ಜೆಪಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮತಯಾಚನೆ
ಮೈಸೂರು

ಜೆಪಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮತಯಾಚನೆ

May 3, 2018

ಮೈಸೂರು: ಕೆ.ಆರ್. ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮದಾಸ್ ಬುಧವಾರ ಜೆ.ಪಿ.ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಇಂದು ಬೆಳಿಗ್ಗೆ ಜೆಪಿನಗರದ ಗೊಬ್ಬಳಿ ಮರದ ಬಳಿ ಇರುವ ಶ್ರೀ ಚಾಮುಂಡೇ ಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿ ಸಿದ ಬಳಿಕ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್, ಬಡಾವಣೆಯ ಮನೆಮನೆಗೂ ತೆರಳಿ, ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವಂತೆ ಕೋರಿದರು. ಅಲ್ಲದೆ ಈ ಬಾರಿ ಕೆ.ಆರ್.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ವಾಗ್ಧಾನ ಮಾಡಿದರು.

ಈ ವೇಳೆ ಎಸ್.ಎ.ರಾಮದಾಸ್ ಮಾತ ನಾಡಿ, ಮೂಲ ಸೌಲಭ್ಯಗಳಿಲ್ಲದೆ ಕಡೆ ಗಣನೆಗೆ ಒಳಗಾಗಿದ್ದ ಕೆ.ಆರ್.ಕ್ಷೇತ್ರವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದ ಎಲ್ಲಾ ಬಡಾವಣೆಗಳ ರಸ್ತೆಗಳನ್ನು ದುರಸ್ತಿ ಮಾಡ ಲಾಗಿದೆ. ಉದ್ಯಾನವನಗಳಿಗೆ ಕಾಯಕಲ್ಪ ನೀಡಿ, ಸ್ಥಳೀಯರಿಗೆ ಉತ್ತಮ ವಾತಾ ವರಣ ಕಲ್ಪಿಸಲಾಗಿತ್ತು. ಆದರೆ ಕಳೆದ ಐದು ವರ್ಷಗಳಿಂದ ಕ್ಷೇತ್ರದಾದ್ಯಂತ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿರುವ ನನಗೆ ಮತ ನೀಡುವಂತೆ ಕೋರಿಕೊಂಡರು.

ದೇಶದ ಪ್ರಗತಿ ಬಿಜೆಪಿಯಿಂದ ಮಾತ್ರ ಸಾಧ್ಯ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದ ಪ್ರಗತಿ ಶರವೇಗದಲ್ಲಿ ಸಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆ ಹೆಚ್ಚಿದೆ. ದೇಶದಲ್ಲಿ ಬಂಡವಾಳ ಹೂಡಿಕೆಗೆ ವಿವಿಧ ದೇಶಗಳು ಮುಂದೆ ಬರುತ್ತಿವೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಅವಶ್ಯಕತೆಯಿದ್ದು, ಈ ಬಾರಿ ರಾಜ್ಯದಾದ್ಯಂತ ಬಿಜೆಪಿಗೆ ಪೂರಕವಾದ ವಾತಾವರಣ ಸೃಷ್ಟಿಯಾ ಗಿದೆ. ಇದನ್ನು ಮನಗಂಡು ಮೇ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ರಾಮದಾಸ್ ಅವರು ಮನವಿ ಮಾಡಿದರು.

Translate »