ನಾಳೆ ಬಿಜೆಪಿ ಪಟ್ಟಿ ಪ್ರಕಟ
ಮೈಸೂರು

ನಾಳೆ ಬಿಜೆಪಿ ಪಟ್ಟಿ ಪ್ರಕಟ

March 17, 2019

ಬೆಂಗಳೂರು: ರಾಜ್ಯದಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಬಿಜೆಪಿ ಹುರಿಯಾಳುಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಂದಾಗಿದ್ದ ಕಾಂಗ್ರೆಸ್ ದೆಹಲಿಯಲ್ಲಿ ಇಂದು ನಡೆಯಬೇಕಿದ್ದ ಅಭ್ಯರ್ಥಿ ಆಯ್ಕೆ ಸಮಿತಿ ಸಭೆಯನ್ನು ಮಂಗಳ ವಾರಕ್ಕೆ ಮುಂದೂಡಿದೆ. ಮೈತ್ರಿ ಪಕ್ಷದೊಂದಿ ಗಿನ ಸೀಟು ಹೊಂದಾಣಿಕೆ ನಂತರ ಪಕ್ಷದಲ್ಲಿ ಉಂಟಾಗಿರುವ ಗೊಂದಲದಿಂದ ಆಯ್ಕೆ ಸಮಿತಿ ಸಭೆ ಮುಂದೂಡಲಾಗಿದೆ. ಬಿಜೆಪಿ 20ರಿಂದ 22 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಘಟಕಕ್ಕೆ ಶಿಫಾರಸು ಮಾಡುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಸಭೆ ನಡೆಯಲಿದೆ.

ಸುಮಾರು 18 ರಿಂದ 19 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ, ಇಂತಹ ಕ್ಷೇತ್ರಗಳಿಗೆ ಒಬ್ಬರ ಹೆಸರನ್ನು ಶಿಫಾರಸು ಮಾಡಲಿದೆ. ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ತೀರ್ಮಾ ನದಂತೆ ಹಿಂದಿನ ಚುನಾವಣೆಯಲ್ಲಿ ಆಯ್ಕೆ ಗೊಂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಮನವಿ ಮಾಡಲಿದ್ದಾರೆ. ರಾಜ್ಯ ಘಟಕದ ಶಿಫಾರಸ್ಸನ್ನು ಕೇಂದ್ರ ಸಮಿತಿ ಪರಿಶೀಲಿಸಿ, ಸೋಮವಾರ ಸಂಜೆ ವೇಳೆಗೆ ಅಂದರೆ ಮಾರ್ಚ್ 18ರಂದು ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಹಾಲಿ ಎಲ್ಲಾ ಸಂಸದರಿಗೂ ಮತ್ತೆ ಟಿಕೆಟ್ ನೀಡುವಂತೆ ಈಗಾ ಗಲೇ ರಾಜ್ಯಾಧ್ಯಕ್ಷರು ಶಿಫಾರಸು ಮಾಡಲು ನಿರ್ಧರಿಸಿರುವುದಲ್ಲದೆ, ಬೆಂಗಳೂರು ದಕ್ಷಿಣ ಹಾಗೂ ಕಲಬುರಗಿ ಕ್ಷೇತ್ರಕ್ಕೆ ಒಬ್ಬರ ಹೆಸರನ್ನು ಮಾತ್ರ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ. ಮೊದಲ ಹಂತದಲ್ಲೇ 20 ರಿಂದ 22 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡು ಗಡೆಗೊಳ್ಳಲಿದೆ ಎಂದು ಪ್ರಕಟಿಸಿದ್ದರು.
ಕಾಂಗ್ರೆಸ್ ಈಗಾಗಲೇ ತನ್ನ ಪಾಲಿನ 20 ಸ್ಥಾನಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ. ರಾಜ್ಯ ಘಟಕದ ಶಿಫಾರಸಿಗೆ ಸಂಬಂಧಿಸಿದಂತೆ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ರಾಜ್ಯ ನಾಯಕರೊಂದಿಗೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಮೈತ್ರಿ ಪಕ್ಷ ಜೆಡಿಎಸ್‍ನೊಂದಿಗೆ ಸೀಟು ಹೊಂದಾಣಿಕೆಯೂ ಪೂರ್ಣಗೊಂಡಿರು ವುದರಿಂದ ಇಂದೇ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸುವ ತೀರ್ಮಾನ ಕೈಗೊಂಡಿತ್ತು, ಆದರೆ ಇಂದು ನಡೆಯಬೇಕಿದ್ದ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಜೆಡಿಎಸ್ ತನ್ನ ಪಾಲಿನ 8 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಉಳಿದ ಮೂರು ಕ್ಷೇತ್ರಗಳ ಗೊಂದಲ ಮುಂದುವರೆದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಚುನಾವಣಾ ಕಣಕ್ಕೆ ಇಳಿಯುತ್ತಾರಾ, ಒಂದು ವೇಳೆ ಇಳಿದರೆ, ಬೆಂಗಳೂರು ಉತ್ತರವೋ, ತುಮಕೂರು ಕ್ಷೇತ್ರವೋ ಎಂಬ ಜಿಜ್ಞಾಸೆ ಪಕ್ಷದಲ್ಲಿ ಕಾಡುತ್ತಿದೆ. ಪ್ರವಾಸದಲ್ಲಿದ್ದ ಗೌಡರು ಇಂದು ನಗರಕ್ಕೆ ಆಗಮಿಸಿದ್ದು, ತಡರಾತ್ರಿ ಇಲ್ಲವೇ ನಾಳೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Translate »