ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಟೋರಿಕ್ಷಾ ಚಾಲಕನ ಪುತ್ರಿ
ಮೈಸೂರು

ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಟೋರಿಕ್ಷಾ ಚಾಲಕನ ಪುತ್ರಿ

April 15, 2019

ಮೈಸೂರು: ಆಕೆ ಹರ್ಡಲ್ಸ್‍ನಲ್ಲಿ ಮಿಂಚಿನ ವೇಗದಲ್ಲಿ ಓಡುವ ಛಲಗಾತಿ. ಭಾರತವನ್ನು ಪ್ರತಿನಿಧಿಸಲು ಆಯ್ಕೆ ಯಾಗಿರುವ ಮೈಸೂರಿನ ಏಕೈಕ ಅಥ್ಲೆಟ್. ಇಟಲಿಯಲ್ಲಿ ಜು.3ರಿಂದ 13ರವರೆಗೆ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿ ಆಟೋರಿಕ್ಷಾ ಚಾಲಕ ಮಂಜು ಹಾಗೂ ರುಕ್ಮಿಣಿ ದಂಪತಿ ಪುತ್ರಿ ಎಂ.ಆರ್.ಧನುಷಾ ಪಾಲ್ಗೊಳ್ಳುತ್ತಿದ್ದಾರೆ.

ಕಡು ಬಡತನದ ಕುಟುಂಬದ ಮಗಳಾಗಿದ್ದರೂ ಕ್ರೀಡೆಯಲ್ಲಿ ಸಾಧನೆಗೈಯ್ದು ಈಗಾಗಲೇ ಗಮನ ಸೆಳೆದಿರುವ ಧನುಷಾ ಇಟ ಲಿಯ ನಪೋಲಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾ ನಿಲಯಗಳ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ 40 ಅಥ್ಲೀಟುಗಳ ತಂಡದಲ್ಲಿ (ಕರ್ನಾಟಕದ ನಾಲ್ಕು) ಕ್ರೀಡಾಪಟು ಗಳಲ್ಲಿ ಸ್ಥಾನ ಪಡೆದಿರುವ ಮೈಸೂರಿನ ಏಕೈಕ ಅಥ್ಲೆಟ್ ಆಗಿದ್ದಾರೆ. ಸೋಮಾನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ನಿಯಾಗಿರುವ ಧನುಷಾ, ಈಗಾಗಲೇ ಜಪಾನಿನಲ್ಲಿ ನಡೆದ ಜ್ಯೂನಿ ಯರ್ ಏಷ್ಯಾ ಗೇಮ್‍ನಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ನೀಡಿದ್ದರು. ಫೆಡರೇಷನ್ ಕಪ್‍ನಲ್ಲಿ ಚಿನ್ನ ಪದಕ ಗಳಿಸಿದ್ದಾರೆ. ಜ್ಯೂನಿಯರ್ ನ್ಯಾಷನಲ್, ದಕ್ಷಿಣ ವಲಯದ ಕ್ರೀಡಾಕೂಟ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವ ಹಿರಿಮೆ ಇವರದ್ದಾಗಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 24ವರ್ಷದ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಮುರಿದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸಿದ್ದಾರೆ.

ದೇಶದ ಕೀರ್ತಿ ಹೆಚ್ಚಿಸುವ ಭರವಸೆ ಇದೆ: ಅಥ್ಲೆಟ್ ಧನುಷಾ ಅವರ ತರಬೇತುದಾರ ಎಂ.ಪುನೀತ್ ಮಾತನಾಡಿ, ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಧನುಷಾ ಮೈಸೂರು ವಿವಿ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ ಇಟಲಿಯಲ್ಲಿ ನಡೆ ಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಮೈಸೂರಿನ ಏಕೈಕ ಅಥ್ಲೆಟ್. ಮಂಗಳೂರು ವಿವಿಯಿಂದ ಮೂವರು ಆಯ್ಕೆಯಾಗಿ ದ್ದಾರೆ. ಮಂಗಳೂರಿನ ಕ್ರೀಡಾಪಟುಗಳಿಗೆ ಅಲ್ಲಿನ ಜನರು ಹಾಗೂ ಸಂಘ-ಸಂಸ್ಥೆಗಳು ನೆರವು ನೀಡಿವೆ. ಮೈಸೂರಿನ ಧನುಷಾ ಅವರಿಗೂ ನೆರವಿನ ಹಸ್ತ ದೊರೆತರೆ ದೇಶದ ಕೀರ್ತಿ ಪತಾಕೆ ಇಟಲಿಯಲ್ಲಿ ಹಾರಿಸಲಿದ್ದಾರೆ. ಆ ಛಲ ಅವರಲ್ಲಿದೆ ಎಂದರು. ನೆರವು ನೀಡಲು ಬಯಸುವವರು ಮೊ.ಸಂ. 7338154079 ಅಥವಾ 9449859055(ಕೋಚ್) ಸಂಪರ್ಕಿಸುವಂತೆ ಕೋರಿದ್ದಾರೆ.

ಸಾಧಿಸುವ ಛಲವಿದೆ `ಮೈಸೂರು ಮಿತ್ರ’ನೊಂದಿಗೆ ಅಥ್ಲೆಟ್ ಧನುಷಾ ಮಾತ ನಾಡಿ, ಹರ್ಡಲ್‍ನಲ್ಲಿ ಲಾಂಗ್ ಜಂಪ್, ಹೈ-ಜಂಪ್, ಜಾವೆ ಲಿನ್ ಥ್ರೋ, ಶಾಟ್‍ಪುಟ್, 200, 800 ಮೀಟರ್ ಓಟದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕ್ರೀಡಾಕೂಟ ಜು.3 -13ರವರೆಗೆ ನಡೆಯ ಲಿದೆ. ಜೂನ್ 20ಕ್ಕೆ ಒಡಿಸ್ಸಾಗೆ ತೆರಳಿ ಅಲ್ಲಿ ನಡೆ ಯುವ ಕ್ಯಾಂಪ್‍ನಲ್ಲಿ ಪಾಲ್ಗೊಳ್ಳಬೇಕು. ಕ್ರೀಡಾಕೂಟಕ್ಕಾಗಿ ಹೋಗಿ-ಬರುವ ವೆಚ್ಚವನ್ನು ನಾವೇ ಭರಿಸಬೇಕಾಗಿದೆ. ಒಟ್ಟು 3 ಲಕ್ಷ ರೂ. ಹಣ ಬೇಕಾಗುತ್ತದೆ. ನಮ್ಮ ತಂದೆ ಆಟೋ ಚಾಲಕರಾಗಿದ್ದು, ತಾಯಿ ಗೃಹಿಣಿ. ಇಷ್ಟು ಮೊತ್ತ ಹೊಂದಿಸಲು ಪರದಾಡುತ್ತಿ ದ್ದೇನೆ. ಕೆಲವರನ್ನು ಭೆÉೀಟಿ ಮಾಡಿ ಆರ್ಥಿಕ ನೆರವು ನೀಡು ವಂತೆ ಮನವಿ ಮಾಡಿದ್ದೇನೆ. ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖಂಡರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಯಾರಾದರೂ ನೆರವು ನೀಡುವ ನಿರೀಕ್ಷೆಯಲ್ಲಿದ್ದೇನೆ ಎಂದರು.

Translate »