ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಕೋರಿದರು. ನಾಯಕ ಜನಾಂಗದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರವನ್ನು ಪರಿಶಿಷ್ಟ ಪಂಗಡಕ್ಕೆ ಈಗಾಗಲೇ ಸೇರಿಸಿದ್ದೇವೆ…
ಸಿದ್ದು-ಜಿಟಿಡಿ ಮತ್ತೆ ಭಲೇ ಜೋಡಿ
April 15, 2019ಮೈಸೂರು: ಬಿಜೆಪಿಯನ್ನು ಮಣಿಸಿ, ಮೈತ್ರಿ ಪಕ್ಷದ ಪ್ರಾಬಲ್ಯ ಮೆರೆಯಲು ಸಿದ್ದರಾಮಯ್ಯ-ಜಿ.ಟಿ.ದೇವೇಗೌಡರ ಜೋಡಿ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ಒಟ್ಟಿಗೆ ಪ್ರಚಾರ ಕೈಗೊಂಡು ಸಂಚಲನ ಮೂಡಿಸಿದೆ. ಬಿಜೆಪಿ ಮಣಿಸಲು ದೋಸ್ತಿ ನಾಯಕರು ಒಟ್ಟಾಗಿ ಕೈ ಹಿಡಿದು ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು, ಹುಮ್ಮಸ್ಸು ಮೂಡಿಸಿದ್ದಾರೆ. ಇವರನ್ನು ನೋಡಿ ಜನತಾ ಪರಿವಾರದ ಅದೆಷ್ಟೋ ಹಳೆ ತಲೆಗಳು ಈ ಜೋಡಿಯ ಹಿಂದಿನ ಮೋಡಿಯನ್ನು ಮೆಲುಕು ಹಾಕಿದವು. ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಇಬ್ಬರೂ ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ನಾಯಕರು. ಈ…
ಪುತ್ರನ ಗೆಲುವಿಗೆ ಜನರ 150 ಕೋಟಿ ತೆರಿಗೆ ಹಣ ಮೀಸಲಿಟ್ಟಿರುವ ಮುಖ್ಯಮಂತ್ರಿ
April 15, 2019ಚಾಮರಾಜನಗರ: ಜನರ ತೆರಿಗೆ ಹಣದಲ್ಲಿ ತಮ್ಮ ಮಗ ನಿಖಿಲ್‍ನನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 150 ಕೋಟಿ ರೂ. ತೆಗೆದಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು. ನಗರದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಸಮಿತಿ ವತಿ ಯಿಂದ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿ ಸಲು 150 ಕೋಟಿ ತೆಗೆದಿಟ್ಟಿರುವ ಬಗ್ಗೆ ಸಂಸದ ಎಲ್.ಆರ್. ಶಿವರಾಮೇಗೌಡರ…
ಅಪ್ಪನಂತೆ ಅಮ್ಮನಿಗೂ ಆಶೀರ್ವದಿಸಿ: ಅಂಬರೀಶ್ ಪುತ್ರ ಅಭಿಷೇಕ್ ಮನವಿ
April 15, 2019ಮಂಡ್ಯ: ನನ್ನ ತಂದೆ ಅಂಬರೀಶ್ ಅವರನ್ನು ಆಶೀರ್ವದಿಸಿ, ಬೆಳೆಸಿದಂತೆ ನನ್ನ ತಾಯಿಗೂ ಆಶೀರ್ವದಿಸಿ, ಬೆಳೆಸಿ ಎಂದು ಅಭಿಷೇಕ್ ಮನವಿ ಮಾಡಿದರು. ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಭಾನುವಾರ ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ನಮ್ಮ ತಾಯಿ ಸುಮಲತಾ ಅವರ ವಿರುದ್ಧ ಮೂವರು ಸುಮಲತಾರನ್ನು ಕಣಕ್ಕಿಳಿಸಿದ್ದಾರೆ. ಯಾರೂ ಕೂಡ ಯಾಮಾರದೇ, ಗೊಂದಲಕ್ಕೀಡಾಗದೇ ಕ್ರಮ ಸಂಖ್ಯೆ 20ರ ರಣಕಹಳೆ ಊದುತ್ತಿರುವ ರೈತನ ಗುರುತಿಗೆ ಅತ್ಯಧಿಕ ಮತಗಳನ್ನು ನೀಡಿ…
