ಹಾಸನ: ಸರ್ವಾಂಗೀಣ ಅಭಿವೃದ್ಧಿ ಮೂಲಕ ಹಾಸನವನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿಸುವುದು ತಮ್ಮ ಗುರಿಯಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು. ಶ್ರವಣಬೆಳಗೊಳದ ಮಠದಲ್ಲಿಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಗೌರವ ಸರ್ಮಪಿಸಿ ಮಾತನಾಡಿದ ಸಚಿವರು, ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಶ್ರವಣಬೆಳಗೊಳದಲ್ಲಿ ಬಾಕಿ ಇರುವ 60 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ರಾಜ್ಯದಲ್ಲಿ 37 ಸಾವಿರ ಕೋಟಿ…
ಜಾಗೃತಿ ಜಾಥಾಕ್ಕೆ ಸಿಇಓ ಚಾಲನೆ
August 2, 2018ಹಾಸನ: ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಜಾಗೃತಿ ಜಾಥಾಕ್ಕೆ ಜಿಪಂ ಸಿಇಓ ಜಿ.ಜಗದೀಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಾಸನ ಜಿಲ್ಲೆ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಗುರುತಿಸಲ್ಪಟ್ಟಿದ್ದು, ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಜನಾಂದೋಲನದಲ್ಲೂ ಸಂಪೂರ್ಣ ಯಶಸ್ವಿಯಾಗಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಜಿಲ್ಲೆಯ ಎಲ್ಲಾ ಹಳ್ಳಿಗಳು ಸಂಪೂರ್ಣ ನೈರ್ಮಲ್ಯಗೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ…
ಸಾಲಬಾಧೆ: ಸಿಎಂ ತವರು ಜಿಲ್ಲೆಯಲ್ಲೇ ರೈತರಿಬ್ಬರ ಆತ್ಮಹತ್ಯೆ!
August 2, 2018ಹಾಸನ: ಸಾಲಬಾಧೆ ತಾಳ ಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಎಂ ತವರು ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕಿನಲ್ಲಿ ನಡೆದಿದೆ. ಬೇಲೂರು ತಾಲೂಕಿನ ಗೊಣಿಸೋಮನ ಹಳ್ಳಿಯ ರಮೇಶಯ್ಯ(60) ಚನ್ನರಾಯ ಪಟ್ಟಣ ತಾಲೂಕಿನ ಮರವನಹಳ್ಳಿಯ ಗೌಡೇಗೌಡ(58) ಮೃತ ರೈತರು. ರಮೇಶಯ್ಯ ಸಹಕಾರ ಬ್ಯಾಂಕ್ ಸಾಲ ಸೇರಿದಂತೆ 5 ಲಕ್ಷ ಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹಳೇ ಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮರವನ ಹಳ್ಳಿಯ ಗೌಡೇಗೌಡ ಸಾಲಕ್ಕೆ ಹೆದರಿ…
ಆಟೋ ಪಲ್ಟಿ: 25 ವಿದ್ಯಾರ್ಥಿಗಳಿಗೆ ಗಾಯ
