ಅರಮನೆ ನಗರಿ ಮೈಸೂರಲ್ಲಿ ಪ್ರವಾಸಿಗರಿಗೆ ಮತ್ತೊಂದು ಹೊಸ ಆಕರ್ಷಣೆ `ಸ್ನೋ-ಸಿಟಿ’
ಮೈಸೂರು

ಅರಮನೆ ನಗರಿ ಮೈಸೂರಲ್ಲಿ ಪ್ರವಾಸಿಗರಿಗೆ ಮತ್ತೊಂದು ಹೊಸ ಆಕರ್ಷಣೆ `ಸ್ನೋ-ಸಿಟಿ’

April 15, 2019

ಮೈಸೂರು: ಮಂಜಿನ ಲೋಕದಲ್ಲಿ ಕ್ಷಣವಾದರೂ ಕಾಲ ಕಳೆಯ ಬೇಕೆಂಬ ಮನದಾಸೆಯುಳ್ಳ ಮೈಸೂರಿ ಗರು ಹಿಮಾಲಯಕ್ಕೆ ಹೋಗಬೇಕಾಗಿಲ್ಲ. ಕೊರೆವ ಚಳಿ ಅನುಭವದೊಂದಿಗೆ ಹಿಮಾ ವೃತಗೊಂಡ ಪ್ರದೇಶದಲ್ಲಿ ಆಟ ಆಡಿ, ರೋಮಾಂಚನಗೊಳ್ಳುವ ವಾತಾವರಣ ವನ್ನು ಮೈಸೂರಿನಲ್ಲಿ ಕಲ್ಪಿಸಲಾಗಿದ್ದು, ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ವಾಗಿ ರೂಪುಗೊಳ್ಳಲಿದೆ.

ಸಾಂಸ್ಕøತಿಕ ನಗರಿ ಮೈಸೂರಿನ ಲೋಕ ರಂಜನ್ ಮಹಲ್ ರಸ್ತೆಯಲ್ಲಿರುವ ರಿಜೆನ್ಸಿ ಚಿತ್ರಮಂದಿರ ಕಟ್ಟಡದಲ್ಲಿಯೇ ಸ್ಟಾರ್‍ವೆಲ್ಟ್ ಎಂಟರ್‍ಟೈನ್‍ಮೆಂಟ್ ಎಲ್‍ಎಲ್‍ಪಿ ಸಂಸ್ಥೆ ಮಂಜಿನ ಲೋಕ (ಸ್ನೋ-ಸಿಟಿ)ವನ್ನು ನಿರ್ಮಿಸಿದೆ. ಮೈಸೂರು ನಗರದ ಮೊಟ್ಟ ಮೊದಲ `ಸ್ನೋ-ಸಿಟಿ’ಯನ್ನು ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆ ಯರ್ ಪ್ರವಾಸಿಗರಿಗೆ ಸಮರ್ಪಿಸಿದರು.

ಇದುವರೆಗೂ ಮಂಜುಗಡ್ಡೆಯ ಮೇಲೆ ಆಟ ಆಡಬೇಕೆನಿಸಿದರೆ ಹಿಮಾಲಯ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರಕ್ಕೆ ಹೋಗಬೇಕಾಗಿತ್ತು. ಈಗ ಬೆಂಗ ಳೂರು ಸೇರಿದಂತೆ ವಿವಿಧೆಡೆ ನಿರ್ಮಿಸಿ ರುವ `ಸ್ನೋ-ವಲ್ರ್ಡ್’ ಇದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಮೈಸೂರಿನ ಪ್ರವಾಸಿ ತಾಣಗಳ ಸಾಲಿಗೆ `ಸ್ನೋ-ಸಿಟಿ’ ಸೇರ್ಪಡೆ ಯಾಗಿದೆ. ರಾಜಮನೆತನಕ್ಕೆ ಸೇರಿದ ರೀಜೆನ್ಸಿ ಥಿಯೇಟರ್ ಕಟ್ಟಡದಲ್ಲಿ 10 ಸಾವಿರ ಚ. ಅಡಿ ವಿಸ್ತೀರ್ಣದಲ್ಲಿ ಈ ಸ್ನೋ-ಸಿಟಿ ನಿರ್ಮಿ ಸಲಾಗಿದೆ. ಕಟ್ಟಡ 2.5 ಎಕರೆ ಪ್ರದೇಶ ದಲ್ಲಿದ್ದು, ವಾಹನಗಳ ನಿಲುಗಡೆ, ಕಟ್ಟಡದ ಮುಂಭಾಗ ಸೆಲ್ಫಿ ಪಾಯಿಂಟ್, ಲಾನ್ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲಾಗು ತ್ತಿದೆ. 40 ಅಡಿ ಎತ್ತರದ ಸಭಾಂಗಣ ದಲ್ಲಿಯೇ ಮಂಜಿನಲೋಕವನ್ನು ನಿರ್ಮಿಸ ಲಾಗಿದೆ. ಮೈನಸ್ 6 ಡಿಗ್ರಿ ಸೆಲ್ಸಿಯಸ್ ಇರುವಂತೆ ವ್ಯವಸ್ಥೆ ಮಾಡಲಾಗಿದ್ದು, ಕೃತಕ ಮಂಜುಗಡ್ಡೆ ನಿರ್ಮಿಸಲಾಗಿದೆ.

