ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವರ್ಗಿಯಾಗಿದೆ. ಮೈಸೂರು ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಡಿ.ಉದಯ್‍ಕುಮಾರ್, ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಆ ಸ್ಥಾನದಲ್ಲಿದ್ದ ಶಿವರಾಂ ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿಯಾಗಿ ವರ್ಗಾವರ್ಗಿಯಾಗಿದ್ದಾರೆ. ಚಾಮರಾಜನಗರ ಜಿಲ್ಲಾ ಸರ್ವ ಶಿಕ್ಷಣಾ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಎನ್.ಗುರುಲಿಂಗಯ್ಯ ಮಂಗಳೂರು ಡಯಟ್ ಹಿರಿಯ ಉಪ ನ್ಯಾಸಕರಾಗಿ, ಕೊಡಗು ಜಿಲ್ಲೆಯ ಕೂಡಿಗೆ ಡಯಟ್ ಉಪನ್ಯಾಸಕಿ ಶ್ರೀಶೈಲ ಬೀಳಗಿ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಚಿಕ್ಕಮಗಳೂರು ಡಯಟ್…
ಮೈಸೂರಿನಲ್ಲಿ ನಾಳೆಯಿಂದ ಜ.30ರವರೆಗೆ `ಕಲಾಭಿವರ್ಧನ’ ನೃತ್ಯ, ಸಂಗೀತ ಕಾರ್ಯಕ್ರಮ
January 18, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜ.19ರಿಂದ 30ರವರೆಗೆ `ಕಲಾಭಿವರ್ಧನ-2019′ ಭಾರತೀಯ ಕಲೆಗಳ ಆರಾಧನಾ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಸಂದೇಶ ಪ್ರತಿಷ್ಠಾನದ ಟ್ರಸ್ಟಿ ರಾಧಿಕಾ ಸಂದೇಶ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷವೂ ಕಲಾ ಸಂದೇಶ ಪ್ರತಿಷ್ಠಾನದ ವತಿಯಿಂದ ಕಲಾಭಿವರ್ಧನ ಕಾರ್ಯ ಕ್ರಮ ನಡೆಸಲಾಗುತ್ತಿದ್ದು, ನಾಟ್ಯ ಹಾಗೂ ಸಂಗೀತ ಮೇಳೈಸಲಿದೆ. ಜ.19ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂ ಗಣದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ…
ಬಿವಿಬಿಯಿಂದ ಜ.19, 20ರಂದು ಭವನೋತ್ಸವ
January 18, 2019ಮೈಸೂರು: ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರ, ಕಲಾ ಭಾರತಿ ವಿಭಾಗದ ವತಿಯಿಂದ ಜ.19 ಮತ್ತು 20ರಂದು ಭವ ನೋತ್ಸವ ಹಾಗೂ ಕುಲಪತಿ ಡಾ. ಕೆ.ಎಂ.ಮುನ್ಷಿ ಅವರ 131ನೇ ಜನ್ಮೋತ್ಸವ ವರ್ಷ ಸಮಾರಂಭ ವನ್ನು ಬಿವಿಬಿಯ ಪ್ರೊ. ವೈ.ಟಿ. ತಾತಾಚಾರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜ.19 ರಂದು ಸಂಜೆ 5.30 ಗಂಟೆಗೆ ಸುರಭಿ ಗಾನ ಕಲಾಮಂದಿರದ ನಿರ್ದೇಶಕಿ ಡಾ.ಸುಕನ್ಯಾ ಪ್ರಭಾಕರ್ ಕಾರ್ಯಕ್ರಮ ಉದ್ಘಾ ಟಿಸುವರು. ಭಾರತೀಯ ವಿದ್ಯಾ ಭವನ, ಬೆಂಗಳೂರು ಅಧ್ಯಕ್ಷ ಎನ್.ರಾಮಾನುಜ ಮುಖ್ಯ ಅತಿಥಿಗಳಾಗಿ ಭಾಗ ವಹಿಸಲಿದ್ದು, ಭಾರತೀಯ…
ನಾಳೆ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ
January 17, 2019ಮೈಸೂರು: ಮೈಸೂರಿನ ಪುರಭವನದಲ್ಲಿ ಜ.19ರಂದು ಬೆಳಿಗ್ಗೆ 11.30ಕ್ಕೆ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಮತ್ತು ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೆ ಹಾಗೂ ಸಂಕ್ರಾಂತಿ ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿ ದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ….
