ಮೈಸೂರು, ಜ. 17(ಆರ್‍ಕೆ)- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಸುರಕ್ಷತೆ ಹಾಗೂ ಭದ್ರತೆಗಾಗಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ `ಬಾಂಬ್ ಸೂಟ್’ ಖರೀದಿ ಸಲಾಗಿದೆ. ಮೂರು ದಿನಗಳ ಹಿಂದಷ್ಟೇ 25 ಲಕ್ಷ ರೂ. ಮೌಲ್ಯದ ಈ ಬಾಂಬ್ ಸೂಟ್ ಖರೀದಿಸ ಲಾಗಿದೆ. ಈ ಸೂಟ್ ಬಾಂಬ್ ನಿಷ್ಕ್ರಿಯಗೊಳಿಸಲು ಸಹಕಾರಿಯಾಗಲಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ. ಈ ಬಾಂಬ್ ಸೂಟ್, ಸ್ಫೋಟಕಗಳನ್ನು ನಿಷ್ಕ್ರಿಯಗೊಳಿ ಸುವ ವೇಳೆ ಬಳಸಲಾಗುತ್ತದೆ. ಸ್ಫೋಟ ಸಂಭವಿಸಿದರೂ ಈ ಸೂಟ್ ಧರಿಸುವ ವ್ಯಕ್ತಿಗೆ ಪ್ರಾಣಾಪಾಯವಾಗುವುದಿಲ್ಲ.
ಬಾಂಬ್ ನಿಷ್ಕ್ರಿಯಗೊಳಿಸುವ ಅತ್ಯಾಧುನಿಕ ತಂತ್ರ ಹಾಗೂ ವಿಧಾನಗಳನ್ನು ಅನುಸರಿಸುವುದರಿಂದ ಈ ಸೂಟ್ ಅತ್ಯಂತ ಸುರಕ್ಷತಾ ಸಾಧನವಾಗಿದೆ ಎಂದು ತಿಳಿಸಿದರು. ಕೆಲವೊಮ್ಮೆ ಸ್ಫೋಟದಿಂದ ಹೊರ ಹೊಮ್ಮುವ ರಾಸಾಯನಿಕ ವಸ್ತುಗಳು ಎಷ್ಟೇ ಅಪಾಯಕಾರಿಯಾದರೂ, ಈ ಸೂಟ್ ರಕ್ಷಣೆ ನೀಡಿ ಯಾವುದೇ ಪ್ರಾಣಾಪಾಯವಾಗದಂತೆ ತಡೆಯು ತ್ತದೆ. ಹೆಲ್ಮೆಟ್ ಸಹ ಇರುವುದರಿಂದ ಆ ವ್ಯಕ್ತಿಯ ಯಾವುದೇ ಅಂಗಾಂಗಕ್ಕೂ ಮಾರಣಾಂತಿಕ ಗಾಯವಾಗದಂತೆ ತಡೆಯುತ್ತದೆ.
ಮಂಡಕಳ್ಳಿ ವಿಮಾನ ನಿಲ್ದಾಣ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಚಟುವಟಿಕೆಯಿಂದ ಕೂಡಿದೆ. ದಿನವಿಡೀ ವಿಮಾನಗಳು ಹಾರಾಟ ನಡೆಸುತ್ತಿರುವು ದರಿಂದ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಕಾರಣ, ಸುರಕ್ಷತೆಯತ್ತ ಗಮನಹರಿಸುವುದೂ ಅವಶ್ಯಕ ವಾಗಿದೆ ಎಂದು ಮಂಜುನಾಥ ನುಡಿದರು.
ವಿಮಾನ ನಿಲ್ದಾಣದ ಭದ್ರತೆಯನ್ನು ಈಗ ಸ್ಥಳೀಯ ಪೊಲೀಸರು ಯಶಸ್ವಿಯಾಗಿ ನಿಭಾ ಯಿಸುತ್ತಿದ್ದಾರೆ. ಚಟುವಟಿಕೆ ಹೆಚ್ಚಿರುವ ಕಾರಣ ತರಬೇತಿ ಹೊಂದಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಏSISಈ)ಯ 50 ಭದ್ರತಾ ಸಿಬ್ಬಂದಿ ಒದಗಿಸಬೇಕೆಂದು ಸರ್ಕಾರ ವನ್ನು ಕೇಳಿಕೊಂಡಿದ್ದೇವೆ. ಪ್ರಸ್ತಾವನೆಗೆ ಗೃಹ ಇಲಾಖೆ ಸ್ಪಂದಿಸಿದೆ ಎಂದು ತಿಳಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿನ ಗಿಡಗಂಟಿ ತೆಗೆಸಿ ಸ್ವಚ್ಛಗೊಳಿಸಲಾಗುತ್ತಿದೆ. ಅರಣ್ಯ ಇಲಾಖೆಯೂ ಸಹ ನಮ್ಮೊಂದಿಗೆ ಸಹಕರಿಸುತ್ತಿದೆ. ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ಜತೆಗೆ ವಿಮಾನ ನಿಲ್ದಾಣದ ಭದ್ರತೆಗೂ ಆದ್ಯತೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.