ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ

ಮೈಸೂರು: ರಾಷ್ಟ್ರ ನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನವನ್ನು ಭಾನುವಾರ ನಗರದಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದೆಲ್ಲೆಡೆ ಮೆರ ವಣಿಗೆ, ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಉಪ ನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಪುರಭವನ ಆವರಣ, ಅಶೋಕ ಪುರಂ ಉದ್ಯಾನ ಹಾಗೂ ಮಾನಸಗಂಗೋತ್ರಿ ಆವ ರಣದ ಅಂಬೇಡ್ಕರ್ ಪ್ರತಿಮೆಗಳಿಗೆ ನಾನಾ ಸಂಘ ಟನೆಗಳು ಮತ್ತು ಸಾರ್ವಜನಿಕರು ಮಾಲಾರ್ಪಣೆ, ಪುಷ್ರ್ಪಾಚನೆ ಮಾಡಿ ಗೌರವಿಸಿದರು.

ಅದ್ಧೂರಿ ಮೆರವಣಿಗೆ: ಆದಿ ಕರ್ನಾಟಕ ಮಹಾ ಸಂಸ್ಥೆ ಹಾಗೂ ಯುವ ಸಂಘಟನೆಗಳ ಒಕ್ಕೂಟದ ಸಹ ಯೋಗದಲ್ಲಿ ನಗರದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು.

ಅಶೋಕಪುರಂನ ಅಂಬೇಡ್ಕರ್ ಉದ್ಯಾನ ಆವರಣದಲ್ಲಿ ಮೆರವಣಿಗೆಗೆ ಅಶೋಕಪುರಂನ ಹಿರಿಯ ಮುಖಂಡರಾದ ಉಸ್ತಾದ್ ಚಲುವಯ್ಯ, ಸಿದ್ದಯ್ಯ ಚಾಲನೆ ನೀಡಿದರು.

ಸಂಸತ್ತಿನ ಎದುರು ಅಂಬೇಡ್ಕರ್ ನಿಂತಿರುವ ಮಾದರಿಯ ಸ್ತಬ್ಧಚಿತ್ರದ ಜೊತೆ ನಾನಾ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಅಶೋಕ ವೃತ್ತ, ಆರ್‍ಟಿಓ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆಆರ್ ವೃತ್ತದ ಮೂಲಕ ಪುರಭವನ ಆವರಣದಲ್ಲಿ ಮೆರವಣಿಗೆ ಅಂತ್ಯವಾಯಿತು. ಆದಿ ಕರ್ನಾಟಕದ ಮಹಾ ಸಂಸ್ಥೆಯ ಅಧ್ಯಕ್ಷ ಸಿ.ವಿಜಯಕುಮಾರ್, ಉಪಾಧ್ಯಕ್ಷ ಸಿ.ಎಂ.ಮಹಾಲಿಂಗು, ಕಾರ್ಯದರ್ಶಿ ಎಂ.ಗಂಗಾಧರ್, ಖಜಾಂಚಿ ಎಂ.ಎನ್.ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.

ಮಾನಸ ಗಂಗೋತ್ರಿ: ಮೈಸೂರು ವಿಶ್ವವಿದ್ಯಾಲಯ ಎಸ್‍ಸಿ, ಎಸ್‍ಟಿ ನೌಕರರ ಸಂಘ ವತಿಯಿಂದ ಮಾನಸ ಗಂಗೋತ್ರಿಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂಘ ಅಧ್ಯಕ್ಷ ಪೆÇ್ರ.ದಯಾನಂದ ಮಾನೆ, ಕಾರ್ಯದರ್ಶಿ ಪುರುಷೋತ್ತಮ ಸೇರಿದಂತೆ ವಿದ್ಯಾರ್ಥಿಗಳು ಸಂಘ ಟನೆಗಳು ಕೂಡ ಮಾರ್ಲಾಪಣೆ ಮಾಡಿದರು.

ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ: ಮಹಾರಾಣಿ ಮಹಿಳಾ ಕಲಾ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜು ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಮಾತನಾಡಿದ ಚಿಂತಕ ಡಾ.ಕಾಳೇ ಗೌಡ ನಾಗವಾರ, ಅಂಬೇಡ್ಕರ್ ವಿಚಾರ ಧಾರೆಗಳಿಂದ ಪ್ರಭಾವಗೊಂಡವರಲ್ಲಿ ಗಾಂಧೀಜಿ ಕೂಡ ಒಬ್ಬರು. ಗಾಂಧೀಜಿ ಅವರ ಹರಿಜನ ಪತ್ರಿಕೆ ಆರಂಭಿಸಲು ಅಂಬೇಡ್ಕರ್ ಅವರೇ ಪ್ರೇರಣೆ. ಅಂಬೇಡ್ಕರ್ ದಲಿತ ಸಮುದಾಯಕ್ಕಾಗಿ ಮಾತ್ರ ದುಡಿದಿಲ್ಲ. ಮಹಿಳೆ ಯರು, ಹಿಂದುಳಿದ ವರ್ಗ, ಸಾಮಾನ್ಯ ವರ್ಗ ಸೇರಿ ದಂತೆ ಮಾನವ ಸಂಕುಲ ಘನತೆಯಿಂದ ಬದುಕುವು ದಕ್ಕಾಗಿ ಶ್ರಮಿಸಿದರು. ಅದರಲ್ಲೂ ಮಹಿಳಾ ಸಮಾ ನತೆಗಾಗಿ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಭಾರತದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಲು ಸಾಧ್ಯವಾಗಿದೆ. ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಅಮೆರಿಕವೇ ಇದುವರೆಗೆ ಮಹಿಳಾ ಅಧ್ಯಕ್ಷೆ ಕಾಣಲು ಸಾಧ್ಯವಾಗಿಲ್ಲ. ಆದರೆ ಭಾರತದಲ್ಲಿ ಅದು ಸಾಧ್ಯವಾಗಿದೆ. ಅದಕ್ಕೆ ಅಂಬೇ ಡ್ಕರ್ ಕಾರಣ ಎಂದು ತಿಳಿಸಿದರು.

ಭೀಮ ರಥೋತ್ಸವ: ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕರ ಹಿತರಕ್ಷಣಾ ಸಮಿತಿಯು ಭೀಮ ರಥೋತ್ಸವ ಏರ್ಪಡಿಸಿತ್ತು. ಗಾಂಧಿನಗರದ ಬಸ್‍ನಿಲ್ದಾಣದ ಬಳಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮುಕ್ತ ವಿವಿಯ ನಿವೃತ್ತ ಪ್ರಾಧ್ಯಾಪಕಿ ಮಹದೇವಿ ಮಾತನಾಡಿ, ಅಂಬೇಡ್ಕರ್ ಅವರನ್ನು ಸಂವಿದಾನ ಶಿಲ್ಪಿ ಎಂದು ಮಾತ್ರ ಪರಿಚಯಿಸಿ, ಉಳಿದೆಲ್ಲಾ ಅವರ ಸಾಧನೆಗಳನ್ನು ಮರೆ ಮಾಚ ಲಾಗಿದೆ ಎಂದು ವಿಷಾದಿಸಿದರು. ನಗರ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಶರತ್ ಅಧ್ಯಕ್ಷತೆ ವಹಿಸಿದ್ದರು.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಭಾನುಕುಮಾರ್, ಡ್ರಾಮಾ ಜೂನಿಯರ್ ಖ್ಯಾತಿಯ ಮಹೇಂದ್ರ ಹಾಜರಿದ್ದರು.

