ಮೈಸೂರು: ಚಾಮುಂಡಿಬೆಟ್ಟದ ರಸ್ತೆ ತಿರುವಿನಲ್ಲಿ ಬೈಕ್ ಮತ್ತು ಮಾರುತಿ ಕಾರು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಸುಭಾಷ್‍ನಗರದ ನಿವಾಸಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಗೋಲ್ಡನ್ ಪ್ಯಾಲೇಸ್ ಫಂಕ್ಷನ್ ಹಾಲ್ ಮಾಲೀಕ ಹಾಗೂ ವಕ್ಫ್ ಬೋರ್ಡ್ ಉಪಾಧ್ಯಕ್ಷ ಎ.ಜೆ.ಅಹ್ಮದ್ ಆಶ್ರಫಿ ಅವರ ಪುತ್ರ ಜಿಬ್ರಾನ್ ಹುಸೇನ್ (18) ಮೃತಪಟ್ಟ ಯುವಕ. ಇವರು ಕೆಟಿಎಮ್ ಬೈಕ್‍ನಲ್ಲಿ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಗೇಟ್ ಸಮೀಪದ ತಿರುವಿನಲ್ಲಿ ಬರುತ್ತಿದ್ದಾಗ, ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ…
ಇಬ್ಬರು ಖದೀಮರ ಸೆರೆ: ನಗದು, ಚಿನ್ನಾಭರಣ ವಶ
February 4, 2019ಮೈಸೂರು: ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಂಧಿನಗರ 4ನೇ ಕ್ರಾಸ್ ನಿವಾಸಿ ಮೊಹಮದ್ ಅಬ್ರಾನ್ ಮತ್ತು ಮಂಡಿ ಮೊಹಲ್ಲಾ 8ನೇ ಕ್ರಾಸ್ ನಿವಾಸಿ ಶಾಹೀದ್ ಅಫ್ರೀದ್ ಬಂಧಿತರಾಗಿದ್ದು, ಅವರಿಂದ 62,600 ರೂ. ನಗದು ಹಾಗೂ 35,000 ರೂ. ಬೆಲೆಬಾಳುವ ಪ್ಲಾಟಿನಂ ಮತ್ತು ಚಿನ್ನಾಭರಣ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ…
ರಾಜ್ಯದಲ್ಲಿ ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿ
February 3, 2019ಸುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ವಿಮಾ ಯೋಜನೆಯಿಂದ ರಾಜ್ಯದ ಅನಾರೋಗ್ಯ ಪೀಡಿತರಿಗೆ ಉಪಯೋಗವಾಗದೇ ಇರುವುದನ್ನು ಗಮನಿಸಿ, ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿಗೆ ತರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಗೆ ಆಗಮಿಸಿ, ಇಲ್ಲಿ ಹೊಸದಾಗಿ ನಿರ್ಮಿಸಿರುವ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ವನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೂ ಮಾಡದೆ ಇರುವ ಕಾರ್ಯಕ್ರಮ…
ಸಚಿವ ಡಿಕೆಶಿಗೆ ಬಂಧನ ಭೀತಿ
February 3, 2019ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವ ಕುಮಾರ್ ಅವರಿಗೆ ಕಂಟಕ ಎದುರಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶಿವಕುಮಾರ್ ಮತ್ತು ಈ ಪ್ರಕರಣದ ಇತರ ಆರೋಪಿಗಳಿಗೆ ಖುದ್ದು ದೆಹಲಿ ಕಚೇರಿ ಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಶಿವಕುಮಾರ್, ಆರೋಪಿಗಳಾದ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಮತ್ತು ರಾಜೇಂದ್ರ ದೆಹಲಿಯಲ್ಲಿ ಇಡಿ ಮುಂದೆ ವಿಚಾರಣೆಗೆ…
ನಮ್ಮೂರ ಶಾನುಭೋಗರ ಮಾತು ಕೇಳಿ ಲಾ ಮಾಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲಾ…
February 3, 2019ಸುತ್ತೂರು: ನಾನು ನಮ್ಮೂರಿನ ಶಾನುಭೋಗರ ಮಾತನ್ನು ಕೇಳಿ ಲಾ ಓದದಿದ್ದರೆ ಮುಖ್ಯಮಂತ್ರಿಯಾಗು ತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕಾನೂನು ಪದವಿ ಪಡೆದ ಪರಿಶ್ರಮದ ಹಿಂದಿನ ಕಥೆಯನ್ನು ಬಿಚ್ಚಿಟ್ಟರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಇಂದು ನಡೆದ ರಾಜ್ಯ ಮಟ್ಟದ ಭಜನಾ ಮೇಳವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಕುರುಬರೆಲ್ಲಾ ಲಾ ಓದೋಕಾಗುತ್ತಾ? ಅದೇನಿದ್ದರೂ ಬ್ರಾಹ್ಮಣರ ಕೆಲಸ ಎಂದು ನಮ್ಮೂರ ಶಾನುಭೋಗರು ನಮ್ಮಪ್ಪನಿಗೆ ಹೆದರಿಸಿಬಿಟ್ಟಿದ್ದರು. ನಮ್ಮಪ್ಪ ಶಾನುಭೋಗರ ಮಾತನ್ನೇ ತಪ್ಪದೇ ಕೇಳ್ತಾ ಇದ್ರು. ನಾನು ಲಾ…
