ಗ್ರಂಥಾಲಯ ನಿರ್ಮಾಣಕ್ಕೆ ಸಿಎ  ಸೈಟ್ ಮಂಜೂರಾತಿ ಪತ್ರ ವಿತರಣೆ
ಮೈಸೂರು

ಗ್ರಂಥಾಲಯ ನಿರ್ಮಾಣಕ್ಕೆ ಸಿಎ  ಸೈಟ್ ಮಂಜೂರಾತಿ ಪತ್ರ ವಿತರಣೆ

July 19, 2018

ಮೈಸೂರು: ಮೈಸೂರಿನ ದೇವನೂರು 3ನೇ ಹಂತದಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ಸಿಎ ನಿವೇಶನದ ಹಂಚಿಕೆ ಪತ್ರವನ್ನು ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವರು ಎನ್.ಆರ್. ಕ್ಷೇತ್ರದ ಶಾಸಕರಾದ ಮಾಜಿ ಸಚಿವ ತನ್ವೀರ್ ಸೇಟ್ ಅವರಿಗೆ ಇಂದು ಹಸ್ತಾಂತರಿಸಿದರು.

29ಘಿ36 ಮೀಟರ್ ವಿಸ್ತೀರ್ಣ (1,044 ಚ.ಮೀ.)ದ ನಿವೇಶನದಲ್ಲಿ ಗ್ರಂಥಾಲಯ ಇಲಾಖೆಯು ದೇವನೂರು 3ನೇ ಹಂತದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ ವಾಚನಾಲಯ ಸೌಲಭ್ಯ ಒದಗಿಸಲು ಮುಡಾದಿಂದ ಸಿಎ ನಿವೇಶನ ಮಂಜೂರು ಮಾಡಲಾಗಿದೆ ಎಂದು ತನ್ವೀರ್ ಸೇಟ್ ತಿಳಿಸಿದರು.

ಈ ಸಂದರ್ಭ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ, ಮುಡಾ ಕಾರ್ಯದರ್ಶಿ ಎಂ.ಕೆ.ಸವಿತ, ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ. ಸುರೇಶಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ, ಸಹಾಯಕ ನಿರ್ದೇಶಕ ಪಿ.ಎಸ್.ನಟರಾಜು ಹಾಗೂ ಇತರರು ಹಾಜರಿದ್ದರು.

Translate »