ಸಚಿವ ಸಂಪುಟ ವಿಸ್ತರಣೆ, ಖಾತೆ  ಸಂಬಂಧ ಇಂದು ಅಂತಿಮ ನಿರ್ಧಾರ: ರೇವಣ್ಣ-ಡಿಕೆಶಿ ನಡುವೆ ವಾಕ್ಸಮರ
ಮೈಸೂರು

ಸಚಿವ ಸಂಪುಟ ವಿಸ್ತರಣೆ, ಖಾತೆ  ಸಂಬಂಧ ಇಂದು ಅಂತಿಮ ನಿರ್ಧಾರ: ರೇವಣ್ಣ-ಡಿಕೆಶಿ ನಡುವೆ ವಾಕ್ಸಮರ

June 1, 2018

ಬೆಂಗಳೂರು:  ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾಳೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಗಳಿವೆ. ಈ ಸಂಬಂಧ ಇಂದು ಐಷಾರಾಮಿ ಹೋಟೆಲೊಂದರಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಸಹ ಪಾಲ್ಗೊಂಡಿದ್ದರು. ಸಭೆಯ ಮುಕ್ತಾಯದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ

ಕುಮಾರಸ್ವಾಮಿ, ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ಫಲಪ್ರದ ವಾಗಿದೆ. ದೆಹಲಿ ಮುಖಂಡರ ಮಾತು ಕತೆಯ ನಂತರ ಅಂತಿಮಗೊಳ್ಳಲಿದೆ. ನಾಳೆ ನಾನು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣು ಗೋಪಾಲ್ ಚರ್ಚೆ ನಡೆಸಲಿದ್ದೇವೆ. ಈ ವೇಳೆ ಸಚಿವ ಸಂಪುಟ ರಚನೆ, ಖಾತೆಗಳ ಹಂಚಿಕೆ ಹಾಗೂ ಸಮನ್ವಯ ಸಮಿತಿ ರಚನೆ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ. ಜೊತೆಗೆ ಸಂಜೆ ವೇಳೆಗೆ ಈ ಸಂಬಂಧ ಜಂಟಿ ಪತ್ರಿಕಾಗೋಷ್ಠಿಯನ್ನು ಕರೆದು ಪ್ರಕಟಿಸಲಿದ್ದೇವೆ ಎಂದರು. ಈ ಎಲ್ಲಾ ಬೆಳವಣ ಗೆಗಳನ್ನು ಗಮನಿಸಿದರೆ, ಒಂದೆರಡು ದಿನಗಳಲ್ಲಿ ಸಂಪುಟ ಪುನರ್ರಚನೆಯಾಗಿ ಖಾತೆಗಳ ಹಂಚಿಕೆಯೂ ನಡೆದು, ಪೂರ್ಣ ಪ್ರಮಾಣದಲ್ಲಿ ಸರ್ಕಾರ ಕಾರ್ಯನಿರ್ವಹಿಸುವುದು ನಿಚ್ಚಳವಾಗಿದೆ.

ರೇವಣ್ಣ-ಡಿಕೆಶಿ ವಾಕ್ಸಮರ: ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಜೆಡಿಎಸ್‍ನ ಹೆಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರ ನಡೆಯಿತು ಎಂದು ಬಲ್ಲ ಮೂಲಗಳು ತಿಳಿಸಿವೆ. ಇಂಧನ ಖಾತೆಗೆ ಸಂಬಂಧಿಸಿದಂತೆ ಹೆಚ್.ಡಿ.ರೇವಣ್ಣ ಪ್ರಸ್ತಾಪಿಸಿದಾಗ, ಮಧ್ಯೆ ಪ್ರವೇಶಿಸಿದ ಡಿ.ಕೆ.ಶಿವಕುಮಾರ್, ರೇವಣ್ಣ ಇಂಧನ ಖಾತೆ ಬಗ್ಗೆ ನೀನು ಮಾತನಾಡಬೇಡ ಎಂದು ಸೂಚಿಸಿದ್ದಾರೆ. ಈ ವೇಳೆ ರೇವಣ್ಣ, ನಾನು ನಿನ್ನ ಜೊತೆ ಮಾತನಾಡಲು ಬಂದಿಲ್ಲ. ಕಾಂಗ್ರೆಸ್ ನಾಯಕ ರೊಂದಿಗೆ ಮಾತನಾಡುತ್ತೇನೆಂದು ಪ್ರತ್ಯುತ್ತರ ನೀಡಿದ್ದಾರೆ. ಗರಂ ಆದ ಡಿಕೆಶಿ, ಮತ್ತೆ ಹೇಳುತ್ತಿದ್ದೇನೆ. ಆ ವಿಚಾರ ಪ್ರಸ್ತಾಪ ಮಾಡಬೇಡ ಎಂದಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಉಭಯ ಪಕ್ಷಗಳ ಮುಖಂಡರು ಇಬ್ಬರನ್ನು ಸಮಾಧಾನಪಡಿಸಿದ್ದಾರೆ.

Translate »