ಕಾಂಗ್ರೆಸ್ ಇಷ್ಟು ವರ್ಷ ಮಾಡಿದ್ದಾದರೂ ಏನು…
ಮೈಸೂರು

ಕಾಂಗ್ರೆಸ್ ಇಷ್ಟು ವರ್ಷ ಮಾಡಿದ್ದಾದರೂ ಏನು…

April 14, 2019

ಬೆಂಗಳೂರು:ಬಡತನ ನಿರ್ಮೂಲನೆ ಮಾಡುವುದಾಗಿ ಈಗ ತನ್ನ ಪ್ರಣಾಳಿಕೆಯಲ್ಲಿ ಭರ ವಸೆ ನೀಡಿರುವ ಕಾಂಗ್ರೆಸ್, ಇಷ್ಟು ವರ್ಷ ಮಾಡಿ ದ್ದಾದರೂ ಏನು? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇಂದು ಬೆಂಗಳೂರು ಅರಮನೆ ಮೈದಾನ ದಲ್ಲಿ ಬೃಹತ್ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಯಲ್ಲಿ `ನ್ಯಾಯ್’ ಯೋಜನೆಯಡಿ ಬಡತನ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಹೇಳಿ ಕೊಂಡಿದೆ. ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿ ಯವರೆಗೆ ಅದು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದರು. ಜಾಮೀನಿನ ಮೇಲೆ ಇರುವವ ರನ್ನು ನಂಬಬೇಡಿ. ಕಾಂಗ್ರೆಸ್‍ಗೆ ಎಲ್ಲವನ್ನೂ ಮಾಡುವಂತಹ ಅವಕಾಶವಿತ್ತು ಅದರೆ ಅವರು ಅದನ್ನು ಬಳಸಿಕೊಳ್ಳಲಿಲ್ಲ. ಇಷ್ಟು ವರ್ಷ ಮಾಡ ಲಾಗದ ಬಡತನ ನಿವಾರಣೆಯನ್ನು ಈಗ ಮಾಡು ತ್ತೇವೆ ಎನ್ನುತ್ತಿದ್ದಾರೆ. ಜಾಮೀನಿನ ಮೇಲೆ ಹೊರಗಿ ರುವವರು ನೀಡುವಂತಹ ಇಂತಹ ಭರವಸೆ ಯನ್ನು ನೀವು ನಂಬುತ್ತೀರಾ? ಎಂದು ಪರೋಕ್ಷ ವಾಗಿ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

ತಾವು ನೀಡಿದ ಮತದಿಂದಲೇ ಭಾರತವು ಇಂದು ವಿದೇಶಗಳಲ್ಲಿ ತಲೆ ಎತ್ತಿ ನಿಲ್ಲುವಂತಾ ಗಿದೆ. ವಿಶ್ವದಾದ್ಯಂತ ಗೌರವ ದೊರೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್‍ನ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ ಮುಂದುವರೆ ಸಿದ ಮೋದಿ, ಗಾಂಧಿ ಕುಟುಂಬದವರು ತಮ್ಮ ಕುಟುಂಬ ಸದಸ್ಯರಿಗೆ ಹಲವು ಸ್ಮಾರಕಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಸೈನ್ಯ ಕೇಳಿದ್ದ ಬುಲೆಟ್ ಫ್ರೂಪ್ ಜಾಕೆಟ್ ಮಾತ್ರ ಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಅದನ್ನು ನೀಡಲು ನಮ್ಮ ಸರ್ಕಾರವೇ ಬರಬೇಕಾಯಿತು ಎಂದು ಹೇಳಿದರು. ಕಾಂಗ್ರೆಸ್‍ನ ಪ್ರಣಾಳಿಕೆ ಯನ್ನು ಕಟುವಾಗಿ ಟೀಕಿಸಿದ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೈನಿಕರ ವಿಶೇಷ ಅಧಿಕಾರವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದೆ. ಕಾಶ್ಮೀರದಿಂದ ಸೈನ್ಯವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುವುದು ಪಾಕಿಸ್ತಾನ ಮಾತನಾಡುವ ಭಾಷೆ ಎಂದು ಹೇಳಿದ ಮೋದಿ, ಇಂತಹ ದೇಶ ವಿರೋಧಿ ಕಾಂಗ್ರೆಸ್ ನಂಬಬೇಡಿ ಎಂದರು.

