ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸಲು ಕರೆ
ಚಾಮರಾಜನಗರ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸಲು ಕರೆ

September 26, 2018

ಚಾಮರಾಜನಗರ:  ಪ್ರತಿ ಯೊಬ್ಬ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾ ಖೆಯ ಉಪನಿದೇರ್ಶಕಿ ವಿ.ಆರ್. ಶ್ಯಾಮಲಾ ಕರೆ ನೀಡಿದರು.

ನಗರದ ರಾಮಸಮುದ್ರದ ಸೆಂಟ್ ಫ್ರಾನ್ಸೀಸ್ ಪದವಿಪೂರ್ವ ಕಾಲೇಜು ಆವ ರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ವಿದ್ಯಾವಿಕಾಸ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕಾಲೇಜು ಆಗಲಿ, ಖಾಸಗಿ ಕಾಲೇಜು ಆಗಲಿ ಶಿಕ್ಷಣ ಒಂದೆ. ಉಪನ್ಯಾಸಕರು ಬೋಧನೆ ಮಾಡುವಾಗ ವಿದ್ಯಾರ್ಥಿಗಳು ಬೇರೆಡೆ ಗಮನ ಹರಿ ಸದೇ ಶಿಕ್ಷಣದ ಕಡೆ ಗಮನ ಹರಿಸಿ ವಿದ್ಯಾ ಬ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.

2017-18ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 6 ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ಬಂದಿದೆ. 2018-19ರ ಫಲಿತಾಂಶದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಗಳಿಸಿ ಗಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಉಪನ್ಯಾಸಕರಿಗೆ ಸಲಹೆ ನೀಡಿದರು. ಪ್ರತಿ ತಾಲೂಕು ಕೇಂದ್ರದಲ್ಲೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಎಲ್ಲಿ ಉಪನ್ಯಾಸಕರ ಕೊರತೆ ಇದೆ. ಅಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿ ಸಲಾಗುವುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾ ವಿಕಾಸ ಸ್ವತಂತ್ರ ಪದವಿಪೂರ್ವ ಕಾಲೇ ಜಿನ ಪ್ರಾಂಶುಪಾಲ ಬಿ.ಎಸ್.ಕೃಷ್ಣಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಅಧ್ಯಕ್ಷ ಮಂಜುನಾಥ್ ಪ್ರಸನ್ನ (ಮಂಜುಕೋಡಿಉಗನೆ), ಪ್ರಾಂಶುಪಾಲ ಜೋಸೆಫ್ ಕುಮಾರ್, ಮೂರ್ತಿ, ಲೋಕೇಶ್, ರಂಗಸ್ವಾಮಿ, ಡಿ.ಎಸ್.ಕೃಷ್ಣ ಮೂರ್ತಿ, ಉಪನ್ಯಾಸಕರಾದ ಮಹದೇವಪ್ರಭು ಎಸ್, ಜೆ.ಕುಸುಮ, ಜೆ. ಕುಮಾರಿ, ವಿದ್ಯಾಶ್ರೀ, ರಮ್ಯ, ಸೌಮ್ಯ, ಮೌನಶ್ರೀ, ಅನುರಾಜ್, ರಾಜೇಂದ್ರ, ಸೇರಿದಂತೆ ತಾಲೂಕಿನ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಜರಿದ್ದರು.

Translate »