ಪೌರತ್ವ ತಿದ್ದುಪಡಿ ಕಾಯ್ದೆಯ ಸಮಗ್ರ ಮಾಹಿತಿ ನೀಡಲು ಕರೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆಯ ಸಮಗ್ರ ಮಾಹಿತಿ ನೀಡಲು ಕರೆ

January 7, 2020

ಸೋಮವಾರಪೇಟೆ, ಜ.6- ಪೌರತ್ವ ತಿದ್ದು ಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಸೇರಿ ದಂತೆ ಇತರೆ ಪಕ್ಷಗಳು ಮುಸ್ಲಿಂ ಸಮು ದಾಯಕ್ಕೆ ತಪ್ಪು ಸಂದೇಶ ರವಾನಿಸಿ ಸರ್ಕಾ ರದ ವಿರುದ್ಧ ಎತ್ತಿಕಟ್ಟುತ್ತಿದ್ದು, ಈ ಬಗ್ಗೆ ಪ್ರತಿ ಮನೆಗೆ ಬಿಜೆಪಿ ಕಾರ್ಯಕರ್ತರು ತೆರಳಿ ಕಾಯ್ದೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಸೋಮ ವಾರಪೇಟೆಯ ಬಿಜೆಪಿ ಮಂಡಲ ವತಿ ಯಿಂದ ಆಯೋಜಿಸಿದ್ದ ಜನಜಾಗೃತಿ ಅಭಿ ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರತ್ವ ಕಾಯ್ದೆಯ ಬಗ್ಗೆ ಇತರೆ ಪಕ್ಷಗಳು ಮುಸ್ಲಿಂ ಸಮು ದಾಯದಲ್ಲಿ ಅನಗತ್ಯ ಆತಂಕ ಸೃಷ್ಟಿಸುತ್ತಿವೆ. ಪ್ರತಿಭಟನೆಯಲ್ಲಿ ಭಾಗ ವಹಿಸಿದ ಬಹುತೇಕ ಮಂದಿಗೆ ತಾವು ಯಾವ ಕಾರಣಕ್ಕೆ ಪ್ರತಿ ಭಟನೆ ಮಾಡುತ್ತಿದ್ದೇವೆ ಎಂಬುದರ ಮಾಹಿತಿಯೇ ಇಲ್ಲದಾಗಿದೆ ಎಂದರು.

ಮಂಗಳೂರಿನಲ್ಲಿ ನಡೆದ ಹಿಂಸಾಚಾ ರಕ್ಕೆ ಶಾಸಕ ಯು.ಟಿ.ಖಾದರ್‍ರ ಹೇಳಿ ಕೆಯೇ ಕಾರಣವಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾರ್ವ ಜನಿಕ ಆಸ್ತಿಪಾಸ್ತಿ ಹಾನಿಯನ್ನು ದಂಗೆಕೋರ ರಿಂದಲೇ ಭರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಕಾರ್ಯ ಕರ್ತರು ಪ್ರತಿ ಮನೆಗೆ ತೆರಳಿ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು. ಕಾಯ್ದೆಯನ್ನು ಬೆಂಬಲಿಸಿ ಭಾರತ್ ಮಾತಾ ಪೂಜನಾ, ಜನಜಾಗೃತಿ ಸಭೆ, ಸಂವಾದ, ಸಹಿ ಸಂಗ್ರಹ, ಪೋಸ್ಟ್ ಕಾರ್ಡ್ ಆಂದೋಲನ ನಡೆಸಬೇಕು ಎಂದರು.

ಜ. 17ರಂದು ಮಡಿಕೇರಿಯಲ್ಲಿ ಕಾಯ್ದೆ ಯನ್ನು ಬೆಂಬಲಿಸಿ ಬೃಹತ್ ಸಮಾವೇಶ ನಡೆಯಲಿದ್ದು, ಕನಿಷ್ಟ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ಇಂತಹ ಕಾಯ್ದೆಗಳು ಅವಶ್ಯವಾಗಿದ್ದು, ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರೇ ಈ ಬಗ್ಗೆ ಒತ್ತಾಯಿಸಿದ್ದರು. ಆದರೆ ಇಂದು ಕಾಂಗ್ರೆಸ್ ಮುಸ್ಲಿಂ ಸಮುದಾಯ ವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಸಮಿತಿ ಅಧ್ಯಕ್ಷ ಕೊಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ಚಂಗಪ್ಪ, ತಾಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉಪಸ್ಥಿತರಿದ್ದರು.

Translate »