ದೇಮಹಳ್ಳಿಯಲ್ಲಿ ಅದ್ಧೂರಿ ಗಣಪತಿ ವಿಸರ್ಜನೆ
ಚಾಮರಾಜನಗರ

ದೇಮಹಳ್ಳಿಯಲ್ಲಿ ಅದ್ಧೂರಿ ಗಣಪತಿ ವಿಸರ್ಜನೆ

September 26, 2018

ಚಾಮರಾಜನಗರ: ಚಾಮರಾಜನಗರ ತಾಲೂಕಿನ ದೇಮಹಳ್ಳಿ ಗ್ರಾಮದಲ್ಲಿ 54ನೇ ವರ್ಷದ ಶ್ರೀ ವಿದ್ಯಾಗಣಪತಿ ವಿಸರ್ಜ ನೋತ್ಸವ ಸೋಮವಾರ ರಾತ್ರಿ ವಿಜೃಂ ಭಣೆಯಿಂದ ನಡೆಯಿತು.

ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ ಶ್ರೀ ಬಸವೇಶ್ವರ ಸ್ವಾಮಿ, ಮಂಟೇಸ್ವಾಮಿ ಉತ್ಸವದೊಂದಿಗೆ ರಾತ್ರಿ 10 ಗಂಟೆಗೆ ವಿದ್ಯಾಗಣಪತಿ ಮೂರ್ತಿ ಯನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಮಂಗಳೂರಿನ ಚಂಡೆ ಮದ್ದಳೆ, ಮಂಡ್ಯದ ಕರಗ, ಹುಲಿ ವೇಷ, ವೀರಗಾಸೆ, ಒನಕೆ ಕುಣಿತ, ಗಾರುಡಿ ಗೊಂಬೆಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು.
ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಬೆಂಗಳೂರು ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.

Translate »