ಮೈಸೂರಿನ ಪ್ರತಿ ತಾಲೂಕಿನಲ್ಲಿ ಜನತಾದರ್ಶನ
ಮೈಸೂರು

ಮೈಸೂರಿನ ಪ್ರತಿ ತಾಲೂಕಿನಲ್ಲಿ ಜನತಾದರ್ಶನ

June 21, 2019

ಮೈಸೂರು: ಶೀಘ್ರದಲ್ಲೇ ಪ್ರತಿ ತಾಲೂಕಿನಲ್ಲೂ ಜನತಾ ದರ್ಶನ ನಡೆಸಲಿದ್ದು, ಈ ವೇಳೆ ಸಾರ್ವ ಜನಿಕರಿಂದ ಯಾವುದೊಂದು ದೂರು ಗಳು ಬರಬಾರದಂತೆ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ನಗರ ಮತ್ತು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು. ಶೀಘ್ರದಲ್ಲೇ ಪ್ರತಿ ತಾಲೂಕಿನಲ್ಲಿ ಬೆಳಿಗ್ಗೆ 6ರಿಂದ ಸಂಜೆವ ರೆಗೂ ಜನತಾದರ್ಶನ ನಡೆಸಲಿದ್ದು, ಈ ವೇಳೆ ಸಾರ್ವಜನಿಕರಿಂದ ಒಂದೇ ಒಂದು ದೂರೂ ಬರಬಾರದು. ಬಂದರೆ ಅದಿ üಕಾರಿಗಳೇ ಜವಾಬ್ದಾರರಾಗುತ್ತೀರಿ. ಹಾಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸಬೇಕು ಎಂದು ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ವನ್ನು ಒದಗಿಸುವ ಕೆಲಸವನ್ನು ಗ್ರಾಪಂನ ಪಿಡಿಒಗಳು ಮಾಡುತ್ತಿಲ್ಲ. ಗ್ರಾಪಂ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ಪರಿಶೀಲಿಸಬೇಕಾದ ತಾಪಂ ಇಒಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಸ್ಮಶಾನಕ್ಕೆ ಜಾಗ ಗುರು ತಿಸಿ, ಕೆರೆ ಒತ್ತುವರಿ ತೆರವುಗೊಳಿಸಿ ಹದ್ದು ಬಸ್ತು ಮಾಡಿ ಎಂದು ತಹಸೀಲ್ದಾರರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಈ ಹಿಂದಿನ ತಾಪಂನ ಇಓಗಳು ಮುತು ವರ್ಜಿ ವಹಿಸಿ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಆ ರೀತಿಯ ಕೆಲಸವಾಗು ತ್ತಿಲ್ಲ. ಸರ್ಕಾರ ಅವರಿಗೆ ಎಲ್ಲಾ ರೀತಿಯ ಅಧಿಕಾರ ನೀಡಿದರೂ ಚಲಾಯಿಸುತ್ತಿಲ್ಲ. ಆದರೆ, ಪಾಲಿಕೆ ಆಯುಕ್ತರು ಮತ್ತು ಮೇಯರ್ ಅವರು ಸ್ವತಃ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆದರೆ, ಅನುದಾನದ ಬಗ್ಗೆ ಮಾತ್ರ ಜಿಲ್ಲಾ ಉಸ್ತು ವಾರಿ ಸಚಿವರಿಗೆ ಮಾಹಿತಿ ನೀಡುತ್ತಿಲ್ಲ. ಜತೆಗೆ ಅನುದಾನ ಹಂಚಿಕೆ ಬಗ್ಗೆಯೂ ನನ್ನ ಸಲಹೆ ಪಡೆಯುತ್ತಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

25 ಮಂದಿ ಬಂಧಿಸಿದ್ದೇವೆ: ಹೊರ ವರ್ತುಲ ರಸ್ತೆಯಲ್ಲಿ ಸರಗಳ್ಳತನ, ಮಹಿಳೆ ಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಜತೆಗೆ ಟ್ರಾಫಿಕ್ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕು ಎಂದು ನಗರ ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವ ರಿಗೆ ಸೂಚಿಸಿದರು. ಇದಕ್ಕೆ ಪೊಲೀಸ್ ಆಯು ಕ್ತರು ಪ್ರತಿಕ್ರಿಯಿಸಿ, ತಿಂಗಳಲ್ಲಿ 25 ಮಂದಿ ಸರಗಳ್ಳರನ್ನು ಬಂಧಿಸಲಾಗಿದೆ. ಜತೆಗೆ ಅಫರಾದ ತಡೆ, ಸಂಚಾರಿ ನಿಯಮ ಪಾಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಠಾಣೆಗೆ ಭೇಟಿ ನೀಡಿ: ಜಿಲ್ಲಾ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ, ಎಲ್ಲರೂ ಸರಿಯಾಗಿ ಠಾಣೆಗೆ ಬರುತ್ತಿದ್ದಾರಾ? ಹಾಜರಾತಿ ಬುಕ್ ಇದೆಯಾ, ಆ ದಿನ ಎಲ್ಲಿ ಹೋಗಿದ್ದರು ಎಂಬ ಎಲ್ಲ ಮಾಹಿತಿ ಯನ್ನು ಕಲೆಹಾಕಿ ಶಿಸ್ತಿನಿಂದ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನೂತನÀ ಎಸ್‍ಪಿ ರಿಷ್ಯಂತ್ ಅವರಿಗೆ ಸೂಚಿಸಿದರು.

