ಮೈಸೂರು

ವೈದ್ಯರ ಮನೆಯಲ್ಲಿ ಭಾರೀ ಕಳವು : ಪ್ರಕರಣಪರಿಚಯಸ್ಥರಿಂದಲೇ ಕೃತ್ಯ ಶಂಕೆ, ಪೊಲೀಸರ ತೀವ್ರ ಶೋಧ
ಮೈಸೂರು

ವೈದ್ಯರ ಮನೆಯಲ್ಲಿ ಭಾರೀ ಕಳವು : ಪ್ರಕರಣಪರಿಚಯಸ್ಥರಿಂದಲೇ ಕೃತ್ಯ ಶಂಕೆ, ಪೊಲೀಸರ ತೀವ್ರ ಶೋಧ

April 15, 2019

ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಡಾ.ರಾಜೀವ್ ಅವರ ಮನೆಯಲ್ಲಿ ನಡೆದಿರುವ ಭಾರೀ ಪ್ರಮಾಣದ ನಗ-ನಾಣ್ಯ ಕಳವು ಪ್ರಕರಣ ಭೇದಿಸಲು ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಏಪ್ರಿಲ್ 10ರಂದು ಬೆಳಿಗ್ಗೆ ಬೆಳಕಿಗೆ ಬಂದ ಕಳವು ಪ್ರಕರಣದಲ್ಲಿ ಮಹಜರು ನಡೆಸಿದಾಗ ಕಂಡು ಬಂದ ಸಾಂದರ್ಭಿಕ ಸಾಕ್ಷ್ಯಗಳಿಂದ ವೈದ್ಯರ ಮನೆಯಲ್ಲಿ ಕೆಲಸ ಮಾಡುವವರು, ಅವರಿಗೆ ಗೊತ್ತಿರುವವರು, ಸಂಬಂಧಿಕರಲ್ಲದೆ ಅಪರಿಚಿತರಿಂದ ಈ ಕೃತ್ಯ ನಡೆದಿರಲು ಸಾಧ್ಯವಿಲ್ಲ ಎಂಬುದು ದೃಢಪಟ್ಟಿದೆ. ಮನೆ ಕೆಲಸಗಾರರು, ಮನೆಗೆ ಆಗಿಂದಾಗ್ಗೆ ಬಂದು ಹೋಗುತ್ತಿದ್ದವರು, ಸಂಪರ್ಕ ದಲ್ಲಿದ್ದವರನ್ನು ಕರೆತಂದು ತೀವ್ರ ವಿಚಾರಣೆ…

ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ

April 15, 2019

ಮೈಸೂರು: ರಾಷ್ಟ್ರ ನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನವನ್ನು ಭಾನುವಾರ ನಗರದಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದೆಲ್ಲೆಡೆ ಮೆರ ವಣಿಗೆ, ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಉಪ ನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಪುರಭವನ ಆವರಣ, ಅಶೋಕ ಪುರಂ ಉದ್ಯಾನ ಹಾಗೂ ಮಾನಸಗಂಗೋತ್ರಿ ಆವ ರಣದ ಅಂಬೇಡ್ಕರ್ ಪ್ರತಿಮೆಗಳಿಗೆ ನಾನಾ ಸಂಘ ಟನೆಗಳು ಮತ್ತು ಸಾರ್ವಜನಿಕರು ಮಾಲಾರ್ಪಣೆ, ಪುಷ್ರ್ಪಾಚನೆ ಮಾಡಿ ಗೌರವಿಸಿದರು. ಅದ್ಧೂರಿ ಮೆರವಣಿಗೆ: ಆದಿ ಕರ್ನಾಟಕ ಮಹಾ…

ದೇಶದ ಸಮಸ್ಯೆಗಳಿಗೆ ಅಂಬೇಡ್ಕರ್ ವಿಚಾರಧಾರೆಯಿಂದ ಪರಿಹಾರ ಸಾಧ್ಯ
ಮೈಸೂರು

ದೇಶದ ಸಮಸ್ಯೆಗಳಿಗೆ ಅಂಬೇಡ್ಕರ್ ವಿಚಾರಧಾರೆಯಿಂದ ಪರಿಹಾರ ಸಾಧ್ಯ

April 15, 2019

ಮೈಸೂರು: ದೇಶದ ಪ್ರಸ್ತುತ ಸಮಸ್ಯೆ ಗಳ ನಿವಾರಣೆಗೆ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಧಾರೆ ಅತ್ಯಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಚಿಂತನೆಗಳನ್ನು ಅರಿತುಕೊಳ್ಳಬೇಕಿದೆ ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಜಿ.ಎಸ್.ಜಯದೇವ ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ.ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ `ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಶೋಧಕರ ಜವಾಬ್ದಾರಿಗಳು’…

ಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಸಿದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕ ನುಡಿ
ಮೈಸೂರು

ಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಸಿದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕ ನುಡಿ

April 15, 2019

ಭೇರ್ಯ: ದೇವೇಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಿಸುತ್ತಿದೆ. ಹಾಗಾಗಿ ರೈತರು, ಬಡವರ ಬಗ್ಗೆ ಕಳಕಳಿ ಹೊಂದಿರುವ ನಾಯಕ ಪುತ್ರ ನಿಖಿಲ್‍ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಕೆ.ಆರ್.ನಗರ ತಾಲೂಕಿನ ಮಿರ್ಲೆ, ಸಾಲಿಗ್ರಾಮ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಪುತ್ರನ ಪರ ಬಿರುಸಿನ ಪ್ರಚಾರ ನಡೆಸಿದ ಸಿಎಂ, ಇಂಥ ಕಠಿಣ ಪರಿಸ್ಥಿತಿಯಲ್ಲಿ ಪುತ್ರ ನಿಖಿಲ್ ನನ್ನ ಸಹಾಯಕ್ಕೆ ನಿಂತರೆ ಬಡವರ ಕಷ್ಟ-ಸುಖಕ್ಕೆ ನೆರವಾಗಲು ಸುಲಭವಾಗುತ್ತದೆ. ಮಂಡ್ಯ ಜಿಲ್ಲೆಯ…

ಕಾಂಗ್ರೆಸ್‍ನಿಂದ ಕುರುಬ ಸಮುದಾಯ ಕಡಗಣನೆ: ಆರೋಪ
ಮೈಸೂರು

ಕಾಂಗ್ರೆಸ್‍ನಿಂದ ಕುರುಬ ಸಮುದಾಯ ಕಡಗಣನೆ: ಆರೋಪ

April 15, 2019

ತಿ.ನರಸೀಪುರ: ಲೋಕಸಭಾ ಚುನಾವಣೆಯಲ್ಲಿ ತಿ.ನರಸೀ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರುಬ ಸಮುದಾಯವನ್ನು ಕಡೆಗಣಿಸ ಲಾಗುತ್ತಿದ್ದು, ನಿರ್ಲಕ್ಷ್ಯದ ಭಾವನೆ ಹೀಗೆ ಮುಂದುವರೆದರೆ ಇನ್ನೆರಡು ದಿನಗಳಲ್ಲಿ ಚುನಾವಣೆಯಿಂದ ಸಮಸ್ತ ಸಮುದಾಯದ ಜನರು ತಟಸ್ಥರಾಗಬೇಕಾಗುತ್ತದೆ ಎಂದು ತಾಲೂಕು ಕುರುಬರ ಸಂಘದ ಗೌರವಾ ಧ್ಯಕ್ಷರೂ ಆದ ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ ಎಚ್ಚರಿಸಿದರು. ಪಟ್ಟಣದ ಎಂ.ಮರೀಗೌಡ ಸ್ಮಾರಕ ಸಮು ದಾಯ ಭವನದಲ್ಲಿ ನಡೆದ ತಾಲೂಕಿನ ಕುರುಬ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಲೋಕ ಸಭಾ ಚುನಾವಣೆಯ ಪ್ರಚಾರ ಎಲ್ಲೆಡೆ…

ವಿ.ಶ್ರೀನಿವಾಸಪ್ರಸಾದ್ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ: ಬಿಎಸ್‍ವೈ
ಮೈಸೂರು

ವಿ.ಶ್ರೀನಿವಾಸಪ್ರಸಾದ್ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ: ಬಿಎಸ್‍ವೈ

April 15, 2019

ನಂಜನಗೂಡು: ನನಗೆ ಚುನಾವಣೆ ರಾಜಕೀಯ ಸಾಕು, ನಾನು ಯಾವುದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೂ ಸಹ ನಮ್ಮ ಒತ್ತಾಯಕ್ಕೆ ಮಣಿದು ವಿ.ಶ್ರೀನಿವಾಸಪ್ರಸಾದ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಕಾರ್ಯ ಕರ್ತರು ಶ್ರಮಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ನಗರದ ಊಟಿ ರಸ್ತೆಯಲ್ಲಿರುವ ವಿದ್ಯಾ ವರ್ಧಕ ಶಾಲೆ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಪರ ಚುನಾ ವಣೆ ಪ್ರಚಾರ ಸಮಾವೇಶ…