ನಮ್ಮ ಆಡಳಿತದಲ್ಲಿ ಇದುವರೆಗೆ ಯಾವುದೇ ಸ್ಫೋಟಗಳು ನಡೆದಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವಾರು ಕಡೆ ಸ್ಫೋಟಗಳು ನಡೆದವು. ನಮ್ಮ ಆಡಳಿತದಲ್ಲಿ ಉಗ್ರರ ವಿರುದ್ಧ ಅಂಕುಶ ಹಾಕಿದ್ದೇವೆ. ಮನೆಗೆ ನುಗ್ಗಿ ಹೊಡೆಯುವ ಶಕ್ತಿಯನ್ನು ಸಂಪಾದಿಸಿದ್ದೇವೆ. ಇದೂ ಸಹ ಕಾಂಗ್ರೆಸ್‍ಗೆ ಜೀರ್ಣವಾಗುತ್ತಿಲ್ಲ. ಹಾಗಾಗಿಯೇ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್‍ಗೆ ಅವರು ಸಾಕ್ಷ್ಯ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಜಗತ್ತೇ ಭಾರತದ ಬಗ್ಗೆ ಹೆಮ್ಮೆ ಪಡುವಂತಾಗಿದ್ದು, ಪಾಕಿಸ್ತಾನಕ್ಕೆ ಚೀನಾವೊಂದೇ ಬೆಂಬಲವಾಗಿ ನಿಂತರೆ ಭಾರತದ ಬೆನ್ನಿಗೆ ಇಡೀ ಜಗತ್ತೇ ನಿಂತಿದೆ ಎಂದು ತಿಳಿಸಿದರು.

ಚೌಕಿದಾರನ ಆಡಳಿತದಲ್ಲಿ ಯಾವುದೇ ದಾಳಿ ಆಯಿತಾ ಎಂದು ಪ್ರಶ್ನಿಸಿದ ಮೋದಿ, ಕಳೆದ ಐದು ವರ್ಷದಿಂದ ದೇಶ ಸುಭದ್ರವಾಗಿದೆ. ಉಗ್ರರ ದಾಳಿ ವೇಳೆ ಯುಪಿಎ ಆಡಳಿತದ ಅವಧಿಯಲ್ಲಿ ಗೃಹ ಸಚಿವರು ರಾಜೀನಾಮೆ ನೀಡುತ್ತಿದ್ದರು. ಆದರೆ ನಮ್ಮ ಅವಧಿಯಲ್ಲಿ ಇಂತಹ ಪ್ರಸಂಗಗಳು ಉದ್ಭವಿಸಲು ಅವಕಾಶ ನೀಡಿಲ್ಲ ಎಂದರು. ಕಾಶ್ಮೀರದಲ್ಲಿ ಒಂದು ಸಾವಿರ ಸೈನಿಕರು ಹುತಾತ್ಮರಾದರು. ಆದರೆ ಕಾಶ್ಮೀರದಿಂದ ಸೇನೆಯನ್ನು ಓಡಿಸುತ್ತೇವೆ ಎಂದು ಹೇಳುತ್ತಾರೆ. ನಮ್ಮ ಸೇನಾ ಯೋಧರ ಮೇಲೆ ಕಲ್ಲು ಎಸೆಯುತ್ತಾರೆ. ಭಾರತಕ್ಕೆ ಇಬ್ಬರು ಪ್ರಧಾನಿಗಳ ಅಗತ್ಯ ಇದೆ ಎಂದು ಹೇಳುತ್ತಾರೆ. ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಬೇಕಂತೆ. ಇದೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು. ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ದೇಶದ್ರೋಹಿ ಕಾನೂನು ಹಿಂಪಡೆಯುವುದಾಗಿ ಹೇಳಿದೆ. ವಾಸ್ತವವಾಗಿ ಅದರ ಪ್ರಣಾಳಿಕೆಯೇ ಸುಳ್ಳಿನ ಕಂತೆ. ನಾವು ಯೋಧರ ಅನುಕೂಲಕ್ಕಾಗಿ 1 ರ್ಯಾಂಕ್, 1 ಪೆನ್ಷನ್ ಜಾರಿಗೆ ತಂದಿದ್ದೇವೆ. ಯೋಧರ ಹಿತಾಸಕ್ತಿಯನ್ನು ಕಾಪಾಡಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಮಧ್ಯಮ ವರ್ಗಕ್ಕೆ ಗೃಹ ಸಾಲ ನೀಡುತ್ತಿದ್ದು, ಈ ಹಿಂದೆ 5 ಲಕ್ಷವಿದ್ದ ಈ ಸಾಲದ ಪ್ರಮಾಣವನ್ನು ಈಗ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸ್ಟಾರ್ಟ್ ಅಪ್ ಅಡಿ ಭಾರತ ಸಾಧನೆ ಮಾಡಿದೆ. ಇದಕ್ಕೆ ಬೆಂಗಳೂರು ಕೊಡುಗೆ ಅಪಾರವಾಗಿದೆ ಎಂದು ಹೇಳಿದ ಪ್ರಧಾನಿ, ತಮ್ಮ ಸರ್ಕಾರದ ಅವಧಿಯಲ್ಲಿ ನಡೆಸಲಾದ ಸರ್ಜಿಕಲ್ ದಾಳಿ, ಬಾಹ್ಯಾಕಾಶದಲ್ಲಿ ಶಕ್ತಿ ಮಿಷನ್‍ನಂತಹ ಯಶಸ್ವಿ ಕಾರ್ಯಾಚರಣೆಯಿಂದಾಗಿ ಕಾಂಗ್ರೆಸ್‍ಗೆ ಹೊಟ್ಟೆ ಉರಿ ಹೆಚ್ಚಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ ಎಂದರು.