August 2, 2018ಆಲೂರು: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ ನಡೆದಿದೆ. ಪ್ರತಿಭಾ ಕಾರಂಜಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗಾಯಗೊಂಡವರು ತಾಲೂಕು ಕಣತೂರು ಪ್ರೌಢಶಾಲೆ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ದೊಡ್ಡ ಅನಾಹುತದಿಂದ ಸ್ವಲ್ಪದರಲ್ಲಿಯೇ ವಿದ್ಯಾರ್ಥಿಗಳು ಪಾರಾಗಿದ್ದು, ಸ್ಥಳೀಯರು ಗಾಯಾಳು ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಆಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಶ್ರೀ ರಾಮೇಶ್ವರಸ್ವಾಮಿ ದೇಗುಲ, ಯಾತ್ರಿ ನಿವಾಸಕ್ಕೆ ಶಾಸಕ ಡಾ.ಎ.ಟಿ.ರಾಮಸ್ವಾಮಿ ಭೇಟಿ, ಪರಿಶೀಲನೆ
July 31, 2018ರಾಮನಾಥಪುರ: ಇಲ್ಲಿನ ಶ್ರೀ ರಾಮೇಶ್ವರಸ್ವಾಮಿ ದೇವಾಲಯ, ಯಾತ್ರಿ ನಿವಾಸಕ್ಕೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಕಾವೇರಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾ ಲಯಕ್ಕೆ ಮೊದಲು ಭೇಟಿ ನೀಡಿದ ಶಾಸಕರು, ದೇವಾಲಯದ ಗರ್ಭಗುಡಿ, ಶಿಥಿಲಗೊಂಡಿರುವ ದೇಗುಲದ ಪಾಶ್ರ್ವಗೋಡೆ ಗಳು. ದೇವಾಲಯದ ಪೌಳಿ, ಪ್ರಾಂಗಣವನ್ನು ಪರಿಶೀಲಿಸಿದರು. ಬಳಿಕ ಮಾತನಾಡಿ, ದೇಗುಲ ಆವರಣದ ಸುತ್ತಲೂ ಬಸವಲಿಂಗಗಳ ಗುಡಿಗಳು, ಶ್ರೀಚಕ್ರದ ಸ್ಥಳ, ಇಂದ್ರಾಕ್ಷಿ, ವಿಶಾಲಕ್ಷಮ್ಮ ಗುಡಿಗಳಲ್ಲಿ ಮಳೆ ಬಂದಾಗ ಸೋರುತ್ತಿದ್ದು, ಇದರ ಬಗ್ಗೆ…
ಶೀತಪೀಡಿತ ಗ್ರಾಮಗಳ ಸ್ಥಳಾಂತರಿಸುವಂತೆ ಆಗ್ರಹ
July 31, 2018ಹಾಸನ: ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಕೂಡಲೇ ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾಡಳಿತ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಗ್ರಾಮಗಳ ಗ್ರಾಮಸ್ಥರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಇದೇ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಜೀವನ ನಾವು ಸಾಗಿಸುತ್ತಿದ್ದೇವೆ. ಈ ಗ್ರಾಮಗಳ ಸುತ್ತ ಹೇಮಾ ವತಿ ಬಲದಂಡೆ ನಾಲೆ ಹಾದು ಹೋಗಿದೆ. ನಾಲೆಗೆ…
ಹೆದ್ದಾರಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಕೋಣದ ಕಳೇಬರ ಪತ್ತೆ; ದುರ್ನಾತದಿಂದ ವಾಹನ ಸವಾರರಿಗೆ ನರಕಯಾತನೆ
July 31, 2018ಬೇಲೂರು: ತಾಲೂಕಿನ ಹಳೇಬೀಡು ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೋಣದ ಕಳೇಬರ ದುರ್ವಾ ಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಯಾತನೆ ಅನುಭವಿ ಸುವಂತಾಗಿದೆ. ಕಳೇಬರ ಊದಿ ಕೊಂಡಿದ್ದು, ಯಾವುದೇ ಸಮಯದಲ್ಲ ದರೂ ಒಡೆ ಯುವ ಸಾಧ್ಯತೆಯಿದೆ. ಈಗಾ ಗಲೇ ಸಾಕಷ್ಟು ದೂರದ ವರೆಗೂ ಕೆಟ್ಟ ವಾಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಊದಿಕೊಂಡಿರುವ ಕಳೇಬರ ಒಡೆದರೆ ದುರ್ನಾತ ಮತ್ತಷ್ಟು ಹೆಚ್ಚಾಗಲಿದ್ದು, ರಸ್ತೆಯಲ್ಲಿ ವಾಹನ…
ಎಲ್ಲರ ಸಹಕಾರದಿಂದ ಮೂಲಸೌಕರ್ಯ ಅಭಿವೃದ್ಧಿ
July 30, 2018ಅರಸೀಕೆರೆ: ನಗರಸಭೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನೀಡಿದ ಉತ್ತಮ ಸಹಕಾರ, ಸಾಮರಸ್ಯದಿಂದ ನಗರದ ಜನತೆಗೆ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ನಗರದ ಕಂತೇನಹಳ್ಳಿ ಬಡಾವಣೆಯ ಕೆರೆ ಅಂಗಳದಲ್ಲಿರುವ ಉದ್ಯಾನವನಕ್ಕೆ ನಾಮಕರಣ ಮತ್ತು ನಗರಸಭೆ ಕಚೇರಿ ಆವರಣದಲ್ಲಿ ಸಾರ್ವಜನಿಕರ ಶೌಚಾ ಲಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಪ್ರಾಚೀನ ಕೆರೆಗಳಲ್ಲಿ ಒಂದಾದ ಕಂತೇನಹಳ್ಳಿ ಕೆರೆಗಳ ಅಭಿವೃದ್ದಿಯೊಂದಿಗೆ ಉದ್ಯಾನವನ್ನು ನಿರ್ಮಿಸಿ…
ಹಳೇಬೀಡು ಉಪ ತಹಶೀಲ್ದಾರ್ ಕಟ್ಟಡ ದುರಸ್ತಿಗೆ ಆಗ್ರಹ
July 30, 2018ಬೇಲೂರು: ತಾಲೂಕಿನ ಹಳೇಬೀಡಿನ ಉಪತಹಶೀಲ್ದಾರ್ ಕಟ್ಟಡ ಶಿಥಿಲಗೊಂಡು ಕಚೇರಿ ಕೆಲಸ ಕಾರ್ಯಗಳಿಗೆ ಬರುವ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಅಡ್ಡಿಯಾಗಿದ್ದು, ಕಟ್ಟಡ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬ್ರಿಟೀಷರ ಕಾಲದಲ್ಲಿ ನಿರ್ಮಿತ ಗೊಂಡಿದ್ದ ಕಟ್ಟಡ ಪೂರ್ಣ ಪ್ರಮಾಣ ದಲ್ಲಿ ಶಿಥಿಲಗೊಂಡಿದೆ. ಛಾವಣಿಯ ಹೆಂಚುಗಳು ಉದುರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಸ್ವಲ್ಪಮಟ್ಟಿಗೆ ಮಳೆ ಬಂದರೂ ಸಾಕು ನೀರು ಕಚೇರಿಯೊಳಗೆ ಇಳಿಯುತ್ತದೆ. ಇದರಿಂದ ಕಚೇರಿಯಲ್ಲಿರುವ ಯಂತ್ರೋಪಕರಣಗಳು, ಪೀಠೋಪಕರಣಗಳು ಹಾಗೂ ದಾಖಲೆಗಳಿಗೆ ಹಾನಿಯಾಗುತ್ತಿದೆ. ಮಳೆಯ ನೀರಿನಿಂದ ಇವುಗಳನ್ನು ರಕ್ಷಿಸಿಡುವುದೇ ಕಷ್ಟದ ಕೆಲಸವಾಗಿ ಪರಿಣಮಿಸಿದೆ….
ಮಳೆ: ಮನೆ ಗೋಡೆ ಕುಸಿತ
July 30, 2018ಬೇಲೂರು: ಮಳೆಯ ಪರಿಣಾಮ ಪಟ್ಟಣದ ಕೆರೆ ಬೀದಿಯಲ್ಲಿ ವಾಸದ ಮನೆ ಗೋಡೆ ಕುಸಿದು ಬಿದ್ದಿದೆ. ಇಂದು ಬೆಳಿಗ್ಗೆ ಪ್ರಾರಂಭವಾದ ಜಡಿ ಮಳೆಯಿಂದ 9ನೇ ವಾರ್ಡಿನ ಕೆರೆಯ ಬೀದಿ ಮುಜೀಪ್ ಅವರ ವಾಸದ ಮನೆಯ ಗೋಡೆಯು ಕುಸಿದು ಬಿದ್ದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ಮನೆ ಮಾಲೀಕರಿಗೆ ಸಾಂತ್ವನ ಹೇಳಿ 5,000 ರೂ.ಗಳ ಧನ ಸಹಾಯ ಮಾಡುವುದರೊಂದಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ…