ಗಮನ ಸೆಳೆಯುತ್ತಿವೆ ಪಕ್ಷೇತರರ ಚಿಹ್ನೆಗಳು
ಮೈಸೂರು

ಗಮನ ಸೆಳೆಯುತ್ತಿವೆ ಪಕ್ಷೇತರರ ಚಿಹ್ನೆಗಳು

April 15, 2019

ಮೈಸೂರು: ಲೋಕಸಭಾ ಚುನಾ ವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಆಯೋಗ ನೀಡಿರುವ ಚಿಹ್ನೆ ಗಮನ ಸೆಳೆಯುತ್ತಿದ್ದು, ವಿವಿಧ ಪರಿಕರ, ವಾಹನ, ಹಣ್ಣಿನ ಗುರುತು ಪಡೆದಿ ರುವ ಅಭ್ಯರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ದಲ್ಲಿ ತೊಡಗಿದ್ದಾರೆ. ನಿಯಮಾನುಸಾರ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಂಡು ಅಧಿಕೃತ ಚಿಹ್ನೆ ಪಡೆದಿರುವ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಯನ್ನು ಹೊರತುಪಡಿಸಿ, ಪಕ್ಷೇತರ ಹಾಗೂ ಸಣ್ಣ-ಪುಟ್ಟ ಪಕ್ಷಗಳ ಅಭ್ಯರ್ಥಿಗಳಿಗೆ ಅಧಿಕೃತ ಚಿಹ್ನೆ ಇಲ್ಲದೇ ಇರುವುದರಿಂದ ಆಯೋಗ ಅಭ್ಯರ್ಥಿಗಳ ಅಪೇಕ್ಷೆ ಮೇರೆಗೆ ವಿವಿಧ ಚಿಹ್ನೆ ನೀಡಿದೆ. ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳ ಚಿಹ್ನೆ ಗಮನಾರ್ಹವಾಗಿದೆ.

ಚುನಾವಣಾ ಚಿಹ್ನೆ(ಮೀಸಲು ಹಾಗೂ ಮಂಜೂರು) ಆದೇಶ 1968ರ ಪ್ರಕಾರ ಅಭ್ಯರ್ಥಿಗಳಿಗೆ ನೀಡಲು 198 ಚಿಹ್ನೆಗಳನ್ನು ಆಯೋಗ ಪಟ್ಟಿ ಮಾಡಿದೆ. 2 ವಿಧದ ಚಿಹ್ನೆಗಳಿದ್ದು, ಮೀಸಲು ಚಿಹ್ನೆ ನೋಂದಣಿಯಾಗಿ ರುವ ಪಕ್ಷಗಳಿಗೆ ಸೇರಿದ್ದರೆ, ಮಂಜೂರು ಮಾಡಬಹು ದಾದ ಚಿಹ್ನೆಯನ್ನು ಪಕ್ಷೇತರ ಅಭ್ಯರ್ಥಿಗೆ ನೀಡಬಹು ದಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವ, ಕೋಮು ಭಾವನೆ ಕೆರಳಿಸುವ, ಧರ್ಮದ ಆಧಾರದ ಚಿಹ್ನೆಗಳನ್ನು ಆಯೋಗ ಪಟ್ಟಿಯಿಂದ ಹೊರಗಿಟ್ಟಿದೆ.

ಆಯ್ಕೆ ಪ್ರಕ್ರಿಯೆ: ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗದ ಪಟ್ಟಿ ಯಲ್ಲಿರುವ ಚಿಹ್ನೆಗಳಲ್ಲಿ ಮೂರು ಚಿಹ್ನೆಗಳನ್ನು ಆಯ್ಕೆ ಮಾಡಿ, ಅರ್ಜಿಯಲ್ಲಿ ನಮೂದಿಸಿರಬೇಕು. ಇಷ್ಟವಾದ ಗುರುತಿಗೆ ಪ್ರಥಮ ಪ್ರಾಶಸ್ತ್ಯ ನೀಡಿ, ಉಳಿದ ಎರಡು ಗುರುತಿಗೆ ಎರಡನೇ ಮತ್ತು ಮೂರನೇ ಕ್ರಮಾಂಕದಲ್ಲಿ ನಮೂದಿಸಿರಬೇಕು. ಒಬ್ಬ ಅಭ್ಯರ್ಥಿ ಪ್ರಥಮ ಕ್ರಮಾಂಕ ದಲ್ಲಿ ನಮೂದಿಸಿದ ಚಿಹ್ನೆಯನ್ನೇ ಬೇರೊಬ್ಬ ಪಕ್ಷೇತರ ಅಭ್ಯರ್ಥಿಯೂ ಕ್ರಮಾಂಕ ಒಂದರಲ್ಲಿ ನಮೂದಿಸಿ ದ್ದರೆ, ಲಾಟರಿ ಎತ್ತುವ ಮೂಲಕ ಚಿಹ್ನೆಯನ್ನು ನೀಡ ಲಾಗುತ್ತದೆ. ಮತ್ತೊಬ್ಬ ಅಭ್ಯರ್ಥಿಗೆ ಎರಡನೇ ಕ್ರಮಾಂಕ ದಲ್ಲಿ ಆಯ್ಕೆ ಮಾಡಿದ್ದ ಗುರುತನ್ನು ನೀಡಲಾಗುತ್ತದೆ.