ಕರ್ನಾಟಕದಲ್ಲಿ ಸೂಪರ್ ಸಿಎಂ, ರಿಮೋಟ್ ಸಿಎಂ
ಬೆಂಗಳೂರು: ಕರ್ನಾಟಕದಲ್ಲಿ ಈಗ ಮುಖ್ಯಮಂತ್ರಿ ಯಾರು ಎಂಬುದೇ ತಿಳಿಯ ದಾಗಿದೆ. ಮೇಲಿನಿಂದ ಒಬ್ಬರು ಸೂಪರ್ ಸಿಎಂ, ಮತ್ತೊಬ್ಬರು ರಿಮೋಟ್ ಸಿಎಂ; ಹಾಗಿದ್ದರೆ ನಿಜವಾದ ಸಿಎಂ ಯಾರು? ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಲೇವಡಿ ಮಾಡಿದರು. ‘ಕಾಂಗ್ರೆಸ್ ಸರಕಾರವಿದ್ದಾಗ ಪ್ರತಿ ಯೋಜನೆಯಲ್ಲೂ, ಹಣಕಾಸು ವ್ಯವಹಾರದಲ್ಲೂ 10 ಪರ್ಸೆಂಟ್ ಕಮಿಷನ್ ಪಡೆಯುತ್ತಿತ್ತು. ಈಗ ಬಂದಿರುವ ದೋಸ್ತಿ ಸರಕಾರ 20 ಪರ್ಸೆಂಟ್ ಸರಕಾರ ಆಗಿಬಿಟ್ಟಿದೆ’ ಎಂದು ಟೀಕಾಸ್ತ್ರ ಪ್ರಯೋಗಿಸಿದರು. ಸಭಿಕರನ್ನುದ್ದೇಶಿಸಿ, ನಿಮ್ಮ ಮನೆ-ಕಚೇರಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದರೆ ನೀವು ಕಾನೂನು ಪಾಲಿಸುತ್ತೀರೊ ಇಲ್ಲವೊ? ಹೇಳಿ. ಆದರೆ, ಇಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದರೆ ದೊಡ್ಡವರು ಪ್ರತಿಭಟನೆಗಿಳಿಯುತ್ತಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಯನ್ನು ಟೀಕಿಸಿದರು. ಅಂದರೆ, ಜನಸಾಮಾನ್ಯರಿಗೊಂದು ಕಾನೂನು, ರಾಜಕೀಯ ಮುಖಂಡರಿಗೊಂದು ಕಾನೂನು ಇದೆಯೆ? ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ ಮುಖ್ಯಮಂತ್ರಿಯಾದರೂ ಸರಿ, ಪ್ರಧಾನ ಮಂತ್ರಿಯಾದರೂ ಸರಿ ಕಾನೂನಿಗೆ ತಲೆಬಾಗಲೇಬೇಕು. ಇಲ್ಲಿನ ಮುಖ್ಯಮಂತ್ರಿ, ಮಂತ್ರಿಗಳು ಐಟಿ ದಾಳಿ ನಡೆದರೆ ಪ್ರಧಾನಿ ಮೋದಿಯೇ ಸೇಡಿನ ದಾಳಿ ನಡೆಸಿದ್ದಾರೆ ಎಂದು ಹುಯಿಲೆಬ್ಬಿಸುತ್ತಾರೆ ಎಂದು ಕಿಡಿಕಾರಿದರು.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ಪೆÇಲೀಸರಿಂದಲೇ ವಿಚಾರಣೆ ಎದುರಿಸಿದ್ದೆ. ತನಿಖಾಧಿಕಾರಿಯ ಕರೆ ಮೇರೆಗೆ ಅವರೆದುರು ಹಾಜರಾಗಿ ಗಂಟೆಗಟ್ಟಲೆ ವಿವರಣೆ ನೀಡಿದ್ದೆ. ಕಳ್ಳರಿಗಷ್ಟೇ ತಾನೇ ಭಯ ಇರುವುದು. ನೀವು ಕದ್ದಿಲ್ಲ ಎಂದಾದರೆ ಯಾವ ಇಲಾಖೆಯ ಅಧಿಕಾರಿ ದಾಳಿ ನಡೆಸಿದರೂ ಭಯಪಡುವ ಅಗತ್ಯವೇ ಇರದು. ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರ, ಸಮರ್ಪಕ ದಾಖಲೆ ಪತ್ರಗಳನ್ನು ನೀಡಿದರೆ ಆಯಿತಲ್ಲವೆ? ಎಂದು ಹೇಳಿದ ಮೋದಿ, ರಾಜ್ಯದ ದೋಸ್ತಿ ಮುಖಂಡರ `ಪ್ರತಿಭಟನಾ ನಡೆ’ಯನ್ನು ತರಾಟೆಗೆ ತೆಗೆದುಕೊಂಡರು.

Translate »