ಮೌಲ್ಯಮಾಪನದಲ್ಲಿ ಸೇವಾ ಹಿರಿತನ ಪರಿಗಣನೆಗೆ ಆಗ್ರಹಿಸಿ ಕನ್ನಡ ಮೌಲ್ಯಮಾಪಕರ ಪ್ರತಿಭಟನೆ
ಮೈಸೂರು

ಮೌಲ್ಯಮಾಪನದಲ್ಲಿ ಸೇವಾ ಹಿರಿತನ ಪರಿಗಣನೆಗೆ ಆಗ್ರಹಿಸಿ ಕನ್ನಡ ಮೌಲ್ಯಮಾಪಕರ ಪ್ರತಿಭಟನೆ

May 16, 2019

ಮೈಸೂರು: ಮೌಲ್ಯಮಾಪನದಲ್ಲಿ ಸೇವಾ ಹಿರಿತನ ವನ್ನು ಪರಿಗಣಿಸುವಂತೆ ಒತ್ತಾಯಿಸಿ ಕನ್ನಡ ವಿಭಾಗದ ಮೌಲ್ಯಮಾಪಕರು ಮೈಸೂರು ವಿವಿ ಕ್ರಾಫರ್ಡ್ ಭವನದ ಆವರಣದಲ್ಲಿ ಬುಧವಾರ ದಿಢೀರ್ ಪ್ರತಿ ಭಟನೆ ನಡೆಸಿದರು.

ಮೌಲ್ಯಮಾಪನ ಬಹಿಷ್ಕರಿಸಿದ ಮೌಲ್ಯ ಮಾಪಕರು ಕ್ರಾಫರ್ಡ್ ಭವನದ ಆವರಣ ದಲ್ಲಿ ಜಮಾವಣೆಗೊಂಡು ಸೇವಾ ಹಿರಿ ತನ ಆಧಾರದ ಮೇಲೆ ಡಿಸಿ (ಉಪ ಮೌಲ್ಯಮಾಪಕರು) ನೀಡುವಂತೆ ಒತ್ತಾ ಯಿಸಿದರು. ಈ ವೇಳೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾ ಗದ ಮುಖ್ಯಸ್ಥ ಡಾ.ಧನಂಜಯ ಪಾಲ ಹಳ್ಳಿ ಮಾತನಾಡಿ, 22 ವರ್ಷದಿಂದ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಂದಿ ನಿಂದ ಇಂದಿನವರೆಗೂ ಯುಜಿಸಿ/ನಾನ್ ಯುಜಿಸಿ ಎಂಬ ಯಾವುದೇ ತಾರತಮ್ಯ ವಿಲ್ಲದೆ ಸಮಾನತೆಯಿಂದ ಮೌಲ್ಯಮಾಪನ ಮಾಡಲಾಗುತ್ತಿತ್ತು. ವಿಪರ್ಯಾಸವೆಂದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಸೇವಾ ಜೇಷ್ಠತೆಯನ್ನು ಕೈಬಿಟ್ಟು ಕೇವಲ ಯುಜಿಸಿ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದುವರೆಗೂ ಜೇಷ್ಠತೆಯ ಆಧಾರದ ಮೇಲೆ ಉಪಮೌಲ್ಯಮಾಪಕರಾಗಿ(ಡಿಸಿ) ನೇಮಿಸಲಾಗುತ್ತಿತ್ತು. ಆದರೆ, ಇಂದು ಕಾಣದ ಕೈಗಳು ಹುನ್ನಾರ ನಡೆಸಿ, ಅಧ್ಯಾ ಪಕರು ಬೋಧಿಸಿದ ವಿದ್ಯಾರ್ಥಿಗಳನ್ನೇ ಉಪಮೌಲ್ಯಮಾಪಕರಾಗಿ ನೇಮಿಸಲಾ ಗಿದೆ. ಇದರಿಂದ ಹಿರಿತನ ಜೇಷ್ಠತೆ ಹೊಂದಿರುವವರು ಅವರ ಅಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುವಂತಾ ಗಿದೆ. ಬೇರೆ ವಿಭಾಗದಲ್ಲಿ ಈ ರೀತಿಯ ಗೊಂದಲವಿಲ್ಲ. ಆದರೆ, ಕನ್ನಡ ವಿಭಾಗ ದಲ್ಲಿ ಗೊಂದಲ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

25 ವರ್ಷದಿಂದ ಮೌಲ್ಯಮಾಪನ ಕೆಲಸ ಮಾಡುತ್ತಿರುವವರು ಇಂದು ತಾವೇ ಬೋಧಿಸಿದ ವಿದ್ಯಾರ್ಥಿಗಳ ಅಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುವುದು ಅತ್ಯಂತ ನೋವಿನ ಸಂಗತಿ. ಜತೆಗೆ ಅತಿಥಿ ಉಪನ್ಯಾಸಕರಿಗೆ ಸ್ಥಳೀಯ ಭತ್ಯೆಯನ್ನು ನೀಡುತ್ತಿಲ್ಲ. ಒಂದು ವೇಳೆ ಅತಿಥಿ ಉಪ ನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿ ದರೆ ವಿದ್ಯಾರ್ಥಿಗಳಿಗೂ ಸಕಾಲದಲ್ಲಿ ಫಲಿ ತಾಂಶ ಬರುವುದಿಲ್ಲ. ಮೈವಿವಿಯ ಬೆಳ ವಣಿಗೆಯಲ್ಲಿ ಯುಜಿಸಿ ಅವರಿಗಿಂತಲೂ ನಾನ್ ಯುಜಿಸಿ ಉಪನ್ಯಾಸಕರ ಸಿಂಹಪಾಲು ಇದೆ. ಹಾಗಾಗಿ ಮೌಲ್ಯಮಾಪನದಲ್ಲಿ ಸೇವಾ ಹಿರಿತನವನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕನ್ನಡ ವಿಭಾ ಗದ ಹಲವು ಮಂದಿ ಅತಿಥಿ ಉಪನ್ಯಾಸ ಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »