ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ
ಹಾಸನ

ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ

June 18, 2018

ಬೇಲೂರು: ಅನುಘಟ್ಟ ತಾಪಂಗೆ ನಡೆದ ಉಪಚುನಾವಣೆ ಫಲಿತಾಂಶ ಹೊರ ಬಿದ್ದು, ಬಿಜೆಪಿ ಅಭ್ಯರ್ಥಿ ಶಶಿಕುಮಾರ್ ಜಯಗಳಿಸಿದ್ದಾರೆ.

ಬಿಜೆಪಿ ಸದಸ್ಯ ನವಿಲಹಳ್ಳಿ ಕಿಟ್ಟಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿ ಶಶಿಕುಮಾರ್ 2,311 ಮತಗಳನ್ನು ಪಡೆದು 147 ಮತಗಳ ಅಂತರದಿಂದ ಜಯಶಾಲಿಯಾದರು. ಇವರ ಪ್ರತಿಸ್ಪರ್ಧಿ ಜೆಡಿಎಸ್ ಎಂ.ಚೇತನಕುಮಾರ್ 2,164 ಮತಗಳನ್ನು ಪಡೆದು ಪರಾಭವಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಅರುಣ 257 ಮತಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವಿಜಯೋತ್ಸವ: ಇಂದು ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಶಶಿಕುಮಾರ್ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಿಕ್ಕೋಡಿನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ರಾಜ್ಯ ರೈತಮೋರ್ಚಾ ಅಧ್ಯಕ್ಷ ರೇಣುಕುಮಾರ್ ಪ್ರಮುಖರಾದ ಅರುಣಕುಮಾರ್, ಲೋಕೇಶ್, ಸಂತೋಷ್ ಇತರರಿದ್ದರು.

Translate »