ರಸ್ತೆ ವಿಸ್ತರಣೆಗೆ ಸ್ಥಳೀಯರು ಸಹಕರಿಸಿ: ಶಾಸಕ ಕೆ.ಜಿ.ಬೋಪಯ್ಯ ಮನವಿ
ಕೊಡಗು

ರಸ್ತೆ ವಿಸ್ತರಣೆಗೆ ಸ್ಥಳೀಯರು ಸಹಕರಿಸಿ: ಶಾಸಕ ಕೆ.ಜಿ.ಬೋಪಯ್ಯ ಮನವಿ

January 7, 2020

ವೀರಾಜಪೇಟೆ, ಜ.6- ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸ್ಥಳೀಯ ನಿವಾಸಿಗಳು ರಸ್ತೆ ವಿಸ್ತರಣೆಗೆ ಸಹಕಾರ ನೀಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್‍ಬಿಐ ಬ್ಯಾಂಕ್ ಮುಂಭಾಗದ ರಸ್ತೆ ಡಾಂಬರೀ ಕರಣ, ಮಠದ ಗದ್ದೆ ಬಳಿಯಿಂದ ಚರ್ಚ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ದರ್ಜೆ ಮತ್ತು ಶಿವಕೇರಿಯಲ್ಲಿರುವ ನೀರಿನ ಶುದ್ಧೀಕರಣ ಟ್ಯಾಂಕ್ ಬಳಿ ಪಂಚಾಯಿತಿ ಸಿಬ್ಬಂದಿ, ಅಧಿ ಕಾರಿಗಳಿಗೆ ನೂತನ ವಸತಿ ಗೃಹ ನಿರ್ಮಾಣ ಸೇರಿ ಒಟ್ಟು 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣದ ಅನೇಕ ಭಾಗದಲ್ಲಿ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪಟ್ಟಣ ವ್ಯಾಪ್ತಿಯ ಇತರೆ ಡೆಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಗಳಿಗೆ 84 ಲಕ್ಷ ರೂ. ವೆಚ್ಚದಲ್ಲಿ ಕಾಮ ಗಾರಿಗಳು ನಡೆಯಲಿದೆ. 114 ಲಕ್ಷ ರೂ. ಅನುದಾನದಡಿ 8 ವಸತಿ ಗೃಹ ನಿರ್ಮಾಣ ಗೊಳ್ಳಲಿದೆ. ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದಂತೆ ಗುತ್ತಿಗೆದಾರರು ನಿಗ ದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಕಾಮಗಾರಿ ಬಗ್ಗೆ ಮುತು ವರ್ಜಿ ವಹಿಸಿಸಬೇಕು. ಜನರಿಗೆ ಹಂತ ಹಂತವಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸ ಲಾಗುತ್ತಿದ್ದು, ಮುಖ್ಯವಾಗಿ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ವಾಹನ ಸಂಚಾರಕ್ಕೆ ರಸ್ತೆ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮಾತನಾಡಿ, ಪಂಚಾಯಿತಿ ಸಿಬ್ಬಂದಿಗಳಿಗೆ ವಸತಿ ಗೃಹ ಇಲ್ಲದ ಕಾರಣ ಶಾಸಕರನ್ನು ಭೇಟಿ ಮಾಡಿ ವಸತಿ ಗೃಹ ಕೋರಿ ಮನವಿ ಸಲ್ಲಿಸಲಾಗಿತ್ತು. ಶಾಸಕರು ಇದಕ್ಕೆ ಸ್ಪಂದಿಸಿ ತಮ್ಮ ಪ್ರಯತ್ನದಿಂದ ಅನು ದಾನ ಒದಗಿಸಿಕೊಟ್ಟಿದ್ದಾರೆ ಎಂದರು.

ಅರಸುನಗರದ ಪಂಪ್‍ಹೌಸ್ ಹಿಂಭಾ ಗದ ತಡೆಗೊಡೆ ಮತ್ತು ಮೆಟ್ಟಿಲು ನಿರ್ಮಾ ಣಕ್ಕೆ 17.15 ಲಕ್ಷ, ಗಣಪತಿ ಬೀದಿ ರಸ್ತೆ ಮತ್ತು ತಡೆಗೊಡೆ ನಿರ್ಮಾಣ 6.95 ಲಕ್ಷ, ನಗರದ ಆಯ್ದ ಭಾಗಗಳಲ್ಲಿ ಕುಡಿಯುವ ನೀರು ಮತ್ತು ಕೊಳವೆ ಭಾವಿ ಕಾರ್ಯಕ್ಕೆ 10 ಲಕ್ಷ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಮತ್ತು ಗಾಂಧಿನಗರ ರಸ್ತೆ, ಮಠದ ಗದ್ದೆ ರಸ್ತೆ, ಅಪ್ಪಯ್ಯಸ್ವಾಮಿ ರಸ್ತೆ, ಶಾಂತ ಚಿತ್ರ ಮಂದಿರ ಮುಂಭಾಗದಿಂದ ಕಾವೇರಿ ಆಶ್ರಮದವರೆಗಿನ ರಸ್ತೆ ಅಭಿವೃದ್ಧಿ, ಸುಭಾಷ್ ನಗರದಿಂದ ನೆಹರು ನಗರ ಸಂಪರ್ಕಿಸುವ ರಸ್ತೆ, ವಿಜಯನಗರ ರಸ್ತೆ, ನಿಸರ್ಗ ಬಡಾ ವಣೆ ರಸ್ತೆ ಕಾಮಗಾರಿಗಾಗಿ 46.13 ಲಕ್ಷ, ಮಳೆ ನೀರು ಚರಂಡಿ ಕಾಮಗಾರಿಗೆ 6.59 ಲಕ್ಷ ಅನುದಾನದಡಿ ಕಾಮಗಾರಿ ನಡೆಸ ಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಪಪಂ ಸದಸ್ಯರಾದ ಎಸ್. ಹೆಚ್.ಮತೀನ್, ಸಿ.ಕೆ.ಪ್ರಥ್ವಿನಾಥ್, ಮನೆ ಯಪಂಡ ದೇಚಮ್ಮ, ಡಿ.ಪಿ.ರಾಜೇಶ್, ಹರ್ಷವರ್ಧನ್, ಸುನೀತಾ, ಬೊಪ್ಪಂಡ ಜೂನಾ, ಆಶಾ ಸುಬ್ಬಯ್ಯ, ಅನಿತಾ ಕುಮಾರ್, ಪೂರ್ಣಿಮ, ಸುಶ್ಮೀತ, ಯಶೋಧ ಫಸೀಯಾ ತಬ್ಸಂ, ರಜನಿಕಾಂತ್, ತಹಶೀ ಲ್ದಾರ್ ಮಹೇಶ್, ಪಂಚಾಯಿತಿ ಅಭಿಯಂ ತರ ಹೇಮ್‍ಕುಮಾರ್, ಬಿಜೆಪಿಯ ಪಟ್ರ ಪಂಡ ರಘು ನಾಣಯ್ಯ, ಗುತ್ತಿಗೆದಾರ ರಂಗಸ್ವಾಮಿ ರೆಡ್ಡಿ, ಬಿ.ಆರ್.ರವಿ ಸೇರಿ ದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

Translate »