ದೇವರಾಜ ಮಾರುಕಟ್ಟೆ-ಲಾನ್ಸ್‍ಡೌನ್ ಕಟ್ಟಡ ಕುರಿತು ಚರ್ಚೆ: ಈ ಎರಡು ಕಟ್ಟಡ ಗಳಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ರಾದ ಶಿಲ್ಪಾನಾಗ್ ಮಾತನಾಡಿ, ಮುಖ್ಯ ಮಂತ್ರಿಗಳ 100 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಂಡಿದ್ದು, ದೇವರಾಜ ಮಾರುಕಟ್ಟೆ ಹಾಗೂ ಲಾನ್ಸ್‍ಡೌನ್ ಕಟ್ಟಡ ಗಳ ನವೀಕರಣಕ್ಕಾಗಿ ಕ್ರಮವಾಗಿ 9 ಹಾಗೂ 3 ಕೋಟಿ ರೂ.ಬಿಡುಗಡೆಯಾಗಿದೆ. ಅದ ರಲ್ಲಿ ದೇವರಾಜ ಮಾರುಕಟ್ಟೆಗೆ 73 ಲಕ್ಷ ರೂ. ಮತ್ತು ಲಾನ್ಸ್‍ಡೌನ್ ಕಟ್ಟಡಕ್ಕೆ 95 ರೂ. ಖರ್ಚು ಮಾಡಲಾಗಿದ್ದು, ಈ ಎರಡೂ ಕಟ್ಟಡಗಳ ನವೀಕರಣಕ್ಕೆ ಬಿಡುಗಡೆ ಯಾದ ಹಣದಲ್ಲಿ 9 ಕೋಟಿ 27 ಲಕ್ಷ ಉಳಿದಿದೆ ಎಂದು ವಿವರಿಸಿದರು.

ಈ ವೇಳೆ ಸಚಿವರು, ಹೊಸದಾಗಿ ನಿರ್ಮಾಣಕ್ಕೆ ಎಷ್ಟು ವ್ಯಯಿಸಲಿದೆ ಎಂದಾಗ, ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿ, ಹೊಸ ದಾಗಿ ದೇವರಾಜ ಮಾರುಕಟ್ಟೆ ನಿರ್ಮಿ ಸಲು 90 ಕೋಟಿ ರೂ. ಹಾಗೂ ಲಾನ್ಸ್ ಡೌನ್ ಕಟ್ಟಡ ನಿರ್ಮಾಣಕ್ಕೆ 30 ಕೋಟಿ ರೂ.ಗಳು ವೆಚ್ಚವಾಗಲಿದೆ ಎಂದು ತಿಳಿಸಿ ದರು. ಇದೇ ವೇಳೆ ದಸರಾ ಸಮೀಪಿ ಸುತ್ತಿದ್ದು, ಕಳೆದ ಬಾರಿ ದಸರಾದ 5 ಕೋಟಿ ರೂ. ಬಂದಿಲ್ಲ. ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ರಿಂಗ್‍ರಸ್ತೆ ಬೀದಿ ದೀಪ ನಿರ್ವಹಣೆ: ರಿಂಗ್ ರಸ್ತೆಯಲ್ಲಿನ ಬೀದಿ ದೀಪಗಳು ಇಲ್ಲ ದಿರುವುದರಿಂದ ಅತ್ಯಾಚಾರ, ಸರಗಳ್ಳತನ ದಂತಹ ಪ್ರಕರಣಗಳು ದಿನೇ ದಿನೆ ಹೆಚ್ಚಾ ಗುತ್ತಿದ್ದು, ಇದರ ನಿರ್ವಹಣೆಯನ್ನು ಮುಡಾ ಮಾಡಬೇಕು ಎಂದು ಸಚಿವರು ಹೇಳಿದರು. ಇದಕ್ಕೆ ಮುಡಾ ಆಯುಕ್ತ ಕಾಂತರಾಜು ಪ್ರತಿಕ್ರಿಯಿಸಿ, ಈಗಾಗಲೇ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಈ ರಸ್ತೆಯಲ್ಲಿ 2138 ಬೀದಿ ದೀಪದ ಕಂಬಗಳಿದ್ದು, ಇದರಲ್ಲಿ 1168 ಬೀದಿ ದೀಪಗಳು ಪಾಲಿಕೆ ವ್ಯಾಪ್ತಿಗೆ ಸೇರಿದರೆ, ಉಳಿದ 868 ಬೀದಿ ದೀಪಗಳು ಗ್ರಾಪಂ ಮತ್ತು ಮುಡಾ ವ್ಯಾಪ್ತಿಗೆ ಬರಲಿವೆ. ಗ್ರಾಪಂ ವತಿಯಿಂದ ನಿರ್ವ ಹಣೆ ಕಷ್ಟಸಾಧ್ಯ. ಹಾಗಾಗಿ ಎಲ್ಲ ಕಂಬ ಗಳನ್ನು ಮುಡಾ ವತಿಯಿಂದಲೇ ನಿರ್ವ ಹಣೆ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಈಗಾಗಲೇ 1.28 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎಂದರು.

