ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ: ಆರ್‍ಎಸ್‍ಎಸ್ ಮೂಗು ತೂರಿಸಲ್ಲ
ಮೈಸೂರು

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ: ಆರ್‍ಎಸ್‍ಎಸ್ ಮೂಗು ತೂರಿಸಲ್ಲ

May 16, 2019

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆರ್‍ಎಸ್‍ಎಸ್‍ನಿಂದ ಯಾರೂ ಆಕಾಂಕ್ಷಿಗಳಿಲ್ಲ. ಸಂಘಕ್ಕೂ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೂ ಸಂಬಂಧವಿಲ್ಲ ಎಂದು ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಇಂದಿಲ್ಲಿ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ದಲ್ಲಿ ಆರ್‍ಎಸ್‍ಎಸ್ ಮೂಗು ತೂರಿಸುವುದಿಲ್ಲ. ಆ ಪಕ್ಷದ ಅಧ್ಯಕ್ಷರ ಬದಲಾವಣೆಯನ್ನು ಆ ಪಕ್ಷವೇ ನೋಡಿಕೊಳ್ಳಲಿದೆ ಎಂದರು. ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಮೂಲೆಗುಂಪು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಅಡ್ವಾಣಿ ಆಶೀ ರ್ವಾದದಿಂದಲೇ ಮೋದಿ ಚುನಾವಣೆ ಎದುರಿಸುತ್ತಿದ್ದಾರೆ. ಕೇಂದ್ರ ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ. ಈ ವಿಚಾರದಲ್ಲಿ ಮಾಧ್ಯಮ ಗಳು ಅನವಶ್ಯಕ ಗೊಂದಲ ಸೃಷ್ಟಿ ಮಾಡಬಾರದು ಎಂದು ಮಾಧ್ಯಮಗಳ ವಿರುದ್ಧ ಗರಂ ಆದರು.

ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯದು: ರಾಜ್ಯ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಅದು ಮೇ.23ರ ನಂತರವೂ ಆಗಬಹುದು. ರಾಜ್ಯದಲ್ಲಿ ಸರ್ಕಾರ ಇದೆ ಎಂದೆ ನಿಸುತ್ತಿಲ್ಲ. 37 ಸ್ಥಾನ ಇರುವ ಪಕ್ಷದವರು ಮುಖ್ಯ ಮಂತ್ರಿಯಾಗಿದ್ದಾರೆಂಬುದು ಸಂವಿಧಾನದ ವಿಡಂಬನೆ. ರಾಜ್ಯದ 70 ವರ್ಷದ ಇತಿಹಾಸದಲ್ಲಿ ಸರ್ಕಾರವೇ ಇಲ್ಲ ಎಂಬಂಥ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂದರು.

ಎಲ್ಲರಿಗೂ ಮಾತನಾಡುವ ಅವಕಾಶವಿದೆ: ಅಮಿತ್ ಶಾ ಭಾಷಣದ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂ ಧಿಸಿದಂತೆ ಕೇಳಿದ ಪ್ರಶ್ನೆಗೆ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದರೆ ಸರ್ಕಾರ ಏನೂ ಕೆಲಸ ಮಾಡಿಲ್ಲ ಎಂದೇ ಅರ್ಥ. ಅದನ್ನು ಮುಚ್ಚಿಕೊಳ್ಳಲು ಇತರರಿಗೆ ಮಾತ ನಾಡÀಲು ಅವಕಾಶ ನೀಡುತ್ತಿಲ್ಲ. ಹಿಂದೆ ಇದ್ದ ಕಮ್ಯುನಿಸ್ಟ್ ಸರ್ಕಾರ ಸರಿ ಇಲ್ಲ ಎಂದು ದೀದಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ದೀದಿ ಸಹ ಅದೇ ದಾರಿ ಹಿಡಿದಿದ್ದಾರೆ. ಅವಕಾಶವಿದ್ದರೆ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

Translate »