ಹಾವಿನಲ್ಲಿದೆ ಮನುಷ್ಯನ ಜೀವ ರಕ್ಷಕ ಅಂಶಗಳು
ಮೈಸೂರು

ಹಾವಿನಲ್ಲಿದೆ ಮನುಷ್ಯನ ಜೀವ ರಕ್ಷಕ ಅಂಶಗಳು

May 16, 2019

ಮೈಸೂರು: ಹಾವಿನ ವಿಷದಲ್ಲಿ `ಉತ್ಕøಷ್ಟ ಪ್ರೊಟೀನ್’ ಅಂಶ ಇರುವುದರಿಂದ ಮನುಷ್ಯನ ಹಲವು ಚಿಕಿತ್ಸಾ ವಿಧಾನಗಳಲ್ಲಿ ಬಳಕೆಯಾಗುತ್ತಿದೆ ಎಂದು ವಿಜ್ಞಾನಿ ಡಾ.ಕೆ.ಎನ್.ನೀಮಾ ಫ್ರಾಂಕ್ಲಿನ್ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆಯ ಎಸ್.ಪಿ. ಭಟ್ ಸಭಾಂಗಣದಲ್ಲಿ ದಿ ಇನ್‍ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ವತಿ ಯಿಂದ ಏರ್ಪಡಿಸಿದ್ದ `ಚಿಕಿತ್ಸಾ ವಿಧಾನ ದಲ್ಲಿ ಹಾವಿನ ವಿಷದ ಬಳಕೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹಾವಿನ ವಿಷ ಔಷಧಿ ಗುಣಗಳಿಂದ ಕೂಡಿದೆ. ಇದರ ಉಪಯುಕ್ತತೆ ಬಗ್ಗೆ ಅನೇಕ ಸಂಶೋಧಕರು ಸಹ ಸಾಬೀತು ಪಡಿಸಿದ್ದಾರೆ. ವಿಶ್ವದಲ್ಲಿ ಸುಮಾರು 3 ಸಾವಿ ರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇವುಗಳಲ್ಲಿ ಕೇವಲ ಶೇ.30ರಷ್ಟು ಹಾವು ಗಳು ವಿಷಕಾರಿಯಾಗಿವೆ. ಭಾರತದಲ್ಲಿ 200ಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡು ಬರುತ್ತಿದ್ದು, ಕೆಲವೇ ಕೆಲವು ಜಾತಿಯ ಹಾವುಗಳು ವಿಷಕಾರಿಯಾಗಿವೆ ಎಂದರು.

ಪ್ರಪಂಚದಲ್ಲಿ ಪ್ರತಿವರ್ಷ 1.25 ಮಿಲಿ ಯನ್ ಜನರು ಹಾವು ಕಡಿತಕ್ಕೊಳಗಾಗು ತ್ತಾರೆ. ಕೆಲವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮರಣ ಹೊಂದು ತ್ತಿದ್ದಾರೆ. ಇದರ ತೀವ್ರತೆಯನ್ನು ಯಾವುದೇ ಮಾಧ್ಯಮಗಳು ಸಮಾಜಕ್ಕೆ ತಿಳಿಸುತ್ತಿಲ್ಲ ಎಂದ ಅವರು, ವೈದ್ಯಕೀಯ ಕ್ಷೇತ್ರದ ಸಂಶೋಧಕರಿಗೆ ಹಾವಿನ ವಿಷದ ಅಧ್ಯ ಯನ ಚಿನ್ನದ ಗಣಿಯಾಗಿದೆ ಎಂದರೆ ತಪ್ಪಾಗಲಾರದು ಎಂದರು.

