ್‍ಎಸ್ ಆಸ್ಪತ್ರೆ ನೌಕರರ ವತಿಯಿಂದ ನ.18ರಂದು ಸಂಜೆ 6.30 ಗಂಟೆಗೆ ಶ್ರೀ ನಂದಿ ಆವರಣದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Translate »