ಬೈನಾಕ್ಯುಲರ್‍ನಿಂದ ಮೈಸೂರಿನ ಅಂದ ಸವಿಯುತ್ತಿದ್ದಾರೆ ಪ್ರವಾಸಿಗರು
ಮೈಸೂರು

ಬೈನಾಕ್ಯುಲರ್‍ನಿಂದ ಮೈಸೂರಿನ ಅಂದ ಸವಿಯುತ್ತಿದ್ದಾರೆ ಪ್ರವಾಸಿಗರು

ಮೈಸೂರು: ಚಾಮುಂಡಿಬೆಟ್ಟ ದಿಂದ ಸಾಂಸ್ಕøತಿಕ ನಗರಿ ಮೈಸೂರಿನ ಸೌಂದರ್ಯವನ್ನು ಉಣಬಡಿಸಲು ವ್ಯೂ ಪಾಯಿಂಟ್‍ನಲ್ಲಿ ದೇವಾಲಯದ ಆಡಳಿತ ಮಂಡಳಿ ಅಳವಡಿಸಿರುವ ವಿದೇಶಿ ನಿರ್ಮಿತ ಬೈನಾಕ್ಯುಲರ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತಿದಿನ 200ರಿಂದ 300 ಮಂದಿ ನಗರದ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಪುಳಕಗೊಳ್ಳುತ್ತಿದ್ದಾರೆ.

ರಾಜ್ಯದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿದಿನ ದೇಶ-ವಿದೇಶಗಳ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಬೆಟ್ಟದ ವ್ಯೂ ಪಾಯಿಂಟ್‍ನಿಂದ ಮೈಸೂರಿನ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಸದಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೇವಾ ಲಯದ ಆಡಳಿತ ಮಂಡಳಿ 2017ರ ಸೆ. 22ರಂದು 40 ಲಕ್ಷ ರೂ. ವೆಚ್ಚದಲ್ಲಿ 2 ಬೈನಾಕ್ಯುಲರ್ ಅನ್ನು ಅಳವಡಿಸಿದೆ.

ಮೈಸೂರಿನಿಂದ ಚಾಮುಂಡಿಬೆಟ್ಟಕ್ಕೆ ಹೋಗುವ ಹಾಗೂ ಬೆಟ್ಟದಿಂದ ನಂದಿ ಮೂರ್ತಿಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ಅಡಿ ಅಗಲ, 6 ಅಡಿ ಉದ್ದ, 3 ಅಡಿ ಎತ್ತರದ ಗೋಪುರ ನಿರ್ಮಾಣ ಮಾಡಿ, 5 ಅಡಿ ಎತ್ತರದಲ್ಲಿ ಬೈನಾಕ್ಯುಲರ್ ಅಳವಡಿಸಲಾಗಿದೆ. ಇದರಿಂದ ಅರಮನೆ, ಫಿಲೋಮಿನಾ ಚರ್ಚ್, ಕೆಆರ್‍ಎಸ್ ಸೇರಿದಂತೆ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಬಹುದು. 6ರಿಂದ 7 ಕಿ.ಮಿ ದೂರದವರೆಗೂ ಸ್ಪಷ್ಟವಾಗಿ ವೀಕ್ಷಿಸ ಬಹುದಾದ ಸಾಮಥ್ರ್ಯವುಳ್ಳ ವಿದೇಶಿ ನಿರ್ಮಾಣದ ಬೈನಾಕ್ಯುಲರ್ ಬೆಲೆ 15 ಲಕ್ಷ ರೂ. ಎರಡು ಬೈನಾಕ್ಯುಲರ್‍ಗೆ 30 ಲಕ್ಷ ರೂ. ಹಾಗೂ ಗೋಪುರ ನಿರ್ಮಾ ಣಕ್ಕೆ 10 ಲಕ್ಷ ರೂ. ವೆಚ್ಚವಾಗಿದೆ.