ಹಾವಿನ ವಿಷದಲ್ಲಿರುವ ಪ್ರೊಟೀನ್ ಗಳು ರಕ್ತದೊತ್ತಡ, ಕಾನ್ಸರ್, ಅಸ್ತಮಾ, ಹೃದಯಾಘಾತ ಇತರೆ ಚಿಕಿತ್ಸಾ ವಿಧಾನ ಗಳಲ್ಲಿ ಬಳಸಲಾಗುತ್ತಿದೆ. ಆಯುರ್ವೇದ, ಹೋಮಿಯೋಪತಿಗಳ ಚಿಕಿತ್ಸಾ ವಿಧಾನ ದಲ್ಲೂ ಹಾವಿನ ವಿಷ ಬಳಕೆಯಾಗುತ್ತಿದೆ ಎಂದರು. ರೈತರು ಬೆಳದ ಆಹಾರ ಬೆಳೆ ಗಳನ್ನು ನಾಶಪಡಿಸುವ ಇಲಿಗಳ ಹಾವಳಿ ತಪ್ಪಿಸುವಲ್ಲಿ ಹಾವುಗಳ ಪಾತ್ರ ಮಹತ್ವದ್ದು, ಇಂತಹ ಬಹುಪಯೋಗಿ ಪ್ರಾಣಿಯನ್ನು ಪ್ರತಿಯೊಬ್ಬ ನಾಗರಿಕರೂ ರP್ಷÀಣೆ ಮಾಡ ಬೇಕೇ ಹೊರತು ಯಾರೂ ಸಾಯಿಸ ಬಾರದು. ನಾವು ಹಾವುಗಳಿಗೆ ತೊಂದರೆ ಮಾಡಿದರೆ ಮಾತ್ರ ಅವು ನಮ್ಮನ್ನು ಕಚ್ಚುತ್ತವೆ ಎಂದು ತಿಳಿಸಿದರು.

ವಿಷಕಾರಿ ಹಾವುಗಳಿಂದ ಜನರು ಭಾರೀ ಭೀತಿಗೆ ಒಳಗಾಗುತ್ತಾರೆ. ಆದರೂ ಇವು ನಿಸರ್ಗದ ಜೈವಿಕ ಸಂಪನ್ಮೂಲ ವಾಗಿದೆ. ಇದು ಸಂಭಾವ್ಯ ಚಿಕಿತ್ಸಕ. ಇದ ರಲ್ಲಿರುವ ವಿಷದ ಅಂಶವನ್ನು ಬೇರ್ಪಡಿ ಸಿದರೆ, ಆಯುರ್ವೇದ, ಹೋಮಿಯೋ ಪತಿ ಮತ್ತು ಜಾನಪದ ಔಷಧಿಗಳಲ್ಲಿ, ಪಾಥೋ ಫಿಸಿಯಲಾಜಿಕಲ್ ಪರಿಸ್ಥಿತಿ ಗಳಲ್ಲಿ ಹಾವಿನ ವಿಷವನ್ನು ಬಳಸಲಾಗು ತ್ತಿದೆ ಎಂದರು.

ಇನ್ನೂ ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಮೂಲಕ ಹಾವಿನ ವಿಷ `ಉತ್ಕøಷ್ಟ ಪ್ರೊಟೀನ್’ ಎಂದು ಸ್ಥಿರಗೊಂಡಿದೆ. ಈ ವಿಷ ನೇರವಾಗಿ ರಕ್ತ ಸೇರಿದಾಗ ಮಾತ್ರ ಜೀವಕ್ರಿಯೆಗಳಲ್ಲಿ ವ್ಯತ್ಯಯಗಳುಂಟಾಗು ತ್ತದೆ. ಆದರೆ, ಪ್ರತಿ ಬಾರಿಯೂ ಹಾವು ಕಚ್ಚಿದಾಗಲೆಲ್ಲಾ ಕೊಲ್ಲುವಷ್ಟು ಪ್ರಮಾಣದ ವಿಷಕಾರುವುದಿಲ್ಲ. ಹಾವಿನಿಂದ ವಿಷವನ್ನು ಅವೈಜ್ಞಾನಿಕವಾಗಿ ತೆಗೆದು ಶೇಖರಿಸಿಟ್ಟರೆ ಬಹುಪಾಲು ಅದು ನಿರುಪಯೋಗಿ ಎಂದರು. ಈವರೆಗೆ ವೈದ್ಯಕೀಯ ಹಾಗೂ ಔಷಧೀಯ ವಿಜ್ಞಾನಗಳಲ್ಲಿ ಹಲವಾರು ಸಂಶೋಧನೆಗಳು ನಡೆದಿದ್ದು, ಅದರ ಪ್ರಕಾರ ಹಾವಿನ ವಿಷದಿಂದ ಹಲವಾರು ಜೀವರಕ್ಷಕ ಔಷಧಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ವೇದಿಕೆಯಲ್ಲಿ ದಿ ಇನ್‍ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ಡಿ.ಕೆ. ದಿನೇಶ್‍ಕುಮಾರ್ ಉಪಸ್ಥಿತರಿದ್ದರು.

Translate »