ಬಿಜೆಪಿಯವರು ನಿನ್ನನ್ನ ಡಿಸಿಎಂ ಮಾಡಲ್ಲ ನಮ್ಮ ಪಕ್ಷಕ್ಕೆ ಬಾ! 
ಮೈಸೂರು

ಬಿಜೆಪಿಯವರು ನಿನ್ನನ್ನ ಡಿಸಿಎಂ ಮಾಡಲ್ಲ ನಮ್ಮ ಪಕ್ಷಕ್ಕೆ ಬಾ! 

July 19, 2019

ಶ್ರೀರಾಮುಲುಗೆ ಸದನದಲ್ಲೇ ದೋಸ್ತಿ ನಾಯಕರ ಆಪರೇಷನ್?

ಬೆಂಗಳೂರು, ಜು.18- ರಮೇಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡ್ತಾರೆ, ಬಿಜೆಪಿ ಯಲ್ಲಿ ಯಾವುದೇ ಕಾರಣಕ್ಕೂ ನಿನಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಶಾಸಕ ಶ್ರೀರಾಮುಲುಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಮುಂದೂಡಿದ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ಭೋಜನಕ್ಕೆ ತೆರಳಿದರು. ಈ ವೇಳೆ ಸದನದಲ್ಲಿಯೇ ಇದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ.ಶಿವಕುಮಾರ್ ಓಪನ್ ಆಪರ್ ನೀಡಿದ್ದಾರೆ ಎನ್ನಲಾಗುತ್ತಿದೆ. ನಂತರ ರಾಮುಲು ಬಳಿ ಬಂದ ಶಿವಕುಮಾರ್ ಕೆಲ ಸಮಯ ಮಾತು ಕತೆ ನಡೆಸಿದ್ದು, ಅವರ ಸಂಭಾಷಣೆ ಕುತೂಹಲ ಕೆರಳಿಸಿದೆ, ಇನ್ನೂ ಈ ವೇಳೆ ಮಾತ ನಾಡಿದ ಕುಮಾರಸ್ವಾಮಿ, ಅಲ್ಲಿ ಕೂತು ಏನು ಯೋಚನೆ ಮಾಡ್ತಿದ್ದೀಯಾ, ನಮ್ಮ ಬಳಿಗೆ ಬಾ ಎಂದು ಕರೆದಿದ್ದಾರೆ. ಇನ್ನೂ ಈ ಮಾತುಕತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಅವರ ಸೀಟೇ ಅಲ್ಲಾಡುತ್ತಿದೆ, ಮೊದಲು ಅವರ ಸ್ಥಾನ ಉಳಿಸಿಕೊಳ್ಳಲಿ, ಬೇಕಾದರೇ ಶಿವಕುಮಾರ್ ಅವರೇ ನಮ್ಮ ಪಕ್ಷಕ್ಕೆ ಬರಲಿ ಎಂದು ಹೇಳಿದ್ದಾರೆ. ನಾನು ಊಟಕ್ಕೆ ಹೋಗುವುದು ತಡವಾಗಿತ್ತು, ಸಿಎಂ ಮತ್ತು ಶಿವಕುಮಾರ್ ಏನೋ ಮಾತನಾಡುತ್ತಿದ್ದರು, ಆಗ ಅವರು ಏನು ಹೇಳಿದರು ಎಂಬುದು ನನಗೆ ಗೊತ್ತಾಗಲಿಲ್ಲ, ಟಿವಿಯಲ್ಲಿ ನೋಡಿದ ಮೇಲೆ ತಿಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

 

 

Translate »