ಬಿಜೆಪಿ ಜಯಭೇರಿ: ಶಾಸಕ ರಾಮದಾಸ್ ಕೃತಜ್ಞತೆ
ಮೈಸೂರು

ಬಿಜೆಪಿ ಜಯಭೇರಿ: ಶಾಸಕ ರಾಮದಾಸ್ ಕೃತಜ್ಞತೆ

May 24, 2019

ಮೈಸೂರು:  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗೆ ಕಾರಣಕರ್ತರಾದವರಿಗೆ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ. ರಾಮದಾಸ್ ಕೃತಜ್ಞತೆ ಸಲ್ಲಿಸಿದ್ದಾರೆ.

ಬಿಜೆಪಿಗೆ ಅಭೂತಪೂರ್ವ ಬಹುಮತ ನೀಡುವುದರೊಂದಿಗೆ ಚೌಕಿದಾರ್ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಯಾಗಿ ಭಾರತಾಂಬೆಯ ಸೇವೆ ಮಾಡಲು ಜನ ಆಶೀರ್ವದಿಸಿದ್ದಾರೆ. ವರ್ಷದ ಹಿಂದೆ ಇದೇ ದಿನ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಷ್ಟ್ರದ ಅನೇಕ ರಾಜಕೀಯ ನಾಯಕರು ಭಾಗಿಯಾಗಿ `ಮಹಾಘಟಬಂಧನ್’ ರೂಪಿಸಿಕೊಂಡು ಬಿಜೆಪಿ ಮಣಿಸುವ ಸಂಕಲ್ಪ ಮಾಡಿದ್ದರು. ಆದರೆ ಇಂದು ಮೋದಿ ಅಲೆಯಲ್ಲಿ `ಮಹಾ ಘಟಬಂಧನ್’ ಕೊಚ್ಚಿಹೋಗಿದೆ. ಬಿಜೆಪಿಗೆ 300ಕ್ಕೂ ಹೆಚ್ಚು ಸೇರಿದಂತೆ ಎನ್‍ಡಿಎ ಮೈತ್ರಿಕೂಟಕ್ಕೆ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆಶೀರ್ವದಿಸಿ ಗೆಲುವು ನೀಡಿದ್ದಾರೆ. ವಿಪಕ್ಷ ದಲ್ಲಿ ಕೂರುವುದಕ್ಕೂ ಅವಕಾಶ ನೀಡದಂತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಜಾತಿ, ಮತ, ಧರ್ಮದ ಆಧಾರದ ಚುನಾವಣೆಗೆ ಮತದಾರರು ತಿಲಾಂ ಜಲಿ ಹಾಡಿ, ರಾಷ್ಟ್ರೀ ಯತೆ ಹಾಗೂ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಧ್ಯೇಯ ದೊಂದಿಗೆ ದುಡಿ ಯುವ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಬಾರಿಗಿಂತಲೂ ಅತೀ ಹೆಚ್ಚು ಅಂದರೆ 25 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ  ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರಭಾವಿ ಹಾಗೂ ಹಿರಿಯ ನಾಯಕರಿಗೆ ಸೋಲುಣಿಸಿ, ತಕ್ಕ ಪಾಠ ಕಲಿ ಸುವುದರೊಂದಿಗೆ ಇಡೀ ರಾಷ್ಟ್ರಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದಾಗ ಅವರ ಸಮ್ಮುಖದಲ್ಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವನ್ನು “1 ಲಕ್ಷ” ಮತಕ್ಷೇತ್ರವನ್ನಾಗಿಸುವ ಸಂಕಲ್ಪ ಮಾಡಲಾಗಿತ್ತು. ಅದರಂತೆ ನಮ್ಮ ಕಾರ್ಯಕರ್ತ ಪಡೆಯೊಂದಿಗೆ ಹಗಲಿರುಳು ಶ್ರಮಿಸಿದ ಪ್ರತಿಫಲವಾಗಿ ಸುಮಾರು 97 ಸಾವಿರ ಮತ ಬಿಜೆಪಿ ಅಭ್ಯರ್ಥಿಗೆ ದೊರೆ ತಿದೆ. ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಿ ಗಿಂತ ಅತೀ ಹೆಚ್ಚು ಮತ ನೀಡಿದ ಹೆಮ್ಮೆ ನಮ್ಮ ಕ್ಷೇತ್ರದ್ದಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಅಭೂತಪೂರ್ವ ಗೆಲುವು ತಂದು ಕೊಟ್ಟ ಭಾರತಾಂಬೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಅವರಿಗೆ, ಪಕ್ಷದ ರಾಷ್ಟ್ರೀಯರಾದ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂ ರಪ್ಪ, ಪಕ್ಷದ ಎಲ್ಲಾ ನಾಯಕರು, ಚುನಾ ವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳು, ಕಾರ್ಯಕರ್ತ ಬಂಧುಗಳು ಹಾಗೂ ಪ್ರಬುದ್ಧ ಮತದಾರರಿಗೆ ಹೃದಯ ಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇ ನೆಂದು ರಾಮದಾಸ್ ತಿಳಿಸಿದ್ದಾರೆ.

 

Translate »