ಸ್ನೋ-ಸಿಟಿಯಲ್ಲಿ ಹಿಮ ಉಂಡೆ ಎಸೆ ಯುವುದು, ಹಿಮ ಶಿಖರಾರೋಹಣ, ಹಿಮದ ಮೇಲೆ ಜಾರುವುದು, ಹಿಮ ಬ್ಯಾಸ್ಕೆಟ್ ಬಾಲ್ ಆಡುವ ವ್ಯವಸ್ಥೆ ಮಾಡಲಾಗಿದೆ. ಆಕ ರ್ಷಕ ಡಿಜೆ ಸಂಗೀತದೊಂದಿಗೆ ಕೊರೆ ಯುವ ಚಳಿ ವಾತಾವರಣದಲ್ಲಿ ಮಿಂದೇಳ ಬಹುದಾದ ಅವಕಾಶ ಕಲ್ಪಿಸಿರುವುದು ಪ್ರವಾ ಸಿಗರಿಗೆ ಮುದ ನೀಡಲಿದೆ. ಕೊರೆಯುವ ಚಳಿ ವಾತಾವರಣದಲ್ಲಿ ಆಟ ಆಡುವುದ ರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಗಟ್ಟಲು ವಿವಿಧೆಡೆ ವಿವಿಧ ತಾಪಮಾನ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಕಟ್ಟಡವನ್ನು ಪ್ರವೇಶಿಸು ತ್ತಿದ್ದಂತೆ 18ರಿಂದ 24 ಡಿಗ್ರಿ ಸೆಲ್ಸಿಯಸ್ ವಾತಾವರಣವಿರುವಂತೆ ಮಾಡಲಾಗಿದೆ. ನಂತರ ಏರ್‍ಲಾಕ್ ಕೊಠಡಿಯಲ್ಲಿ 5 ರಿಂದ 15 ಡಿಗ್ರಿ ಸೆಲ್ಸಿಯಸ್, ಹಿಮ ಪ್ರದೇಶ ದಲ್ಲಿ ಮೈನಸ್ 5ರಿಂದ 10 ಡಿಗ್ರಿ ಸೆಲ್ಸಿ ಯಸ್ ಚಳಿ ಇರುತ್ತದೆ. ಆಟದ ಅವಧಿ ಮುಗಿದ ನಂತರ ನಿರ್ಗಮನದ ವೇಳೆ ಏರ್ ಲಾಕ್ ಕೊಠಡಿಯಲ್ಲಿ 5 ರಿಂದ 15 ಡಿಗ್ರಿ ಸೆಲ್ಸಿಯಸ್, ಕಟ್ಟಡದಿಂದ ಹೊರ ಬರುವ ವೇಳೆ 18ರಿಂದ 24 ಡಿಗ್ರಿ ಸೆಲ್ಸಿಯಸ್ ವಾತಾ ವರಣವಿರುವಂತೆ ಮಾಡಲಾಗಿದೆ. ಏಕಾಏಕಿ ವಾತಾವರಣ ಬದಲಾಗುವುದರಿಂದ ಅನಾ ರೋಗ್ಯ ತಲೆದೋರುವುದನ್ನು ತಡೆಗಟ್ಟಲು ಹೀಗೆ ಏರುಪೇರು ಮಾಡಲಾಗಿದೆ.

ಜರ್ಕಿನ್, ಬೂಟ್, ಗ್ಲೌಸ್: ಪ್ರವಾಸಿಗ ರಿಗೆ ಸಂಸ್ಥೆ ವತಿಯಿಂದಲೇ ಜರ್ಕಿನ್, ಗ್ಲೌಸ್, ಬೂಟ್ ನೀಡಲಾಗುತ್ತದೆ. ಇವು ಗಳನ್ನು ಧರಿಸದೇ ಹಿಮವಿರುವ ಆವರಣಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಹಿಮದ ಆವರಣದಿಂದ ವಾಪಸ್ಸಾಗುವಾಗ ಜರ್ಕಿನ್, ಗ್ಲೌಸ್, ಬೂಟ್ ಹಿಂದಿರುಗಿಸ ಬೇಕು. ಒಬ್ಬರು ಧರಿಸಿದ ಜರ್ಕಿನ್, ಗ್ಲೌಸ್, ಬೂಟ್ ಅನ್ನು ಸ್ವಚ್ಛಗೊಳಿಸದೇ ಬೇರೊಬ್ಬ ರಿಗೆ ನೀಡುವುದಿಲ್ಲ. ಪ್ರವಾಸಿಗರು ಬಳಸಿದ ಜರ್ಕಿನ್, ಗ್ಲೌಸ್, ಬೂಟ್ ಅನ್ನು ಸ್ವಚ್ಛ ಗೊಳಿಸಲು ಪ್ರತ್ಯೇಕ ಯಂತ್ರಗಳಿದ್ದು, ಮೂರ್ನಾಲ್ಕು ನಿಮಿಷದಲ್ಲಿ ಸ್ವಚ್ಛಗೊಳಿಸಲಿದೆ.

ಲಾಕರ್: ಸಾರ್ವಜನಿಕರು, ಪ್ರವಾಸಿ ಗರು ತರುವ ಬ್ಯಾಗ್(ವ್ಯಾನಿಟಿ), ಲಗೇಜ್, ಬೆಲೆಬಾಳುವ ವಸ್ತು, ಮೊಬೈಲ್, ಕ್ಯಾಮರಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಡಲು ಲಾಕರ್ ವ್ಯವಸ್ಥೆ ಮಾಡಲಾಗಿದೆ. ಹಿಮ ವಿರುವ ಸ್ಥಳಕ್ಕೆ ಮೊಬೈಲ್, ಕ್ಯಾಮರಾ ತೆಗೆದುಕೊಂಡು ಹೋಗುವುದನ್ನು ನಿರ್ಬಂ ಧಿಸಲಾಗಿದೆ. ಆದರೆ ಸಂಸ್ಥೆ ವತಿಯಿಂ ದಲೇ ಕ್ಯಾಮರಾಮನ್‍ಗಳಿದ್ದು, ಬೇಕೆಂದ ವರಿಗೆ ಫೋಟೊ ತೆಗೆದುಕೊಡಲಿದ್ದಾರೆ. ಅಲ್ಲದೆ, ಹಿಮದ ಮೇಲೆ ಚಲಿಸುವ ಸ್ಕೂಟರ್ (ಸ್ಕೀಯಿಂಗ್) ಇಡಲಾಗಿದ್ದು, ಕೇವಲ ಅದರ ಮುಂದೆ ಫೋಟೊ ತೆಗೆಸಿಕೊಳ್ಳಬಹುದಾ ಗಿದೆ. ಅದಕ್ಕಾಗಿ ಅಲ್ಲಿಯೇ ಕೌಂಟರ್ ತೆರೆಯಲಾಗಿದೆ. ಹಣ ಪಾವತಿಸಿ ಫೋಟೋ ಪಡೆಯಬಹುದು.

ಶುಭ ಕೋರಿದರು: ಪ್ರಮೋದಾದೇವಿ ಒಡೆಯರ್, ಸ್ನೋ-ಸಿಟಿ ವೀಕ್ಷಿಸಿ ಮೈಸೂ ರಿಗೆ ಬರುವ ಪ್ರವಾಸಿಗರಿಗೆ ಸ್ನೋ-ಸಿಟಿ ಮುದ ನೀಡಲಿದೆ ಎಂದರು. ಈ ಸಂದರ್ಭ ದಲ್ಲಿ ಸ್ನೋ-ಸಿಟಿ ಪಾಲುದಾರರಾದ ವಿನೋದ್ ಸಬರ್‍ವಾಲ್, ಸನ್ನಿ ಸಬರ್ ವಾಲ್, ಅರವಿಂದ್ ದೋಶಿ, ಯಶವಂತ್ ಜೈನ್ ಇನ್ನಿತರರು ಉಪಸ್ಥಿತರಿದ್ದರು.

Translate »