ಕಾಂಗ್ರೆಸ್ ಇಷ್ಟು ವರ್ಷ ಮಾಡಿದ್ದಾದರೂ ಏನು…
ಮೈಸೂರು

ಕಾಂಗ್ರೆಸ್ ಇಷ್ಟು ವರ್ಷ ಮಾಡಿದ್ದಾದರೂ ಏನು…

April 14, 2019

ಬೆಂಗಳೂರು:ಬಡತನ ನಿರ್ಮೂಲನೆ ಮಾಡುವುದಾಗಿ ಈಗ ತನ್ನ ಪ್ರಣಾಳಿಕೆಯಲ್ಲಿ ಭರ ವಸೆ ನೀಡಿರುವ ಕಾಂಗ್ರೆಸ್, ಇಷ್ಟು ವರ್ಷ ಮಾಡಿ ದ್ದಾದರೂ ಏನು? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ಬೆಂಗಳೂರು ಅರಮನೆ ಮೈದಾನ ದಲ್ಲಿ ಬೃಹತ್ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಯಲ್ಲಿ `ನ್ಯಾಯ್’ ಯೋಜನೆಯಡಿ ಬಡತನ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಹೇಳಿ ಕೊಂಡಿದೆ. ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿ…

ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ…
ಮೈಸೂರು

ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ…

April 14, 2019

ಕೆ.ಆರ್.ನಗರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ‘ನ್ಯಾಯ್’ ಯೋಜನೆಯಡಿ ಬಡತನ ನಿರ್ಮೂಲನೆ, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿ ದೇಶದ ಆರ್ಥಿಕ ವ್ಯವಸ್ಥೆ ಉತ್ತಮಪಡಿಸ ಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು. ಕೆ.ಆರ್.ನಗರದ ಕೃಷ್ಣರಾಜ ಕಾಲೇಜು ಆವರಣ ದಲ್ಲಿ ಶನಿವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮ ರಾಜನಗರ ಲೋಕಸಭಾ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿ ಗಳ ಪರ ಅವರು ಪ್ರಚಾರ ಮಾಡಿದರು. ಮೋದಿ ಅವರು 15 ಲಕ್ಷ ರೂ….

ಮದ್ದೂರಲ್ಲಿ ನಿಖಿಲ್ ಪರ ತಂದೆ-ತಾತ ಮತ ಬೇಟೆ
ಮೈಸೂರು

ಮದ್ದೂರಲ್ಲಿ ನಿಖಿಲ್ ಪರ ತಂದೆ-ತಾತ ಮತ ಬೇಟೆ

April 14, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಪರವಾಗಿ ತಂದೆ ಹೆಚ್.ಡಿ.ಕುಮಾರಸ್ವಾಮಿ, ತಾತ ಹೆಚ್.ಡಿ. ದೇವೇಗೌಡರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿಂದು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಿಂದ ರೋಡ್ ಶೋ ಆರಂಭಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಸಾಥ್ ನೀಡಿ ದರು. ನಿಖಿಲ್‍ರನ್ನು ಗೆಲ್ಲಿಸಲು ತಂದೆ-ಮಗನ ಜುಗಲ್ ಬಂಧಿ ನೋಡುಗರ ಗಮನ ಸೆಳೆಯಿತು, ಹೊನ್ನಲಗೆರೆ ಗ್ರಾಮದಲ್ಲಿ ರೋಡ್…

ಜೆಡಿಎಸ್‍ನಿಂದ ನಿಮ್ಮೂರ ಮಗಳಿಗೂ ಅನ್ಯಾಯ
ಮೈಸೂರು

ಜೆಡಿಎಸ್‍ನಿಂದ ನಿಮ್ಮೂರ ಮಗಳಿಗೂ ಅನ್ಯಾಯ

April 14, 2019

ಮಂಡ್ಯ: ಮಹಿಳೆಯರ ಬಗ್ಗೆ ಜೆಡಿಎಸ್‍ಗೆ ಗೌರವ ಇಲ್ಲ. ಅಗೌರವದಿಂದ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ, ಜೆಡಿಎಸ್‍ನಿಂದ ನಿಮ್ಮೂರಿನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಕಷ್ಟ ಪಟ್ಟು ಓದಿ, ಐಎಎಸ್ ಮಾಡಿದ್ದ ಅವರನ್ನು ಕೆಲಸ ಬಿಡಿಸಿ, ಕರ್ಕೊಂಡು ಬಂದು ಮೋಸ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ಬಯಲು ಮಾಡಿದ್ದಾರೆ. ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ವಿವಿಧೆಡೆ ಇಂದು ಪ್ರಚಾರ ನಡೆಸಿದ ವೇಳೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಲಕ್ಷ್ಮೀ ಅಶ್ವಿನ್‍ಗೌಡ ಅವರ ಹುಟ್ಟೂರು…

1 1,037 1,038 1,039 1,040 1,041 1,611
Translate »