ಸುತ್ತೂರು ಜಾತ್ರಾ ಮಹೋತ್ಸವ: ದಾಂಪತ್ಯ ಜೀವನಕ್ಕೆ ಅಡಿಯಿಟ್ಟ 182 ಜೋಡಿ
February 3, 2019ಸುತ್ತೂರು: ಸುತ್ತೂರು ಶ್ರೀ ಕ್ಷೇತ್ರ ಜಾತ್ರಾಮಹೋತ್ಸದವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 182 ಜೋಡಿಗಳು ನಾಡಿನ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ವಾಗದೇ ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹವು ಬಡತನ, ಜಾತಿ, ಅಂಗವೈಕಲ್ಯತೆ, ಪೆÇೀಷಕರ ವಿರೋಧ ಯಾವುದೇ ಅಡ್ಡಿಯಿ ಲ್ಲದೆ ಮಂತ್ರ ಘೋಷದ ನಡುವೆ ನವ ವಧು-ವರರಿಗೆ ವಿವಿಧ ಮಠಾಧೀಶರು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ‘ಬದುಕಿನ ಸುಖ-ದುಃಖಗಳನ್ನು…
ಕೇಂದ್ರ ಬಜೆಟ್ ಸಿಎಂ ಕುಮಾರಸ್ವಾಮಿಗೆ ಅರ್ಥವಾಗದಿದ್ದರೂ ಸಾಮಾನ್ಯ ಜನರಿಗೆ ತಿಳಿದಿದೆ
February 3, 2019ಮೈಸೂರು: ಕೇಂದ್ರ ಬಜೆಟ್ ಅನ್ನು ಟೀಕಿಸಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್‍ಸಿಂಹ, ಕುಮಾರಸ್ವಾಮಿ ಅಂತಹವರಿಗೆ ಬಜೆಟ್‍ನಲ್ಲಿ ಕಲ್ಪಿಸಿರುವ ತೆರಿಗೆ ವಿನಾಯಿತಿ ಮಹತ್ವ ಅರ್ಥ ಆಗುವುದಿಲ್ಲ. ಆದರೆ ಇದರಿಂದ ಅನುಕೂಲ ಪಡೆಯುವ ಸಾಮಾನ್ಯ ಜನರಿಗೆ ಅದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಮಂಡಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಅನುಭವಿ ಚಾರ್ಟರ್ಡ್ ಅಕೌಂಟೆಂಟ್. ಅವರು ಮೊದಲ ಬಾರಿಗೆ ಎಲ್ಲರಿಗೂ ಅನುಕೂಲ…
ಬಡ ರೋಗಿಗಳು ಕೇಂದ್ರದ 5 ಲಕ್ಷ ರೂ.ಗಳ ವೈದ್ಯಕೀಯ ಸೇವೆಯಿಂದ ವಂಚಿತ: ರಾಮದಾಸ್
February 3, 2019ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ `ಆಯುಷ್ಮಾನ್ ಭಾರತ್’ ಯೋಜನೆ ಯನ್ನು ರಾಜ್ಯ ಸರ್ಕಾರದ `ಆರೋಗ್ಯ ಕರ್ನಾ ಟಕ’ ಯೋಜನೆಯಲ್ಲಿ ವಿಲೀನಗೊಳಿಸಿದ್ದರ ಪರಿಣಾಮ ಗೊಂದಲಗಳು ಸೃಷ್ಟಿಯಾಗಿದ್ದು, ಇದರಿಂದ ಬಡ ರೋಗಿಗಳು ಕೇಂದ್ರದ ಯೋಜನೆಯ 5 ಲಕ್ಷ ರೂ.ವರೆಗಿನ ವೈದ್ಯಕೀಯ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡ ಕುಟುಂಬ ಗಳಿಗೆ…
ಮೈಸೂರಲ್ಲಿ ಖಾಲಿ ಜಾಗದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ
February 3, 2019ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಬಿಸಿಲಿನ ತಾಪಕ್ಕೆ ಸಹಜವಾಗಿ ಹುಲ್ಲು, ಗಿಡಗಂಟಿಗಳು ಒಣಗುತ್ತಿವೆ. ಮೈಸೂರು ನಗರದಾದ್ಯಂತ ಬಯಲು, ಮೈದಾನ, ಖಾಲಿ ನಿವೇಶನಗಳು, ರಸ್ತೆ ಬದಿ, ಮಾನಸ ಗಂಗೋತ್ರಿ, ರೆವಿನ್ಯೂ ಬಡಾವಣೆಗಳ ಖಾಲಿ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳು ಒಣಗಿ ರುವುದಲ್ಲದೆ, ಮರಗಳ ಎಲೆಗಳು ಒಣಗಿ ಉದುರಿರುವ ಸ್ಥಳಗಳಲ್ಲಿ ಪಾಲಿಕೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧಿಕಾರಿಗಳು ಅದರಲ್ಲಿ ತೆರವುಗೊಳಿಸ ದಿರುವುದರಿಂದ ಕೆಲ ದುಷ್ಕರ್ಮಿಗಳು ಒಣಗಿದ ಹುಲ್ಲು, ಗಿಡಗಂಟಿಗಳಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬರುತ್ತಿದೆ. ಅದರಿಂದಾಗಿ ಒಣಗಿದ ಗಿಡಗಂಟಿಗಳ ಮಧ್ಯೆ ಇರುವ ಹಸಿರಾದ…
ಕೇಂದ್ರ ಸರ್ಕಾರದ ಶೇ.10ರಷ್ಟು ಮೀಸಲಾತಿ ಖಂಡಿಸಿ ಪ್ರತಿಭಟನೆ
February 3, 2019ಮೈಸೂರು: ಆರ್ಥಿಕ ವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಜಿಲ್ಲಾ ಕಾಯಕ ಸಮಾ ಜದ ಒಕ್ಕೂಟದ ಜಂಟಿ ಆಶ್ರಯದಲ್ಲಿ ಶನಿ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು. ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದವರಿಗೆ ಈಗಿರುವ ಶೇ.50ರಷ್ಟು ಮೀಸಲಾತಿಯನ್ನು…










