ಬಿಜೆಪಿ-ಜೆಡಿಯು ಮೈತ್ರಿಗೆ ತಲಾಖ್… ತಲಾಖ್… ತಲಾಖ್…!
ಮೈಸೂರು

ಬಿಜೆಪಿ-ಜೆಡಿಯು ಮೈತ್ರಿಗೆ ತಲಾಖ್… ತಲಾಖ್… ತಲಾಖ್…!

June 23, 2019

ನವದೆಹಲಿ, ಜೂ.22- ಲೋಕ ಸಭೆಯ ಮುಂಗಾರು ಅಧಿವೇಶನದ 5ನೇ ದಿನವಾದ ಶುಕ್ರವಾರ ಮಂಡನೆಯಾದ ತ್ರಿವಳಿ ತಲಾಖ್ ಮಸೂದೆಗೆ ತನ್ನ ಬೆಂಬಲವಿಲ್ಲ ಎಂದು ಜೆಡಿಯು ಸ್ಪಷ್ಟಪಡಿಸಿದೆ. ಮಸೂದೆಯನ್ನು ಮೈತ್ರಿ ಪಕ್ಷವಾದ ಬಿಜೆಪಿಯೇನೋ ಬೆಂಬಲಿಸಿದೆ. ಆದರೆ ಈ ವಿಷಯದಲ್ಲಿ ತಾನು ಬಿಜೆಪಿಗೆ ಬೆಂಬಲ ನೀಡಲು ಇಷ್ಟಪಡುವುದಿಲ್ಲ ಎಂದು ಅದು ಹೇಳಿದೆ.

ರಾಜ್ಯ ಸಭೆಯಲ್ಲಿ ಈ ಮಸೂದೆ ಮಂಡನೆಯಾಗುವ ಸಮಯದಲ್ಲೂ ತಾನು ವಿರೋಧ ವ್ಯಕ್ತ ಪಡಿಸುವುದಾಗಿ ಹೇಳಿದೆ. ಮುಸ್ಲಿಂ ಪತಿಯರು ತಮ್ಮ ಪತ್ನಿಗೆ ನೀಡುವ ಇನ್‍ಸ್ಟಾಂಟ್ ತ್ರಿವಳಿ ತಲಾಖ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದು ಮಹಿಳೆಯರ ಹಕ್ಕುಗಳನ್ನು ಕಸಿಯುತ್ತದೆ ಎಂಬ ಕಾರಣಕ್ಕೆ ಅದರ ವಿರುದ್ಧ ಕಾನೂನು ತರಲು ಈ ಮಸೂದೆ ಮುಂದಾಗಿದೆ. ಆದರೆ ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳಲ್ಲಿ ಮೈತ್ರಿ ಪಕ್ಷ ಬಿಜೆಪಿಯ ನಡೆಗೆ ಜೆಡಿಯು ಬೆಂಬಲವಿಲ್ಲ. ಇವು ಮೈತ್ರಿಯಲ್ಲಿ ಬಿರುಕು ಮೂಡಲು ಕಾರಣವಾಗಬಹುದಾ? ಜೆಡಿಯುನ 16 ಸಂಸದರ ಮತ ಜೆಡಿಯುನ 16 ಸಂಸದರ ಮತ ತ್ರಿವಳಿ ತಲಾಖ್‍ಗೆ ಜೆಡಿಯು ಬೆಂಬಲವಿಲ್ಲ ಎಂದಾದರೆ ಆ ಪಕ್ಷದ 16 ಸಂಸದರು ತ್ರಿವಳಿ ತಲಾಖ್ ವಿರುದ್ಧ ಮತ ಹಾಕಿದ್ದಾರೆಯೇ? ಕೆಲವು ಮೂಲಗಳ ಪ್ರಕಾರ ಜೆಡಿಯು ಸಂಸದರು ಅಂದು ಅಧಿವೇ ಶನಕ್ಕೆ ಹಾಜರಾಗಿಯೇ ಇರಲಿಲ್ಲ. ಈ ಮೂಲಕ ಪರ-ವಿರೋಧ ಮತ ಚಲಾಯಿಸಿ ಯಾವುದಾದರೊಂದು ಗುಂಪಿನಲ್ಲಿ ನಿಲ್ಲಬೇಕಾದ ಸಂಕಟದಿಂದ ಮುಕ್ತಿ ಪಡೆದರು ಎನ್ನಲಾಗಿದೆ. ಆದರೆ ಈ ಕುರಿತು ಜೆಡಿಯು ಕಡೆಯಿಂದ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Translate »