ಹೆಬ್ಬಾಳು ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳವು
ಮೈಸೂರು

ಹೆಬ್ಬಾಳು ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳವು

May 3, 2019

ಮೈಸೂರು:-ಮನೆ ಬೀಗ ಮುರಿದು 65 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನ-ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳಿನಲ್ಲಿ ಏ.27ರಂದು ನಡೆದಿದೆ. ಹೆಬ್ಬಾಳು 1ನೇ ಹಂತದ ಮನೋಹರ್ ಸಿಂಗ್ ಎಂಬು ವರ ಮನೆಯಲ್ಲಿ 464 ಗ್ರಾಂ ಚಿನ್ನದ ಆಭರಣ, 58 ಕೆ.ಜಿ. ಬೆಳ್ಳಿ ಪದಾರ್ಥಗಳು ಹಾಗೂ 1.4 ಲಕ್ಷ ರೂ. ನಗದನ್ನು ಕಳ್ಳರು ದೋಚಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಕುವೆಂಪುನಗರ ದಲ್ಲಿರುವ ಅತ್ತೆ ಮನೆಗೆ ಬಿಟ್ಟು ಮನೋಹರ್ ಸಿಂಗ್ ಅವರು ಏ.26ರಂದು ರಾಜಸ್ಥಾನ್‍ಗೆ ವ್ಯಾಪಾರದ ಮೇಲೆ ತೆರಳಿದ್ದರು. ಏಪ್ರಿಲ್ 28ರಂದು ವಾಪಸ್ ಬಂದಾಗ ಮನೆಯ ಮುಂದಿನ ಬಾಗಿಲ ಬೀಗ ಮುರಿದಿತ್ತು. ಒಳಗೆ ನೋಡಿದಾಗ ಕೊಠಡಿಯ ಅಲ್ಮೇರಾದಲ್ಲಿದ್ದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ ನಾಪತ್ತೆ ಯಾಗಿರುವುದು ತಿಳಿಯಿತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತೆರಳಿದ ಹೆಬ್ಬಾಳು ಠಾಣೆ ಪೊಲೀಸರು, ಮಹ ಜರು ನಡೆಸಿದರು. ಶ್ವಾನ ದಳ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡಿ ರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಮನೆಗೆ ಬೀಗ ಹಾಕಿ ಹೊರ ಊರುಗಳಿಗೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಹ್ಯಾಂಗಿಂಗ್ ಲಾಕ್ ಮಾಡಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

Translate »