ಉಸ್ತುವಾರಿ ಸಚಿವರಿಂದ ಹಾಲಿನ ಡೈರಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಉಸ್ತುವಾರಿ ಸಚಿವರಿಂದ ಹಾಲಿನ ಡೈರಿ ಕಾಮಗಾರಿ ಪರಿಶೀಲನೆ

September 26, 2018

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದಲ್ಲಿ ಪ್ರಗತಿಯಲ್ಲಿರುವ ಮಹತ್ವಾಕಾಂಕ್ಷಿ ಹಾಲಿನ ಡೈರಿ ನಿರ್ಮಾಣ ಕಾಮಗಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಇಂದು ಪರಿಶೀಲಿಸಿದರು.

ಒಟ್ಟು 3 ಲಕ್ಷ ಲೀಟರ್ ಯೋಜನಾ ಸಾಮಥ್ರ್ಯದ (5 ಲಕ್ಷ ಲೀಟರ್‍ಗೆ ವಿಸ್ತರಿ ಸುವ ಸಾಮಥ್ರ್ಯದ) ಹಾಲು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಪೂರಕವಾಗಿ ಕೈಗೊಂ ಡಿರುವ ವಿವಿಧ ಘಟಕ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು.

2 ಲಕ್ಷ ಲೀಟರ್ ಸಾಮಥ್ರ್ಯದ ಯುಎಚ್‍ಟಿ ಹಾಲಿನ ಘಟಕ, 30 ಸಾವಿರ ಲೀಟರ್ ಸಾಮಥ್ರ್ಯದ ಮೊಸರು ತಯಾರಿಕಾ ಸ್ಥಾವರ, 4 ಸಾವಿರ ಕೆಜಿ ಬೆಣ್ಣೆ, 3 ಸಾವಿರ ಲೀಟರ್ ತುಪ್ಪ ತಯಾರಿಕೆಗಾಗಿ ನಿರ್ಮಾಣ ಗೊಳ್ಳುತ್ತಿರುವ ಪ್ರತ್ಯೇಕ ಘಟಕಗಳು ಹಾಗೂ ಇದಕ್ಕೆ ಸಂಬಂಧಿಸಿದ ಯಂತ್ರೋ ಪಕರಣಗಳ ಅಳವಡಿಕೆ ಕೆಲಸವನ್ನು ಸಚಿ ವರು ಪರಿಶೀಲಿಸಿ ಮಾಹಿತಿ ಪಡೆದರು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವಂತೆಯೂ ಸಚಿವರು ಸೂಚಿಸಿದರು.

ಘಟಕ ನಿರ್ಮಾಣ ಕೆಲಸ ಪರಿಶೀಲನೆ ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಮೈಸೂರಿನಿಂದ ಪ್ರತ್ಯೇಕ ಗೊಂಡು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಕಾರ್ಯ ನಿರ್ವಹಣೆ ಮಾಡು ತ್ತಿದೆ. ಆಗಸ್ಟ್ 2015ರಿಂದಲೇ ಸಿವಿಲ್ ಕೆಲಸಗಳು ಪ್ರಾರಂಭವಾದವು. 2016ರಲ್ಲಿ ಯಂತ್ರೋಪಕರಣಗಳ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇಟಿಪಿ, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ನೀರಿನ ವ್ಯವಸ್ಥೆ ಇನ್ನಿತರ ಕೆಲಸ ಗಳು ಪೂರ್ಣಗೊಂಡಿವೆ ಎಂದರು.

ಯಂತ್ರೋಪಕರಣಗಳ ಅಳವಡಿಕೆ ಕೆಲಸವು ಭರದಿಂದ ಸಾಗಿದ್ದು, ಇನ್ನೆರಡು ತಿಂಗಳೊಳಗೆ ಎಲ್ಲ ಕೆಲಸಗಳು ಪೂರ್ಣ ಗೊಂಡು ಹಾಲಿನ ಡೈರಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಜ್ಜುಗೊಳ್ಳಲಿದೆ. ಬಳಿಕ ಡೈರಿಯ ಉದ್ಘಾ ಟನೆಗೆ ಸಿದ್ಧವಾಗಲಿವೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಹಾಲು ಉತ್ಪಾದ ನೆಗೆ ತಕ್ಕಂತೆ ಮುಂದೆ ಡೈರಿಯಲ್ಲಿ ಇನ್ನಷ್ಟು ಉಪ ಉತ್ಪನ್ನಗಳ ತಯಾರಿಕೆಗೆ ಅವಕಾಶ ವಾಗಲಿದೆ. ಸಧ್ಯಕ್ಕೆ ಈಗಾಗಲೇ ನಿಗದಿ ಗೊಳಿಸಿರುವ ಯೋಜನೆಯನ್ನು ಚಾಲನೆಗೊಳಿ ಸಲಾಗುತ್ತದೆ. ಒಟ್ಟು 133 ಕೋಟಿ ರೂ. ಯೋಜನಾ ವೆಚ್ಚದ ಡೈರಿ ಕಾಮಗಾರಿಗೆ ಯಾವುದೇ ಹಣಕಾಸಿನ ತೊಂದರೆಯಾ ಗಿಲ್ಲ. ಕಾಮಗಾರಿಯು ಶೀಘ್ರಗತಿಯಲ್ಲಿ ನಡೆ ಯುತ್ತಿದೆ ಎಂದು ಸಚಿವರು ತಿಳಿಸಿದರು.

ಮೈಸೂರಿನ ಡೈರಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಹಲವು ಸಿಬ್ಬಂದಿಯನ್ನು ಚಾಮ ರಾಜನಗರ ಜಿಲ್ಲಾ ಡೈರಿಗೆ ನಿಯೋಜಿಸ ಲಾಗಿದೆ. ಇನ್ನು ಅಗತ್ಯವಿರುವ ಸಿಬ್ಬಂದಿ ನೇಮಕವನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕರಾದ ಎಚ್.ಎಸ್. ನಂಜುಂಡ ಪ್ರಸಾದ್, ಡಿ. ಮಾದಪ್ಪ, ಚಾಮರಾಜ ನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವ ಸ್ಥಾಪಕ ಡಾ.ಎಂ.ಎಸ್.ವಿಜಯ್ ಕುಮಾರ್, ತಹಸೀಲ್ದಾರ್ ಕೆ. ಪುರಂಧರ್, ಇತರೆ ಅಧಿ ಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Translate »