ನನಗೆ ಸಿದ್ರಾಮಣ್ಣನ ನಂತರ ಯತೀಂದ್ರಣ್ಣನ ಬಲ: ನಿಖಿಲ್
April 15, 2019ಮಂಡ್ಯ: ನಿನ್ನೆ ಸಿದ್ದರಾಮಣ್ಣ ಬಂದಿದ್ದರು, ಇವತ್ತು ಡಾ.ಯತೀಂದ್ರಣ್ಣ ನನಗೆ ಶಕ್ತಿ ತುಂಬೋಕೆ ಬಂದಿದ್ದಾರೆ. ಅವರ ಬೆಂಬಲದಿಂದ ನನ್ನಲ್ಲಿ ಅತ್ಯುತ್ಸಾಹ ಬಂದಿದೆ ಎಂದು ಮಂಡ್ಯ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿಂದು ಅಂಬೇಡ್ಕರ್ ಜಯಂತಿಯ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ ಪುತ್ಥಳಿಗೆ ಮಾಲಾ ರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ದಿನೇ ದಿನೆ ನನ್ನ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಇಲ್ಲಿನ ಜನರ ಅಭಿಮಾನ, ಪ್ರೀತಿ ನೋಡ್ತಿದ್ರೆ ಖುಷಿ ಆಗ್ತಿದೆ. ಜನ ನನ್ನ ಕೈ ಹಿಡಿದೇ ಹಿಡೀ…
ಮೈಸೂರಲ್ಲಿ ಪ್ರತಾಪ್ ಸಿಂಹ ಭರ್ಜರಿ ರೋಡ್ ಶೋ
April 15, 2019ಮೈಸೂರು: ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿರುವಾಗ ಅಭ್ಯರ್ಥಿ ಗಳು ಬಿರುಸಿನ ಮತ ಬೇಟೆ ನಡೆಸುತ್ತಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮ ರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿ ರೋಡ್ ಶೋ ನಡೆಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಜಂಟಿ ಪ್ರಚಾರ ನಡೆಸುವ ಮೂಲಕ ಸಂಚಲನ…
ಅರಮನೆ ನಗರಿ ಮೈಸೂರಲ್ಲಿ ಪ್ರವಾಸಿಗರಿಗೆ ಮತ್ತೊಂದು ಹೊಸ ಆಕರ್ಷಣೆ `ಸ್ನೋ-ಸಿಟಿ’
April 15, 2019ಮೈಸೂರು: ಮಂಜಿನ ಲೋಕದಲ್ಲಿ ಕ್ಷಣವಾದರೂ ಕಾಲ ಕಳೆಯ ಬೇಕೆಂಬ ಮನದಾಸೆಯುಳ್ಳ ಮೈಸೂರಿ ಗರು ಹಿಮಾಲಯಕ್ಕೆ ಹೋಗಬೇಕಾಗಿಲ್ಲ. ಕೊರೆವ ಚಳಿ ಅನುಭವದೊಂದಿಗೆ ಹಿಮಾ ವೃತಗೊಂಡ ಪ್ರದೇಶದಲ್ಲಿ ಆಟ ಆಡಿ, ರೋಮಾಂಚನಗೊಳ್ಳುವ ವಾತಾವರಣ ವನ್ನು ಮೈಸೂರಿನಲ್ಲಿ ಕಲ್ಪಿಸಲಾಗಿದ್ದು, ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ವಾಗಿ ರೂಪುಗೊಳ್ಳಲಿದೆ. ಸಾಂಸ್ಕøತಿಕ ನಗರಿ ಮೈಸೂರಿನ ಲೋಕ ರಂಜನ್ ಮಹಲ್ ರಸ್ತೆಯಲ್ಲಿರುವ ರಿಜೆನ್ಸಿ ಚಿತ್ರಮಂದಿರ ಕಟ್ಟಡದಲ್ಲಿಯೇ ಸ್ಟಾರ್‍ವೆಲ್ಟ್ ಎಂಟರ್‍ಟೈನ್‍ಮೆಂಟ್ ಎಲ್‍ಎಲ್‍ಪಿ ಸಂಸ್ಥೆ ಮಂಜಿನ ಲೋಕ (ಸ್ನೋ-ಸಿಟಿ)ವನ್ನು ನಿರ್ಮಿಸಿದೆ. ಮೈಸೂರು ನಗರದ ಮೊಟ್ಟ ಮೊದಲ `ಸ್ನೋ-ಸಿಟಿ’ಯನ್ನು ಭಾನುವಾರ…
ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಟೋರಿಕ್ಷಾ ಚಾಲಕನ ಪುತ್ರಿ
April 15, 2019ಮೈಸೂರು: ಆಕೆ ಹರ್ಡಲ್ಸ್‍ನಲ್ಲಿ ಮಿಂಚಿನ ವೇಗದಲ್ಲಿ ಓಡುವ ಛಲಗಾತಿ. ಭಾರತವನ್ನು ಪ್ರತಿನಿಧಿಸಲು ಆಯ್ಕೆ ಯಾಗಿರುವ ಮೈಸೂರಿನ ಏಕೈಕ ಅಥ್ಲೆಟ್. ಇಟಲಿಯಲ್ಲಿ ಜು.3ರಿಂದ 13ರವರೆಗೆ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿ ಆಟೋರಿಕ್ಷಾ ಚಾಲಕ ಮಂಜು ಹಾಗೂ ರುಕ್ಮಿಣಿ ದಂಪತಿ ಪುತ್ರಿ ಎಂ.ಆರ್.ಧನುಷಾ ಪಾಲ್ಗೊಳ್ಳುತ್ತಿದ್ದಾರೆ. ಕಡು ಬಡತನದ ಕುಟುಂಬದ ಮಗಳಾಗಿದ್ದರೂ ಕ್ರೀಡೆಯಲ್ಲಿ ಸಾಧನೆಗೈಯ್ದು ಈಗಾಗಲೇ ಗಮನ ಸೆಳೆದಿರುವ ಧನುಷಾ ಇಟ ಲಿಯ ನಪೋಲಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾ ನಿಲಯಗಳ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ 40…
ಬೈನಾಕ್ಯುಲರ್‍ನಿಂದ ಮೈಸೂರಿನ ಅಂದ ಸವಿಯುತ್ತಿದ್ದಾರೆ ಪ್ರವಾಸಿಗರು
April 15, 2019ಮೈಸೂರು: ಚಾಮುಂಡಿಬೆಟ್ಟ ದಿಂದ ಸಾಂಸ್ಕøತಿಕ ನಗರಿ ಮೈಸೂರಿನ ಸೌಂದರ್ಯವನ್ನು ಉಣಬಡಿಸಲು ವ್ಯೂ ಪಾಯಿಂಟ್‍ನಲ್ಲಿ ದೇವಾಲಯದ ಆಡಳಿತ ಮಂಡಳಿ ಅಳವಡಿಸಿರುವ ವಿದೇಶಿ ನಿರ್ಮಿತ ಬೈನಾಕ್ಯುಲರ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತಿದಿನ 200ರಿಂದ 300 ಮಂದಿ ನಗರದ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಪುಳಕಗೊಳ್ಳುತ್ತಿದ್ದಾರೆ. ರಾಜ್ಯದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿದಿನ ದೇಶ-ವಿದೇಶಗಳ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಬೆಟ್ಟದ ವ್ಯೂ ಪಾಯಿಂಟ್‍ನಿಂದ ಮೈಸೂರಿನ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಸದಾವಕಾಶ ಕಲ್ಪಿಸುವ…
ಗಮನ ಸೆಳೆಯುತ್ತಿವೆ ಪಕ್ಷೇತರರ ಚಿಹ್ನೆಗಳು
April 15, 2019ಮೈಸೂರು: ಲೋಕಸಭಾ ಚುನಾ ವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಆಯೋಗ ನೀಡಿರುವ ಚಿಹ್ನೆ ಗಮನ ಸೆಳೆಯುತ್ತಿದ್ದು, ವಿವಿಧ ಪರಿಕರ, ವಾಹನ, ಹಣ್ಣಿನ ಗುರುತು ಪಡೆದಿ ರುವ ಅಭ್ಯರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ದಲ್ಲಿ ತೊಡಗಿದ್ದಾರೆ. ನಿಯಮಾನುಸಾರ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಂಡು ಅಧಿಕೃತ ಚಿಹ್ನೆ ಪಡೆದಿರುವ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಯನ್ನು ಹೊರತುಪಡಿಸಿ, ಪಕ್ಷೇತರ ಹಾಗೂ ಸಣ್ಣ-ಪುಟ್ಟ ಪಕ್ಷಗಳ ಅಭ್ಯರ್ಥಿಗಳಿಗೆ ಅಧಿಕೃತ ಚಿಹ್ನೆ ಇಲ್ಲದೇ ಇರುವುದರಿಂದ ಆಯೋಗ ಅಭ್ಯರ್ಥಿಗಳ…