ಭದ್ರತೆಗೆ ಕ್ರಮ: ವೀಕ್ಷಣಾ ಗೋಪುರ ದಲ್ಲಿ ಒಮ್ಮೆ 10 ರಿಂದ 12 ಮಂದಿ ನಿಲ್ಲ ಬಹುದಾಗಿದೆ. ಬೈನಾಕ್ಯುಲರ್‍ನಿಂದ ಒಬ್ಬ ರಾದ ನಂತರ ಒಬ್ಬರು ವೀಕ್ಷಿಸಬೇಕಾಗಿದೆ. ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. ವೀಕ್ಷಣಾ ಗೋಪುರ ನಿರ್ಮಾ ಣಕ್ಕೆ 6 ಅಡಿ ಪಾಯ ತೋಡಿ 5 ಇಂಚು ಅಗಲ, 5 ಇಂಚು ಎತ್ತರವುಳ್ಳ ಕಬ್ಬಿಣದ ಬೀಮ್ ಬಳಸಲಾಗಿದೆ. ನೆಲಹಾಸಿಗೆ ತಗಡನ್ನು ಬಳಸಲಾಗಿದೆ. ವೀಕ್ಷಕರು ಬೀಳ ದಂತೆ ಕಬ್ಬಿಣದ ರೇಲಿಂಗ್ಸ್ ಅಳವಡಿಸ ಲಾಗಿದೆ. ಭದ್ರತಾ ಸಿಬ್ಬಂದಿ ನಿಯೋಜಿಸ ಲಾಗಿದೆ. 2017ರ ಡಿಸೆಂಬರ್ ಅಂತ್ಯದವ ರೆಗೆ 30,548 ವೀಕ್ಷಕರು ಬೈನಾಕ್ಯುಲರ್ ನಿಂದ ವೀಕ್ಷಣೆ ಮಾಡಿದ್ದು, 6,10,969 ರೂ. ಶುಲ್ಕ ಸಂಗ್ರಹವಾಗಿದೆ.

2018ನೇ ಸಾಲಿನಲ್ಲಿ 1,01,394 ವೀಕ್ಷಕ ರಿಂದ 20,27, 890 ರೂ. ಸಂಗ್ರಹವಾಗಿದೆ. 2019ರ ಜನವರಿ ಅಂತ್ಯಕ್ಕೆ 7547 ಪ್ರವಾ ಸಿಗರು ವೀಕ್ಷಿಸಿದ್ದು, 1,50,940 ರೂ. ಸಂಗ್ರಹವಾಗಿದೆ. ಫೆಬ್ರವರಿಯಲ್ಲಿ 1,10, 520 ರೂ., ಮಾರ್ಚ್ ತಿಂಗಳಲ್ಲಿ 1,14, 080 ರೂ ಸಂಗ್ರಹವಾಗಿದೆ. ಒಟ್ಟು 19 ತಿಂಗಳಲ್ಲಿ 1,50,719 ಪ್ರವಾಸಿಗರು ಬೈನಾ ಕ್ಯುಲರ್ ವೀಕ್ಷಣೆ ಮಾಡಿದ್ದು, ದೇವಾ ಲಯದ ಆಡಳಿತ ಮಂಡಳಿಗೆ 30,14, 399 ರೂ. ಸಂಗ್ರಹವಾಗಿದೆ.

ಪ್ರವಾಸಿಗರೊಬ್ಬರಿಗೆ 20 ರೂ. ನಿಗದಿ ಮಾಡಲಾಗಿದ್ದು, 120 ಸೆಕೆಂಡ್ ಬೈನಾಕ್ಯು ಲರ್ ಬಳಸಬಹುದಾಗಿದೆ. ಟಿಕೆಟ್ ಪಡೆದ ಪ್ರವಾಸಿಗರಿಗೆ ನಾಣ್ಯವೊಂದನ್ನು ನೀಡಲಾ ಗುತ್ತದೆ. ಅದನ್ನು ಬೈನಾಕ್ಯೂಲರ್ ಮೇಲಿ ರುವ ರಂಧ್ರದಲ್ಲಿ ಹಾಕಿದಾಗ ವೀಕ್ಷಣೆಗೆ ಲೆನ್ಸ್ ತೆರೆಯುತ್ತದೆ. 120 ಸೆಕೆಂಡ್ ವೀಕ್ಷ ಣೆಯ ಬಳಿಕ ಸ್ವಯಂಚಾಲಿತ ವ್ಯವಸ್ಥೆ ಯಲ್ಲಿ ಲೆನ್ಸ್ ಮುಚ್ಚಲ್ಪಡುತ್ತದೆ. ನಂತರ ಟಿಕೆಟ್ ಪಡೆದ ಮತ್ತೊಬ್ಬರಿಗೆ ವೀಕ್ಷಣೆಗೆ ಅವಕಾಶವಾಗುತ್ತದೆ. ಬೈನಾಕ್ಯುಲರ್ ಬಳಸಿದ ಪ್ರವಾಸಿಗರ ಸಂಖ್ಯೆ ನಿಖರವಾಗಿ ಎಣಿಕೆಯಾಗಲಿದೆ. ಊಟಿಯಲ್ಲಿನ ದೊಡ್ಡ ಬೆಟ್ಟ ಸೇರಿದಂತೆ ವಿವಿಧೆಡೆಯೂ ಹೀಗೆ ಬೈನಾಕ್ಯುಲರ್ ಅಳವಡಿಸಲಾಗಿದೆ.
ಎಂ.ಟಿ.ಯೋಗೇಶ್ ಕುಮಾರ್

April 15, 2019

Leave a Reply

Your email address will not be published. Required fields are marked *