ಸುತ್ತೂರು ಜಾತ್ರಾ ಮಹೋತ್ಸವ: ದಾಂಪತ್ಯ  ಜೀವನಕ್ಕೆ ಅಡಿಯಿಟ್ಟ 182 ಜೋಡಿ
ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವ: ದಾಂಪತ್ಯ ಜೀವನಕ್ಕೆ ಅಡಿಯಿಟ್ಟ 182 ಜೋಡಿ

February 3, 2019

ಸುತ್ತೂರು: ಸುತ್ತೂರು ಶ್ರೀ ಕ್ಷೇತ್ರ ಜಾತ್ರಾಮಹೋತ್ಸದವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 182 ಜೋಡಿಗಳು ನಾಡಿನ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ವಾಗದೇ ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹವು ಬಡತನ, ಜಾತಿ, ಅಂಗವೈಕಲ್ಯತೆ, ಪೆÇೀಷಕರ ವಿರೋಧ ಯಾವುದೇ ಅಡ್ಡಿಯಿ ಲ್ಲದೆ ಮಂತ್ರ ಘೋಷದ ನಡುವೆ ನವ ವಧು-ವರರಿಗೆ ವಿವಿಧ ಮಠಾಧೀಶರು ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ‘ಬದುಕಿನ ಸುಖ-ದುಃಖಗಳನ್ನು ನಾವಿಬ್ಬರೂ ಒಂದಾಗಿ ಪರಸ್ಪರ ಅರಿತುಕೊಂಡು, ಪ್ರೀತಿ, ವಿಶ್ವಾಸ ಮತ್ತು ಗೌರ ವಾದರಗಳಿಂದ ಸಮ ಜೀವನ ನಡೆಸುತ್ತೇವೆ. ಹೀಗೆ ಪರಿಶುದ್ಧ ಜೀವನವೇ ನಮ್ಮ ಪರಮ ಧ್ಯೇಯವೆಂದು ಮನಃಪೂರ್ವಕವಾಗಿ ನಡೆ- ನುಡಿಗಳಿಂದ ಅನುಸರಿಸುತ್ತೇವೆÀ’ ಎಂದು ವೇದಿಕೆಯಲ್ಲಿ ಪರಸ್ಪರ ಕೈ ಹಿಡಿದು ನಿಂತಿದ್ದ ನೂತನ ವಧು- ವರರು ಪ್ರತಿಜ್ಞಾ ವಿಧಿ ಸ್ವೀಕರಿ ಸಿದರು. ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಉಜ್ಜಯಿನಿ ಮಠದ ಶ್ರೀಸಿದ್ಧಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ, ಶಾಂತಲಿಂಗೇ ಶ್ವರ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇನ್ಫೋ ಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಸೇರಿದಂತೆ ಇತರ ಸಚಿವರು, ಗಣ್ಯರ ಸಮ್ಮುಖ ದಲ್ಲಿ 182 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.

ಮಠದಿಂದ ನೂತನ ವಧು-ವರರಿಗೆ ಮಾಂಗಲ್ಯ ದೊಂದಿಗೆ ವಸ್ತ್ರವನ್ನು ನೀಡಲಾಯಿತು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಮಾಂಗಲ್ಯವನ್ನು ದಾನವಾಗಿ ನೀಡಿದರು. ಬಳಿಕ ಸಿಎಂ ಕುಮಾರಸ್ವಾಮಿ,

ಶಾಮನೂರು ಶಿವಶಂಕರಪ್ಪ, ಪುತ್ರ ಎಸ್.ಎಸ್.ಗಣೇಶ ಸೇರಿದಂತೆ ಗಣ್ಯರು ಅರಿಶಿನ ದಾರವಿದ್ದ ಮಾಂಗಲ್ಯವನ್ನು ನೀಡಿ, ನೂತನ ವಧು-ವರರರಿಗೆ ಶುಭ ಹಾರೈಸಿದರು. ಇದೇ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ನೂತನ ವಧುಗಳಿಗೆ ಬೆಳ್ಳಿಯ ಕುಂಕುಮ ಬಟ್ಟಲನ್ನು ಉಡುಗೊರೆಯಾಗಿ ನೀಡಿದರು. ಶಾಸಕಿ ಅನಿತಾಕುಮಾರಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರೆ, ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಸಾಂಕೇತಿಕವಾಗಿ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸಿದರು.