ಮೈಸೂರು-ಕೊಡಗು: ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳಿದ್ದು, ಅವರಲ್ಲಿ ಮೂವರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು. ಅವರು ತಮ್ಮ ಪಕ್ಷದ ಚಿಹ್ನೆಯಡಿ ಚುನಾವಣೆ ಎದುರಿಸುತ್ತಿದ್ದಾರೆ. ಆಟೋ ರಿಕ್ಷಾ, ಹೊಲಿಗೆ ಯಂತ್ರ, ಗ್ಯಾಸ್ ಸಿಲಿಂಡರ್, ಟ್ರಾಕ್ಟರ್ ಓಡಿಸುತ್ತಿರುವ ರೈತ, ನೇಗಿಲು ಹೊತ್ತ ರೈತ, ಏರ್‍ಕಂಡೀ ಶನರ್, ಟ್ರಕ್, ವಜ್ರ, ಪ್ರೆಷರ್ ಕುಕ್ಕರ್, ಟಿವಿ, ವಿಶಲ್ ಗುರುತನ್ನು ಪಕ್ಷೇತರ ಅಭ್ಯರ್ಥಿಗಳಿಗೆ ನೀಡಲಾಗಿದೆ.

ಮಂಡ್ಯ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ 22 ಅಭ್ಯರ್ಥಿಗಳಿದ್ದಾರೆ. ಬಿಎಸ್‍ಪಿ, ಜೆಡಿಎಸ್ ಅಭ್ಯರ್ಥಿಗಳಿಗೆ ಅಧಿಕೃತ ಚಿಹ್ನೆ ಇದ್ದರೆ, 20 ಪಕ್ಷೇತರ ಅಭ್ಯರ್ಥಿಗಳಿಗೆ ಅವರ ಕೋರಿಕೆ ಯಂತೆ ಆಯೋಗ ಚಿಹ್ನೆ ನೀಡಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವ ರಿಗೆ ಕಹಳೆ ಊದುತ್ತಿರುವ ರೈತನ ಚಿಹ್ನೆ ನೀಡಲಾ ಗಿದೆ. ಉಳಿದ ಅಭ್ಯರ್ಥಿಗಳಿಗೆ ಲಟ್ಟಣಿಗೆ, ನೇಗಿಲು ಹೊತ್ತ ರೈತ, ಆಟೋರಿಕ್ಷಾ, ಟ್ರಾಕ್ಟರ್ ಓಡಿಸುತ್ತಿರುವ ರೈತ, ಮೈಕ್, ಏರ್‍ಕಂಡೀಶನರ್, ಹೆಲ್ಮೆಟ್, ಸಿಸಿಟಿವಿ ಕ್ಯಾಮರಾ, ಟಿವಿ, ತೆಂಗಿನ ತೋಟ, ಬೀರು, ವಜ್ರ, ಸಿಲ್ಪಿ, ಚಪ್ಪಲಿ, ಸಿತಾರ್, ಕಂಪ್ಯೂಟರ್, ಬೇಬಿ ವಾಕರ್, ಬ್ಯಾಟ್ ಚಿಹ್ನೆ ನೀಡಿದೆ.

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, ಮೂವರು ರಾಜಕೀಯ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಿದ್ದಾರೆ. ಉಳಿದ 7 ಮಂದಿ ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಇವರಿಗೆ ಆಟೋರಿಕ್ಷಾ, ಹೊಲಿಗೆ ಯಂತ್ರ, ಗ್ಯಾಸ್ ಸಿಲಿಂಡರ್, ಹೆಲಿಕಾಪ್ಟರ್, ಕಹಳೆ ಊದುತ್ತಿರುವುದು, ಹಲಸಿನಹಣ್ಣಿನ ಚಿಹ್ನೆ ನೀಡಲಾಗಿದೆ.

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದು, ಮೂವರು ಪಕ್ಷದ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದಾರೆ. ಉಳಿದ ಮೂವರು ಅಭ್ಯರ್ಥಿ ಗಳಿಗೆ ಆಟೋರಿಕ್ಷಾ, ರೋಡ್‍ರೋಲರ್, ಡಿಶ್ ಆಂಟೆನಾ ಗುರುತು ನೀಡಲಾಗಿದೆ. ಪಕ್ಷೇತರ ಅಭ್ಯರ್ಥಿ ಗಳಲ್ಲಿ ಹೆಚ್ಚಿನವರು ಆಟೋರಿಕ್ಷಾ, ಗ್ಯಾಸ್ ಸಿಲಿಂಡರ್ ಚಿಹ್ನೆಯನ್ನೇ ಪಡೆದಿರುವುದು ವಿಶೇಷ. ದಿನ ಬಳಕೆಯ ವಸ್ತುಗಳ ಚಿಹ್ನೆ ಪಡೆದರೆ ಮತದಾರರ ಬೆಂಬಲ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಚಿಹ್ನೆ ಆಯ್ಕೆ ಮಾಡಿಕೊಂಡಿದ್ದಾರೆ.

Translate »