ನಂತರ ವಿವಿಧ ಕಲಾತಂಡಗಳೊಂದಿಗೆ ಅಂಬೇ ಡ್ಕರ್ ಅವರ ಬೃಹತ್ ಭಾವಚಿತ್ರದೊಂದಿಗೆ ಮೆರ ವಣಿಗೆಯು ಗಾಂಧಿನಗರದಲ್ಲಿ ಸಂಚರಿಸಿ, ಪ್ರಮುಖ ರಸ್ತೆಗಳ ಮೂಲಕ ಪುರಭವನ ತಲುಪಿತು.

ಅದ್ಧೂರಿ ಮೆರವಣಿಗೆ: ಆದಿ ಕರ್ನಾಟಕ ಮಹಾ ಸಂಸ್ಥೆ ಹಾಗೂ ಯುವ ಸಂಘಟನೆಗಳ ಒಕ್ಕೂಟದ ಸಹ ಯೋಗದಲ್ಲಿ ನಗರದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು. ಅಶೋಕಪುರಂನ ಅಂಬೇಡ್ಕರ್ ಉದ್ಯಾನ ಆವರಣದಲ್ಲಿ ಮೆರವಣಿಗೆಗೆ ಅಶೋಕಪುರಂನ ಹಿರಿಯ ಮುಖಂಡರಾದ ಉಸ್ತಾದ್ ಚಲುವಯ್ಯ, ಸಿದ್ದಯ್ಯ ಚಾಲನೆ ನೀಡಿದರು.

ಸಂಸತ್ತಿನ ಎದುರು ಅಂಬೇಡ್ಕರ್ ನಿಂತಿರುವ ಮಾದರಿಯ ಸ್ತಬ್ಧಚಿತ್ರದ ಜೊತೆ ನಾನಾ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಅಶೋಕ ವೃತ್ತ, ಆರ್‍ಟಿಓ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆಆರ್ ವೃತ್ತದ ಮೂಲಕ ಪುರಭವನ ಆವರಣದಲ್ಲಿ ಮೆರವಣಿಗೆ ಅಂತ್ಯವಾಯಿತು. ಆದಿ ಕರ್ನಾಟಕದ ಮಹಾ ಸಂಸ್ಥೆಯ ಅಧ್ಯಕ್ಷ ಸಿ.ವಿಜಯಕುಮಾರ್, ಉಪಾಧ್ಯಕ್ಷ ಸಿ.ಎಂ.ಮಹಾಲಿಂಗು, ಕಾರ್ಯದರ್ಶಿ ಎಂ.ಗಂಗಾಧರ್, ಖಜಾಂಚಿ ಎಂ.ಎನ್.ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.

ಮಾನಸ ಗಂಗೋತ್ರಿ: ಮೈಸೂರು ವಿಶ್ವವಿದ್ಯಾಲಯ ಎಸ್‍ಸಿ, ಎಸ್‍ಟಿ ನೌಕರರ ಸಂಘ ವತಿಯಿಂದ ಮಾನಸ ಗಂಗೋತ್ರಿಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂಘ ಅಧ್ಯಕ್ಷ ಪೆÇ್ರ.ದಯಾನಂದ ಮಾನೆ, ಕಾರ್ಯದರ್ಶಿ ಪುರುಷೋತ್ತಮ ಸೇರಿದಂತೆ ವಿದ್ಯಾರ್ಥಿಗಳು ಸಂಘ ಟನೆಗಳು ಕೂಡ ಮಾರ್ಲಾಪಣೆ ಮಾಡಿದರು.

ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ: ಮಹಾರಾಣಿ ಮಹಿಳಾ ಕಲಾ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜು ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಮಾತನಾಡಿದ ಚಿಂತಕ ಡಾ.ಕಾಳೇ ಗೌಡ ನಾಗವಾರ, ಅಂಬೇಡ್ಕರ್ ವಿಚಾರ ಧಾರೆಗಳಿಂದ ಪ್ರಭಾವಗೊಂಡವರಲ್ಲಿ ಗಾಂಧೀಜಿ ಕೂಡ ಒಬ್ಬರು. ಗಾಂಧೀಜಿ ಅವರ ಹರಿಜನ ಪತ್ರಿಕೆ ಆರಂಭಿಸಲು ಅಂಬೇಡ್ಕರ್ ಅವರೇ ಪ್ರೇರಣೆ. ಅಂಬೇಡ್ಕರ್ ದಲಿತ ಸಮುದಾಯಕ್ಕಾಗಿ ಮಾತ್ರ ದುಡಿದಿಲ್ಲ. ಮಹಿಳೆ ಯರು, ಹಿಂದುಳಿದ ವರ್ಗ, ಸಾಮಾನ್ಯ ವರ್ಗ ಸೇರಿ ದಂತೆ ಮಾನವ ಸಂಕುಲ ಘನತೆಯಿಂದ ಬದುಕುವು ದಕ್ಕಾಗಿ ಶ್ರಮಿಸಿದರು. ಅದರಲ್ಲೂ ಮಹಿಳಾ ಸಮಾ ನತೆಗಾಗಿ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಭಾರತದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಲು ಸಾಧ್ಯವಾಗಿದೆ. ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಅಮೆರಿಕವೇ ಇದುವರೆಗೆ ಮಹಿಳಾ ಅಧ್ಯಕ್ಷೆ ಕಾಣಲು ಸಾಧ್ಯವಾಗಿಲ್ಲ. ಆದರೆ ಭಾರತದಲ್ಲಿ ಅದು ಸಾಧ್ಯವಾಗಿದೆ. ಅದಕ್ಕೆ ಅಂಬೇ ಡ್ಕರ್ ಕಾರಣ ಎಂದು ತಿಳಿಸಿದರು.

ಭೀಮ ರಥೋತ್ಸವ: ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕರ ಹಿತರಕ್ಷಣಾ ಸಮಿತಿಯು ಭೀಮ ರಥೋತ್ಸವ ಏರ್ಪಡಿಸಿತ್ತು. ಗಾಂಧಿನಗರದ ಬಸ್‍ನಿಲ್ದಾಣದ ಬಳಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮುಕ್ತ ವಿವಿಯ ನಿವೃತ್ತ ಪ್ರಾಧ್ಯಾಪಕಿ ಮಹದೇವಿ ಮಾತನಾಡಿ, ಅಂಬೇಡ್ಕರ್ ಅವರನ್ನು ಸಂವಿದಾನ ಶಿಲ್ಪಿ ಎಂದು ಮಾತ್ರ ಪರಿಚಯಿಸಿ, ಉಳಿದೆಲ್ಲಾ ಅವರ ಸಾಧನೆಗಳನ್ನು ಮರೆ ಮಾಚ ಲಾಗಿದೆ ಎಂದು ವಿಷಾದಿಸಿದರು. ನಗರ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಶರತ್ ಅಧ್ಯಕ್ಷತೆ ವಹಿಸಿದ್ದರು.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಭಾನುಕುಮಾರ್, ಡ್ರಾಮಾ ಜೂನಿಯರ್ ಖ್ಯಾತಿಯ ಮಹೇಂದ್ರ ಹಾಜರಿದ್ದರು.

ನಂತರ ವಿವಿಧ ಕಲಾತಂಡಗಳೊಂದಿಗೆ ಅಂಬೇ ಡ್ಕರ್ ಅವರ ಬೃಹತ್ ಭಾವಚಿತ್ರದೊಂದಿಗೆ ಮೆರ ವಣಿಗೆಯು ಗಾಂಧಿನಗರದಲ್ಲಿ ಸಂಚರಿಸಿ, ಪ್ರಮುಖ ರಸ್ತೆಗಳ ಮೂಲಕ ಪುರಭವನ ತಲುಪಿತು.

April 15, 2019

Leave a Reply

Your email address will not be published. Required fields are marked *