ರಾಜ್ಯದ 22ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ
ಮೈಸೂರು

ರಾಜ್ಯದ 22ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ

April 10, 2019

ಮೈಸೂರು: ದೇಶಾದ್ಯಂತ ಪ್ರಧಾನಿ ಮೋದಿ ಅಲೆಯಿದ್ದು, ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತ ನಾಡಿದ ಅವರು, 60 ವರ್ಷ ವಯೋಮಾನ ಮೀರಿದ ರೈತರಿಗೆ ಪಿಂಚಣಿ, ಎಲ್ಲಾ ರೈತರಿಗೆ ವಾರ್ಷಿಕ 6 ಸಾವಿರ ಪ್ರೋತ್ಸಾಹ ಧನ, 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟಾಗಲು ಅಗತ್ಯ ವಾದ ಯೋಜನೆ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು, ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಹಾಗೂ ಅಭಿವೃದ್ಧಿ, ಕಾಶ್ಮೀರದಲ್ಲಿರುವ 370ನೇ ವಿಧಿ ರದ್ದು , ಭಯೋತ್ಪಾದನೆ ಮುಕ್ತ ಸೇರಿದಂತೆ ಅಭಿವೃದ್ಧಿಪೂರಕ ಅಂಶಗಳನ್ನೊಳಗೊಂಡ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕೆಂಬ ಕೂಗಿದೆ. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಮೋದಿ ಪ್ರಧಾನಿ ಯಾಗುವುದು ನಿಶ್ಚಿತ. ಮೈಸೂರು-ಕೊಡಗು, ಚಾಮ ರಾಜನಗರ ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಕ್ಷೇv À್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್‍ನ ಪ್ರಭಾವಿ ನಾಯಕ ಮುನಿಯಪ್ಪ ಅವರು ದಯಾನೀಯವಾಗಿ ಸೋಲುವ ಸ್ಥಿತಿಯಲ್ಲಿದ್ದಾರೆ.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲ ಕಂಡು ಹೆದರಿದ್ದಾರೆ. ದೇಶದೆಲ್ಲೆಡೆ ಇದೇ ರೀತಿಯ ವಾತಾ ವರಣವಿದೆ ಎಂದರು. ದೇಶದಲ್ಲಿ 10 ವರ್ಷ ಪ್ರಧಾನಿಯಾಗಿದ್ದ ಮನಮೋಹನ್‍ಸಿಂಗ್ ಅವರು ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು ಎಂಬುದು ಕಾಂಗ್ರೆಸ್ ನಡೆಯಿಂದಲೇ ತಿಳಿಯುತ್ತದೆ. ಆದರೆ ನಾವು ಮೋದಿ ಅವರ ಆಡಳಿತದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕೆಲವರು ಹಿಂದುಳಿದ ವರ್ಗಗಳ ನಾಯಕರೆಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಾರೆ. ಆದರೆ ನಿಜವಾಗಿ ಬಿಜೆಪಿ ಸರ್ವರಿಗೂ ಸಮಾನ ಅವಕಾಶ ನೀಡಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಿಂದುಳಿದ ವರ್ಗ ದವರಾದ ಮೋದಿ ಅವರು ಪ್ರಧಾನಿಯಾಗಲಿಲ್ಲವೇ?. ಪ್ರಸ್ತುತ ಪರಿಶಿಷ್ಟ ಜಾತಿಯ ರಾಮ್‍ನಾಥ್ ಕೋವಿಂದ್, ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಖ್ಯಾತ ವಿಜ್ಞಾನಿ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಹೆಗ್ಗಳಿಕೆ ಎಂದು ಹೇಳಿದ ಬಿಎಸ್‍ವೈ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 24 ಗಂಟೆಗಳಲ್ಲಿ 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುತ್ತೇನೆಂದು ವಾಗ್ದಾನ ನೀಡಿ, ಈವರೆಗೂ ನಾಲ್ಕೂವರೆ ಸಾವಿರ ಕೋಟಿ ರೂ.ಗಳನ್ನೂ ಮನ್ನಾ ಮಾಡಿಲ್ಲ. ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಒಡೆದ ಮನೆಯಾಗಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

Translate »