ಬಿಜೆಪಿಯ ಆಪರೇಷನ್ ಕಮಲ ವಿಫಲ ದೋಸ್ತಿ ಸರ್ಕಾರ ಅಬಾಧಿತ
January 17, 2019ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸಿದ ಯತ್ನ ವಿಫಲಗೊಂಡಿದ್ದು, ಪಕ್ಷದ ಶಾಸಕರು ಹರಿಯಾಣದ ಗುರುಗ್ರಾಮದಿಂದ ನಗರಕ್ಕೆ ಹಿಂತಿರುಗುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಸದಸ್ಯತ್ವ ತೊರೆದು ಬಿಜೆಪಿ ಬೆಂಬಲಿಸಲು ಮುಂಬೈ ಸೇರಿದಂತೆ ರಾಷ್ಟ್ರದ ವಿವಿಧೆಡೆ ಪ್ರತ್ಯೇಕವಾಗಿ ವಾಸ್ತವ್ಯ ಹೂಡಿದ್ದ ಐವರು ಕಾಂಗ್ರೆಸ್ ಸದಸ್ಯರು ರಾಜಧಾನಿಗೆ ಬರಿಗೈಲಿ ವಾಪಸಾಗುತ್ತಿದ್ದಾರೆ. ಯಾವ ಶಾಸಕರನ್ನು ನೆಚ್ಚಿಕೊಂಡು ದೋಸ್ತಿ ಸರ್ಕಾರ ಕೆಡವಲು ಬಿಜೆಪಿ ಸಂಚು ರೂಪಿಸಿತ್ತೋ ಅದೇ ಶಾಸಕರು ತಮ್ಮ ತಮ್ಮ ಪಕ್ಷಗಳತ್ತ…
ಸಂಕ್ರಾಂತಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಅನಾಹುತ
January 17, 2019ಮೈಸೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಿಚ್ಚು ಹಾಯಿ ಸುವ ವೇಳೆ 25ಕ್ಕೂ ಹೆಚ್ಚು ಮಂದಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಯಾಯ ಜಿಲ್ಲೆಯ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 5 ಮಂದಿ: ತಾಲೂ ಕಿನ ಸಿದ್ದಲಿಂಗಪುರದ ಪುರುಷೋತ್ತಮ್, ಜೀವನ್, ರವಿ, ತಿ.ನರಸೀಪುರದ ಶಿವಕುಮಾರ್, ಶ್ರೀರಂಗಪಟ್ಟಣದ ಮಂಜುನಾಥ್ ಅವರಿಗೆ ಸುಟ್ಟ ಗಾಯಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಶಿವಕುಮಾರ್ ಮತ್ತು ಮಂಜುನಾಥ್ ಅವರು ನಗರದ ಕೆ.ಆರ್.ಆಸ್ಪತ್ರೆ…
20 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿ: ಸಿಂಹ
January 17, 2019ಮೈಸೂರು: 20 ಕೋಟಿ ರೂ. ಅನುದಾನದಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ವಿಶ್ವ ಮಾನವ ರೈಲು ಗಾಡಿಯ ಸೇವೆಯ ಅಂತರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾ ಗಲೇ ಮೈಸೂರು ರೈಲು ನಿಲ್ದಾಣದ ಅಭಿ ವೃದ್ಧಿ, ಹೊಸ ರೈಲು ಗಾಡಿಗಳ ವಿಸ್ತರಣೆ ಹಾಗೂ ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲು ಟರ್ಮಿನಲ್‍ಗಳಂತಹ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಮೈಸೂರು ಕೇಂದ್ರ…
ಜ.29ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
January 17, 2019ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.29ರ ವರೆಗೆ ವಿಸ್ತರಿಸಲಾಗಿದೆ. ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ನ್ಯಾಯಾಧೀಶ ಜಿ.ಬಸವರಾಜು ಅವರ ಮುಂದೆ ಹಾಜರುಪಡಿಸಲಾಯಿತು. ಬಂಧಿತ ನಾಲ್ವರು ಆರೋಪಿಗಳನ್ನು ಮೈಸೂರಿನ ಕಾರಾಗೃಹದಲ್ಲಿ ಇರಿಸಲಾಗಿದ್ದು, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ…
ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಹಂದಿ ಜ್ವರ: ಏಮ್ಸ್ ಆಸ್ಪತ್ರೆಗೆ ದಾಖಲು
January 17, 2019ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಂದಿ ಜ್ವರ ಸೋಂಕು ತಗುಲಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಅಮಿತ್ ಶಾ ಅವರೇ ತಮ್ಮ ಟ್ವಿಟರ್ ಖಾತೆ ಯಲ್ಲಿ ಬರೆದಿದ್ದು, ನನಗೆ ಹಂದಿ ಜ್ವರ ಸೋಂಕು ತಗುಲಿದ್ದು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದೇವರ ಕೃಪೆ ಮತ್ತು ನಿಮ್ಮೆ ಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ಶೀಘ್ರ ಗುಣಮುಖನಾಗಿ ಬರುತ್ತೇನೆ ಎಂದು ಶಾ ಟ್ವೀಟ್ ಮಾಡಿದ್ದಾರೆ. ಇನ್ನು ಇದೇ ವಿಚಾರವಾಗಿ…
ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ
January 17, 2019ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಬೆಳಗ್ಗೆ ಮಠಕ್ಕೆ ವಾಪಸ್ ಕರೆತರಲಾಗಿದೆ. ಶ್ವಾಸಕೋಶದ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳು ಮಠಕ್ಕೆ ಹೋಗಬೇಕೆಂದು ನಿನ್ನೆಯಿಂದ ಹಠ ಹಿಡಿದಿದ್ದರಿಂದ ಇಂದು ಮುಂಜಾನೆ ವೇಳೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಮಠದಲ್ಲಿ ಮುಂದುವರಿಸಲಾಗುವುದು ಎಂದು ಕಿರಿಯ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ರಾತ್ರಿ ಯಿಂದ ಮಠಕ್ಕೆ ಹೋಗುವಂತೆ…