ಮೆರವಣಿಗೆ : ಹಸೆಮಣೆಯೇರಲು ವಧು-ವರರು ಹೊಸ ವಸ್ತ್ರಧರಿಸಿ, ಬಾಸಿಂಗ ಕಟ್ಟಿಕೊಂಡು ಸಜ್ಜಾಗಿದ್ದರು. ಸುತ್ತೂರು ಶ್ರೀಮಠದಿಂದ ಸಾಂಸ್ಕøತಿಕ ಕಲಾ ತಂಡ, ಜಾನಪದ ತಂಡಗಳ ಕಲಾವಿದರು, ಛತ್ರಿ ಚಾಮರಗಳೊಂದಿಗೆ 182 ಜೋಡಿ ವಧು-ವರರನ್ನು ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಕರೆತರಲಾಯಿತು. ಬಳಿಕ ಶಾಸ್ತ್ರೋಕ್ತವಾಗಿ 12 ಗಂಟೆಯ ವೇಳೆಗೆ ಗಟ್ಟಿಮೇಳದ ಹಿಮ್ಮೇಳದಲ್ಲಿ ಬಾಳ ಸಂಗಾತಿಗೆ ತಾಳಿ ಕಟ್ಟಿದರು. ಬಳಿಕ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಬಾಗಿನ ಕೊಟ್ಟು, ಊಟೋಪಚಾರ ಕಲ್ಪಿಸಲಾಗಿತ್ತು. ನೂತನ ವಧುವರರ ಜತೆಗೆ ಬಂದಿದ್ದವರು ಮುಯ್ಯಿ ಕೊಟ್ಟು ಆಶೀರ್ವಾದ ಮಾಡಿದರು.

ಈ ವರ್ಷದ ವಿಶೇಷ ಜೋಡಿಗಳು: ಈ ಬಾರಿಯ ಸಾಮೂಹಿಕ ವಿವಾಹದಲ್ಲಿ 184 ಜೋಡಿಗಳು ಹೆಸರು ನೋಂದಾಯಿಸಿದ್ದರು. ಆದರೆ ಒಂದು ಜೋಡಿ ಗೈರು ಹಾಜರಾಗಿದ್ದು, 182 ಜೋಡಿ ಸತಿಪತಿಗಳಾದರು. ಅದರಲ್ಲಿ 18 ವೀರಶೈವ, ಲಿಂಗಾ ಯತ, ಹಿಂದುಳಿದ ವರ್ಗ-23, ಪರಿಶಿಷ್ಟ ಜಾತಿ-119, ಪರಿಶಿಷ್ಟ ಪಂಗಡ-16, ಅಂತರ್ಜಾತಿ-12 ಜೋಡಿ ಸೇರಿವೆ. ಇದರಲ್ಲಿ ಅಂಗವಿಕಲರು ಇದ್ದಾರೆ. ಎರಡು ಜೋಡಿ ವಿಧುರ-ವಿಧವೆಯರು ಸೇರಿದ್ದರೆ, ತಮಿಳುನಾಡು ರಾಜ್ಯದ ಎಂಟು ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ವಿಶೇಷವಾಗಿದೆ.

ವಿಶೇಷ ಚೇತನರು: ಹಾದನೂರು ಗ್ರಾಮದ ಮಂಜುಳಾ ಹಾಗೂ ಬೆಳತ್ತೂರು ಗ್ರಾಮದ ಬಿ.ಎಂ.ರವಿ, ದೇವಲಾಪುರದ ಎಂ.ಸುಗುಣ-ಹಳೇ ಹೆಗ್ಗುಡಿಲು ಗ್ರಾಮದ ಎಸ್. ಮಹದೇವ ಮೂರ್ತಿ, ಮಾದಾಪಟ್ಟಣದ ಎಂ.ಕೆ.ಗೀತಾ-ಉರುಮಕಸಲಗೆರೆಯ ನರಸಿಂಹ ಸ್ವಾಮಿ, ಕಂಚಮಳ್ಳಿಯ ಎಂ.ಅಂಜಲಿ-ತುಕ್ಕಡಿ ಮಾದಯ್ಯನಹುಂಡಿಯ ಎಂ.ರಾಜಶೇಖರ್ ತಮ್ಮ ಬದುಕಿನದಲ್ಲಿ ದಾಂಪತ್ಯಜೀವನಕ್ಕೆ ಕಾಲಿಟ್ಟು, ಕೂಡಿಬಾಳುವ ಸಂಕಲ್ಪ ತೊಟ್ಟರು.

Translate »