50:50 ಅನುಪಾತದಲ್ಲಿ ಹಂಚಿಕೆ: ಈ ವೇಳೆ ಜಿ.ಟಿ.ದೇವೇಗೌಡರು, ಬೀದಿ ದೀಪ ನಿರ್ವಹಣೆಯನ್ನು ಮುಡಾ ಮತ್ತು ಪಾಲಿಕೆ 50:50 ಅನುಪಾತದಲ್ಲಿ ಹಂಚಿ ಕೊಂಡು ನಿರ್ವಹಣೆ ಮಾಡುವಂತೆ ಸೂಚಿಸಿದರು. ಇದಕ್ಕೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಹಲವು ವಿದ್ಯುತ್ ಕಂಬಗಳು ಕೆಟ್ಟು ನಿಂತಿದ್ದು, ದುರಸ್ತಿ ಪಡಿಸಿ ಕೊಂಡು ನಿರ್ವಹಣೆ ಕಷ್ಟಸಾಧ್ಯ ಎಂದರು.

ಇದಕ್ಕೆ ಜಿ.ಟಿ.ದೇವೇಗೌಡರು, ನಾಳೆ ಯಿಂದಲೇ ಮುಡಾ ವತಿಯಿಂದ ಬೀದಿ ದೀಪಗಳನ್ನು ದುರಸ್ತಿಗೊಳಿಸಿ, ಜೂನ್ ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿಸ ಬೇಕು. ಜುಲೈನಿಂದ ಇಬ್ಬರು ನಿರ್ವಹಣೆ ಯನ್ನು ಹಂಚಿಕೊಂಡು ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿದರು. ಈ ವೇಳೆ ಕಾಂತರಾಜುರವರು, ಇದರ ಅನುಷ್ಠಾನಕ್ಕೆ ಸರ್ಕಾರದಿಂದ ಅನುಮತಿ ಕೊಡಿಸುವಂತೆ ಮನವಿ ಮಾಡಿದರು.

ನಿಮಗೆ ಟ್ರಾನ್ಸ್‍ಫರ್(ವರ್ಗಾವಣೆ) ಇಲ್ವ: ಹಿಂದಿನ ಡಿಹೆಚ್‍ಓ ಡಾ.ಬಸವ ರಾಜು ಮತ್ತು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಿ.ಸೋಮಶೇಖರ್ ಅವರನ್ನು ಕುರಿತು ಸಚಿವ ಸಾ.ರಾ.ಮಹೇಶ್, 5 ವರ್ಷ ವಾದರೂ ನೀವು ಇನ್ನೂ ಇಲ್ಲೇ ಇದ್ದೀರಾ? ನಿಮಗೆ ಟ್ರಾನ್ಸ್‍ಫರ್ ಇಲ್ವಾ ಎಂದು ಪ್ರಶ್ನಿಸಿ ದರು. ಈ ವೇಳೆ ಬಸವರಾಜು, ಸಾರ್ ನಾನೀಗ ಡಿಹೆಚ್‍ಓ ಅಲ್ಲ. ಜಿಲ್ಲಾ ಸರ್ಜನ್ ಎಂದು ಉತ್ತರಿಸಿದರೆ, ಬಿ.ಸೋಮಶೇಖರ್ ರವರು ಚುನಾವಣೆ ವೇಳೆ ವರ್ಗಾವಣೆ ಗೊಂಡಿದ್ದೆ. ಇದೀಗ ಮತ್ತೆ ಮರು ವರ್ಗಾ ವಣೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Translate »