ನಕಲಿ ದಾಖಲೆ ನೀಡಿ ಪೌರ ಕಾರ್ಮಿಕ ಹುದ್ದೆ ಪಡೆದವನ ವಿರುದ್ಧ ಕೇಸ್
ಮೈಸೂರು

ನಕಲಿ ದಾಖಲೆ ನೀಡಿ ಪೌರ ಕಾರ್ಮಿಕ ಹುದ್ದೆ ಪಡೆದವನ ವಿರುದ್ಧ ಕೇಸ್

June 22, 2019

ಮೈಸೂರು: ಪಾಲಿಕೆಗೆ ನಕಲಿ ದಾಖಲೆಗಳನ್ನು ನೀಡಿ ಪೌರಕಾರ್ಮಿಕ ಹುದ್ದೆಯನ್ನು ಪಡೆದಿದ್ದ ವ್ಯಕ್ತಿಯ ವಿರುದ್ಧ ಕೆ.ಆರ್.ಠಾಣೆಯಲ್ಲಿ ದೂರು ದಾಖಲಾಗಿದೆ. ಪೌರಕಾರ್ಮಿಕ ಶ್ರೀನಿವಾಸ ಎಂಬುವರ ವಿರುದ್ಧ ಪಾಲಿಕೆ ವೈದ್ಯಾದಿಕಾರಿ ಡಾ.ಜಯಂತ್ ದೂರು ನೀಡಿದ್ದಾರೆ.

ವೆಂಕಟ ಎಂಬುವರು 1985ರ ಜ.21ರಿಂದ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿ 2015ರ ಆ.11ರಂದು ಸೇವಾ ಅವದಿಯಲ್ಲೇ ನಿಧನರಾಗಿದ್ದರು. ಅವರು ಮರಣ ನಂತರ ಅನುಕಂಪ ಆಧಾರದಲ್ಲಿ ನೇಮಕಾತಿ ನೀಡಬೇಕೆಂದು ಶ್ರೀನಿವಾಸ್ 2015ರ ಸೆ.21ರಂದು ಅರ್ಜಿ ಸಲ್ಲಿಸಿ, ಕೆಲಸ ಪಡೆದಿದ್ದರು. ಆದರೆ, ಕುಟುಂಬದ ಸದಸ್ಯರ ಪಟ್ಟಿಯನ್ವಯ ಶ್ರೀನಿವಾಸ ದ್ವಿತೀಯ ಪುತ್ರನಾಗಿದ್ದು, ನಕಲಿ ಪ್ರಮಾಣಪತ್ರ ಸೃಷ್ಟಿ ಮಾಡಿಕೊಂಡು ಪಾಲಿಕೆಗೆ ಸಲ್ಲಿಸಿ ಉದ್ಯೋಗ ಪಡೆದಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »