ಹಾಸನ: ವಿಶ್ವ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಯೋಜಿಸುವಂತೆ ಎಡಿಸಿ ಬಿ.ಆರ್.ಪೂಣ ್ಮಾ ಆಯುಷ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜೂ.21ರ ಯೋಗ ದಿನದಂದು ಯೋಗ ಪ್ರದರ್ಶನವನ್ನು ಜಿಲ್ಲಾ ಕ್ರೀಡಾಂಗಣ ಹಾಗೂ ಮಲೆ ನಾಡು ತಾಂತ್ರಿಕ ವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಆಯೋ ಜಿಸುವಂತೆ ನಿರ್ದೇಶನ ನೀಡಿದರು. ವಿಶ್ವ ಯೋಗ ದಿನವನ್ನು ಉತ್ತಮವಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದೆ. ಇದಕ್ಕೆ ಸಂಘ ಸಂಸ್ಥೆಗಳ…
ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಶಾಸಕ ಬಾಲಕೃಷ್ಣ
June 14, 2018ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ರಸ್ತೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.ಹೋಬಳಿಯ ಚಲ್ಯಾ ಗ್ರಾಮದಲ್ಲಿ ಎರಡನೇ ಬಾರಿಗೆ ಭಾರೀ ಬಹುಮತಗಳ ಅಂತರದಿಂದ ಆಯ್ಕೆಯಾದ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಲ್ಯಾ ಕೊರಕಲ್ಲಪ್ಪ ಮಠದ ರಸ್ತೆ ಯನ್ನು ಅಭಿವೃದ್ಧಿಪಡಿಸುವುದು. ಅಲ್ಲದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ಗ್ರಾಮದ ಶಾಲಾ,…
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳ ಪರಿಶೀಲನೆ ದಶಕಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ
June 13, 2018ಹಾಸನ: ಜಿಲ್ಲೆಯ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪುನಾರಂಭಿ ಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಬೆಳಿಗ್ಗೆಯಿಂದಲೇ ಜಿಲ್ಲೆಯ ಹೊಳೆನರಸೀಪುರ ಹಾಗೂ ಹಾಸನ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಸ್ಥಗಿತಗೊಂಡಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಇನ್ನಷ್ಟು ವಿನೂತನತೆ ಸೇರ್ಪಡೆಗೊಳಿಸಿ ಕಾಮಗಾರಿ ಮುಕ್ತಾಯ ಗೊಳಿಸಲು ಚಿಂತಿಸಿದ್ದು, ಇದಕ್ಕಾಗಿ ಲೋಕೋಪಯೋಗಿ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ…
ಸಮುದ್ರವಳ್ಳಿಯಲ್ಲಿ ಮನೆ ಕುಸಿತ
June 13, 2018ಹಾಸನ: ವಾರದಿಂದ ಸತತವಾಗಿ ಸುರಿ ಯುತ್ತಿರುವ ಮಳೆ ಗಾಳಿಗೆ ತಾಲೂಕಿನ ಸಮುದ್ರವಳ್ಳಿಯಲ್ಲಿ ಮನೆ ಕುಸಿದು ಅಪಾರ ನಷ್ಟವಾದ ಘಟಕ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಗ್ರಾಮದ ನಿವಾಸಿ ಕಮಲಮ್ಮ ಎಂಬುವರ ಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲೇ ಇದ್ದ ಲಕ್ಷ್ಮಮ್ಮ ಅವರ ಮನೆಯೂ ಹಾನಿಯಾಗಿದೆ. ಸೋಮವಾರ ರಾತ್ರಿ ಪೂರ್ಣಗಾಳಿ ಸಹಿತ ಮಳೆ ಸುರಿದ್ದರಿಂದ ಬೆಳಗಿನ ಜಾವದಲ್ಲಿ ಕಮಲಮ್ಮ ಎಂಬುವರ ಮನೆ ಗೋಡೆ ಕುಸಿದಿದೆ. ಅಲ್ಲದೆ ಗೋಡೆ ಬಿದ್ದ ಪರಿಣಾಮ ನೆರೆ ಮನೆಯ ಗೋಡೆ ಕೂಡ ಬಹುತೇಕ ಹಾನಿಯಾಗಿದೆ. ಗೋಡೆ ಬೀಳುವ…
ಬೇಲೂರಿನಲ್ಲಿ 1.15 ಲಕ್ಷ ರೂ. ಅಕ್ರಮ ಮದ್ಯ ವಶ
June 13, 2018ಬೇಲೂರು: ಅಕ್ರಮವಾಗಿ ಶೇಖರಿಸಿಟ್ಟಿದ್ದ 1.15 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ತಹಶೀಲ್ದಾರ್ ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಕುಶಾವರ ಗ್ರಾಪಂ ವ್ಯಾಪ್ತಿಗೆ ಸೇರುವ ಕೌರಿ ಗ್ರಾಮದ ರಾಜಶೇಖರ ಎಂಬುವರ ಪಾಳುಬಿದ್ದ ಮನೆಯಲ್ಲಿ ಮದ್ಯ ಶೇಖರಣೆ ಮಾಡಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ತಹಶೀಲ್ದಾರ್ ಉಮೇಶ್ ಅವರು ಸಿಬ್ಬಂದಿಯೊಂದಿಗೆ ಸಂಜೆ 4.45ರಲ್ಲಿ ದಾಳಿ ನಡೆಸಿದಾಗ ಮದ್ಯ ಶೇಖರಣೆ ಮಾಡಿರುವುದು ಖಚಿತಗೊಂಡಿದೆ. ಒರಿಜನಲ್ ಛಾಯ್ಸ್ 42 ಬಾಕ್ಸ್ ಮದ್ಯ ಯಾರಿಗೆ ಸೇರಿದ್ದೆಂದು ತಿಳಿದುಬಂದಿಲ್ಲ. ಮನೆ ಮಾಲೀಕ ರಾಜಶೇಖರನನ್ನು ವಿಚಾರಿಸಿದಾಗ ಮದ್ಯ ಶೇಖರಣೆ ಮಾಡಿರುವುದು…
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ :ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ
June 13, 2018ಹಾಸನ: ಹದಿನಾಲ್ಕು ವರ್ಷ ದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಾಲೆಯಿಂದ ಹೊರಗುಳಿದು ಬಾಲ ಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಿ ಮುಖ್ಯ ವಾಹಿನಿಗೆ ತರುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸ ಬೇಕು ಎಂದು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾ ಚಾರ್ ಕರೆ ನೀಡಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ…
ಹಾಸನದಲ್ಲಿ ವರುಣನ ಆರ್ಭಟ
June 12, 2018ಹೇಮಾವತಿ ಜಲಾಶಯದಲ್ಲಿ ಜೀವಕಳೆ ಶಾಲಾ-ಕಾಲೇಜುಗಳಿಗೆ ರಜೆ ವಿದ್ಯುತ್, ರಸ್ತೆ-ರೈಲು ಸಂಚಾರ ವ್ಯತ್ಯಯ ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ರಸ್ತೆ, ರೈಲು ಸಂಚಾರ ಅಸ್ತವ್ಯಸ್ತವಾಗಿರುವುದಲ್ಲದೆ, ಅನೇಕ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮುಂಗಾರಿನ ಆರ್ಭಟ ಕಳೆದ ನಾಲ್ಕು ದಿನದಿಂದ ಜೋರಾಗಿದ್ದು, ಭಾನುವಾರ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಹಲವೆಡೆ ಮರಗಳು ಧರೆಗುರುಳಿದ್ದು, ಮನೆಗಳ ಗೋಡೆಗಳು ಕುಸಿದಿವೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯೂ ಸಂಭವಿಸಿದೆ. ಹಾಸನ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ರೈಲು…
ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಪ್ರತಿಭಟನೆ
June 12, 2018ಬೇಲೂರು: ತಾಲೂಕಿನ ತಗರೆ ಕೋಗಿಲೆಮನೆ ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಗ್ರಾಮಸ್ಥರು ಕಚೇರಿ ಎದುರು ಪ್ರತಿಭಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ಕುಮಾರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, 20 ವರ್ಷದಿಂದ ಕೋಗಿಲೆ ಮನೆ ಗ್ರಾಪಂ ಕಚೇರಿ ದುಸ್ಥಿತಿಯಲ್ಲಿದೆ. ನೂತನ ಕಟ್ಟಡ ನಿರ್ಮಾಣ ಮಾಡಿ ಸಾರ್ವ ಜನಿಕರಿಗೆ ಕೆಲಸಕ್ಕೆ ಅನುವು ಮಾಡಬೇಕು. ಈ ಬಗ್ಗೆ ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತ…
ಮನೆಗೆ ಬಸ್ ನುಗ್ಗಿ ಹಾನಿ
June 12, 2018ಹೊಳೆನರಸೀಪುರ: ಸಾರಿಗೆ ಬಸ್ಸೊಂದು ರಸ್ತೆಬದಿ ಮನೆಯ ಬಾಳೆ ಮಂಡಿಗೆ ನುಗ್ಗಿರುವ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅರಕಲಗೂಡು ಡಿಪೋಗೆ ಸೇರಿದ ಬಸ್(ಕೆಎ13 ಎಫ್ 2160) ಬೆಳಿಗ್ಗೆ ಹಾಸನ ದಿಂದ ಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳುವಾಗ ಪಟ್ಟಣದ ಬಿಹೆಚ್ ರಸ್ತೆಯಲ್ಲಿ ತಾಂತ್ರಿಕ ದೋಷದಿಂದ ಹಳ್ಳಕ್ಕೆ ಇಳಿದಿದೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿ ನಂತರ ರಸ್ತೆಬದಿ ನಿವಾಸಿಯೊಬ್ಬರ ಮನೆಯ ಬಾಳೆಮಂಡಿಗೆ ನುಗ್ಗಿದೆ. ಇದರಿಂದ ಗೋಡೆ, ಮೇಲ್ಛಾವಣಿ ಕುಸಿದು ಮನೆಗೆ ಹಾನಿ ಯಾಗಿದೆ. ಸದ್ಯ…
ಎಲ್ಲರೊಂದಿಗೆ ಚರ್ಚಿಸಿ ಬೇಲೂರು ಮುಖ್ಯರಸ್ತೆ ಅಗಲೀಕರಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
June 11, 2018ಬೇಲೂರು: ವಿಶ್ವಪ್ರಸಿದ್ಧ ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಅಭಿವೃದ್ಧಿಗೆ ಮುಖ್ಯರಸ್ತೆ ಅಗಲೀಕರಣ ಅಗತ್ಯವಾಗಿದ್ದು, ವರ್ತಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವಿಸ್ತರಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ಪಟ್ಟಣದ ಶ್ರೀಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಮಂತ್ರಿಯಾಗಿದ್ದಾಗ ಬೇಲೂರು, ಶ್ರವಣಬೆಳಗೊಳ, ಹಳೇಬೀಡನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಪ್ರಯತ್ನಿಸಿದ್ದೆ. ವಿಶ್ವಪರಂಪರೆ ಪಟ್ಟಿಗೆ ಸೇರಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು….