ಸಿಂಪಲ್ಲಾಗಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲರಾವ್ ನಾಮಪತ್ರ ಸಲ್ಲಿಕೆ
ಮೈಸೂರು

ಸಿಂಪಲ್ಲಾಗಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲರಾವ್ ನಾಮಪತ್ರ ಸಲ್ಲಿಕೆ

April 24, 2018

ಮೈಸೂರು: ಹೈವೋ ಲ್ಟೇಜ್ ಹಾಗೂ ಪ್ರತಿಷ್ಠಿತ ಕ್ಷೇತ್ರವೆನಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ಗೋಪಾಲ್ ರಾವ್ ಸೋಮವಾರ ಮೈಸೂರಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಪಕ್ಷದ ಬಿ-ಫಾರಂನೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ಪೂರ್ವಾಹ್ನ ಇಂದು ಬೆಂಬಲಿಗರೊಂ ದಿಗೆ ಮಿನಿ ವಿಧಾನಸೌಧಕ್ಕೆ ತೆರಳಿ ಚುನಾ ವಣಾಧಿಕಾರಿ ಬಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಪುಷ್ಪಾ ರಾವ್, ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಚಾಮುಂ ಡೇಶ್ವರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್‍ಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ ಅವರೊಂದಿಗೆ ನಾಮ ಪತ್ರ ಸಲ್ಲಿಸಿದರು.
ಸಿಂಪಲ್ಲಾಗಿ ಬಂದು ಹೋದ್ರು: ದೇಶ, ರಾಜ್ಯ ರಾಜಕೀಯದ ಗಮನ ಸೆಳೆದಿರುವ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಜೆಪಿ ಗಂಭೀರ ವಾಗಿ ಪರಿಗಣ ಸದೆ ಇರುವುದು ಇಂದು ಸಾಬೀತಾಯಿತು. ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿಯೂ ಬಿಜೆಪಿ ನಡೆ ಚರ್ಚೆಗೆ ಗ್ರಾಸವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರ ರಾಗಿ ಸ್ಪರ್ಧಿಸುವವರು ಅದ್ದೂರಿ ಮೆರ ವಣ ಗೆಯಲ್ಲಿ ಬಂದು ನಾಮಪತ್ರ ಸಲ್ಲಿಸು ವುದು ಸಾಮಾನ್ಯವಾಗಿದೆ. ಆದರೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಸಿಂಪಲ್ಲಾಗಿ ಬಂದು ನಾಮ ಪತ್ರ ಸಲ್ಲಿಸಿ ಹೋಗಿದ್ದು, ಬಿಜೆಪಿ ಕಾರ್ಯಕರ್ತ ರಲ್ಲಿಯೇ ಗೊಂದಲಕ್ಕೆ ಕಾರಣವಾಯಿತು.

ಬಿಎಸ್ಪಿ ಮುಖಂಡ ಪಕ್ಷೇತರ ಸ್ಪರ್ಧೆ: ಬಿಎಸ್ಪಿ ಮೈಸೂರು ಘಟಕದ ಪದಾಧಿಕಾರಿ ಆಲನಹಳ್ಳಿ ನಿವಾಸಿ ಶಿವಮಹದೇವ ಚಾಮುಂ ಡೇಶ್ವರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿ ದರು. ಈ ಚುನಾವಣೆಯಲ್ಲಿ ಬಿಎಸ್ಪಿ ಜೆಡಿಎಸ್‍ಗೆ ಬೆಂಬಲ ನೀಡಿದ್ದರೂ ಶಿವ ಮಹದೇವು ಅವರು ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿರುವುದು ಪಕ್ಷದ ಕಾರ್ಯಕರ್ತ ರಲ್ಲಿ ಗೊಂದಲ ಉಂಟು ಮಾಡಿದೆ.

ಹುಣಸೂರು ತಾಲೂಕಿನ ಹುಂಡಿಮಾಳದ ಉಯಿಗೊಂಡನಹಳ್ಳಿ ಗ್ರಾಮದ ವೆಂಕಟಯ್ಯ ಎಂಬುವರ ಮಗ ವಿ.ವಿ.ಪ್ರೇಮ ಕುಮಾರ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಸಿಎಂ ಪರ ಮತ್ತೆ ಎರಡು ಸೆಟ್ ನಾಮ ಪತ್ರ ಸಲ್ಲಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಎರಡು ಸೆಟ್ ನಾಮ ಪತ್ರ ಸಲ್ಲಿಸಿದ್ದರು. ಇಂದು ಸಿಎಂ ಪರ ಮತ್ತೆ ಎರಡು ಸೆಟ್ ನಾಮಪತ್ರವನ್ನು ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದಾರೆ. ಮೊದಲು ನಾಮಪತ್ರ ಸಲ್ಲಿಸುವ ವೇಳೆ ಖುದ್ದಾಗಿ ಅಭ್ಯರ್ಥಿಗಳು ಇರಲೇಬೇಕಾಗಿದೆ. ಒಮ್ಮೆ ನಾಮಪತ್ರ ಸಲ್ಲಿಸಿದ್ದರೆ ಆ ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಮತ್ತೆ ನಾಮಪತ್ರ ಸಲ್ಲಿಸ ಬಹುದಾಗಿದೆ ಎಂದು ಚುನಾವಣಾಧಿಕಾ ರಿಗಳು ಸ್ಪಷ್ಟನೆ ನೀಡಿದ್ದಾರೆ.

Translate »