ರಾಜಕೀಯ ಆಸಕ್ತರ ತುದಿಗಾಲಲ್ಲಿ ನಿಲ್ಲಿಸಿದ್ದ ಮತ ಎಣಿಕೆ
ಮೈಸೂರು

ರಾಜಕೀಯ ಆಸಕ್ತರ ತುದಿಗಾಲಲ್ಲಿ ನಿಲ್ಲಿಸಿದ್ದ ಮತ ಎಣಿಕೆ

May 24, 2019

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಎರಡು ಜಿಲ್ಲೆಗಳ ಜನ ರನ್ನು ಮಾತ್ರವಲ್ಲದೆ, ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗಳೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಮತ ಎಣಿಕೆ ಕೇಂದ್ರದ ಸಿಬ್ಬಂದಿಯೂ ಲೋಕ ಸಮರದ ಫಲಿ ತಾಂಶ ವರದಿ ನೋಡಲು ತವಕಿಸಿದರು.

ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ನಡೆದ ಮತ ಎಣಿಕೆ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರ ಎದೆ ಬಡಿತ ಹೆಚ್ಚುವಂತೆ ಮಾಡಿತ್ತು. ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತಲಾ 2 ಸಮೀಕ್ಷೆಗಳು ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜು ಮಾಡಿದ್ದವು. ಇದ ರಿಂದ ಫಲಿತಾಂಶ ನೋಡಲು ತುದಿಗಾ ಲಲ್ಲಿ ನಿಂತಿದ್ದ ರಾಜಕೀಯ ಆಸಕ್ತರು ಇಂದು ದಿನವಿಡೀ ಟಿವಿ ಮುಂದೆ ಠಿಕಾಣಿ ಹೂಡಿ ದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯ ಕರ್ತರು ಗೆಲುವು ತÀಮ್ಮ ಪಕ್ಷದ ಪಾಲಾಗ ಬಹುದೆಂಬ ನಿರೀಕ್ಷೆಯಲ್ಲಿ ಗುಂಪು ಗುಂಪಾಗಿ ಕುಳಿತು ಟಿವಿ ನೋಡುವ ಮೂಲಕ ದಿನ ದೂಡಿದರು.

ಮತ ಎಣಿಕೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮೈಸೂರಿನ ರಸ್ತೆಗಳು ಬಿಕೋ ಎನ್ನತೊಡಗಿದ್ದವು. ಎಣಿಕಾ ಕೇಂದ್ರ ಸುತ್ತಲೂ ರಾಜಕೀಯ ಪಕ್ಷಗಳ ಕಾರ್ಯ ಕರ್ತರು ಗುಂಪುಗೂಡುವುದನ್ನು ನಿರ್ಬಂ ಧಿಸಲಾಗಿತ್ತು. ಆದರೂ ಕಾರ್ಯಕರ್ತರು ಕುತೂಹಲದಿಂದ ಎಣಿಕಾ ಕೇಂದ್ರದ ಸುತ್ತ ಓಡಾಡುತ್ತಲೇ ಇದ್ದರು. ಮೂರ್ನಾಲ್ಕು ಸುತ್ತು ಗಳ ಬಳಿಕ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಮುನ್ನಡೆ ಅಂತರ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆಯ ಕಾರ್ಮೋಡ ಆವರಿಸತೊಡಗಿತು. ಇದರಿಂದ ಆಸಕ್ತಿ ಕುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಎಣಿಕಾ ಕೇಂದ್ರದ ಬಳಿ ಬರುವುದನ್ನೇ ನಿಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಆರಂ ಭಿಕ ಸುತ್ತಿನಿಂದಲೂ ಮುನ್ನಡೆ ಕಾಯ್ದು ಕೊಳ್ಳುತ್ತಾ ಅಂತರವನ್ನು ಹೆಚ್ಚಿಸಿಕೊಳ್ಳುತ್ತಿರು ವುದನ್ನು ಗಮನಿಸಿದ ಬಿಜೆಪಿ ಕಾರ್ಯ ಕರ್ತರಲ್ಲಿ ಉತ್ಸಾಹ ಹೆಚ್ಚಾಗಿ ಎಣಿಕಾ ಕೇಂದ್ರ ಸೇರಿದಂತೆ ಮೈಸೂರಿನ ವಿವಿಧ ರಸ್ತೆಗಳಲ್ಲಿ ಬಿಜೆಪಿ ಬಾವುಟ ಹಿಡಿದು ಓಡಾಡುವ ಮೂಲಕ ವಿಜಯದ ಸಂಭ್ರಮದಲ್ಲಿ ಮಿಂದೆ ದ್ದರು. ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಮುನ್ನಡೆಯ ಅಂತರ ಲಕ್ಷ ದಾಟುತ್ತಿದ್ದಂತೆಯೇ ಬಿಜೆಪಿ ಕಾರ್ಯ ಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾ ಯಿತು. ವಿಜಯೋತ್ಸವ ಆಚರಣೆ ನಿಷೇ ಧಿಸಿದ್ದರೂ ಬಿಜೆಪಿ ಕಾರ್ಯಕರ್ತರು ವಾಲ್ಮೀಕಿ ಹಾಗೂ ಹುಣಸೂರು ರಸ್ತೆ ಜಂಕ್ಷನ್‍ನಲ್ಲಿ ಪಕ್ಷದ ಬಾವುಟ ಹಿಡಿದು ಕುಣಿಯಲಾ ರಂಭಿಸಿದರು.

ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಲು ಅಣಿಯಾಗುತ್ತಿದ್ದಂತೆ ಅಲ್ಲಿಯೇ ಇದ್ದ ಪೊಲೀಸರು ಪಟಾಕಿ ಯನ್ನು ವಶಕ್ಕೆ ಪಡೆದರು. ವಿಜಯೋತ್ಸವ ನಿಷೇಧಿಸಿರುವುದರಿಂದ ಪಟಾಕಿ ಸಿಡಿಸಲು ಅವಕಾಶವಿಲ್ಲ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.

ಎದೆ ಬಡಿತ ಹೆಚ್ಚಿಸಿದ ವಾಹಿನಿಗಳ ವರದಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ವೇಳೆ ವಾಹಿನಿಗಳಲ್ಲಿ ಪ್ರಸಾರ ಗೊಳ್ಳುತ್ತಿದ್ದ ಬ್ರೇಕಿಂಗ್ ನ್ಯೂಸ್ ಟಿವಿ ನೋಡುತ್ತಿದ್ದವರ ಎದೆ ಬಡಿತ ಹೆಚ್ಚಿಸು ತ್ತಿತ್ತು. ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳು ತ್ತಿರುವ ಸಂದರ್ಭದಲ್ಲಿಯೇ ಒಂದೊಂದು ವಾಹಿನಿಯಲ್ಲಿ ಒಂದೊಂದು ಬ್ರೇಕಿಂಗ್ ನ್ಯೂಸ್ ಬಿತ್ತರವಾಗಿ ಜನರನ್ನು ವಿಚ ಲಿತಗೊಳಿಸಿದವು. ಒಮ್ಮೆ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಎಂದು ಕೆಲವು ವಾಹಿನಿಗಳಲ್ಲಿ ಪ್ರಸಾರವಾದರೆ, ಮತ್ತೆ ಕೆಲವು ವಾಹಿನಿಗಳಲ್ಲಿ ಬಿಜೆಪಿ ಮುನ್ನಡೆ ಎಂದು ಬಿತ್ತರವಾಗುತ್ತಿತ್ತು. ಇದರಿಂದ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದ ಅನೇಕರು ಪತ್ರಿಕಾ ಕಚೇರಿಗೆ ಕರೆ ಮಾಡಿ ಯಾರು ಮುನ್ನಡೆಯಲ್ಲಿದ್ದಾರೆ ಎಂದು ಕೇಳಲು ಮುಗಿಬಿದ್ದಿದ್ದರು.

Translate »